ಅಳಕೆ: ನಮ್ಮ ದೈನಂದಿನ ಚಟುವಟಿಕೆಗಳೊಂದಿಗೆ ಯೋಗವನ್ನು ಸೇರಿಸಿಕೊಳ್ಳುವುದರಿಂದ ದೈಹಿಕ, ಮಾನಸಿಕ, ಆಧ್ಯಾತ್ಮಿಕ ಬೆಳವಣಿಗೆ ಸಾಧ್ಯ ಹಾಗೂ ಅದು ಆರೋಗ್ಯಕ್ಕೆ ಪೂರಕ ಎಂದು ಮನಪಾ ಮುಖ್ಯ ಸಚೇತಕ ಎಂ. ಶಶಿಧರ ಹೆಗ್ಡೆ ಹೇಳಿದರು.
127ನೇ ಉಚಿತ ಯೋಗ ಶಿಬಿರವನ್ನು ಬ್ಲೂ ಅಂಬ್ರಲ್ಲಾ ಶಾಲೆಯಲ್ಲಿ ಉದ್ಘಾಟಿಸಿ ಅವರು ಮಾತನಾಡಿ, ಬಹಳ ವರ್ಷಗ ಳಿಂದ ಯೋಗಗುರು ಜಗದೀಶ್ ಶೆಟ್ಟಿ ಅವರು ಯೋಗ ತರಬೇತಿ ನೀಡುತ್ತಿ ರುವುದು ಶ್ಲಾಘನೀಯ. ಜನರಿಗೆ ಯೋಗ ದ ಬಗ್ಗೆ ಇನ್ನಷ್ಟು ಮಾಹಿತಿ ನೀಡುವ ಕೆಲಸವಾಗಬೇಕಾಗಿದೆ ಎಂದರು.
ಮುಖ್ಯ ಅತಿಥಿ ದಿನೇಶ್ ಅಮೀನ್ ಮಾತನಾಡಿ, ಯೋಗಾಸನದಿಂದ ದೇಹಕ್ಕೆ ಉತ್ತಮವಾದ ವ್ಯಾಯಾಮ ಹಾಗೂ ಮನಸ್ಸಿಗೆ ಉಲ್ಲಾಸ ದೊರಕುವುದು ಎಂದರು.
ವಕೀಲೆ ಅನಿತಾ ಪಿಂಟೊ, ರಾಧಿಕಾ, ಭಾರತಿ, ಲಕ್ಷಿ$¾à ಭಟ್, ಸುನೀತಾ, ಮಮತಾ, ಶಾಲೆಯ ಪ್ರಾಂಶುಪಾಲೆ ಆಶಾ ಶೆಟ್ಟಿ, ರಮೇಶ್, ಪೂರ್ಣಿಮಾ, ದನೀಶ್ ಮತ್ತು 50 ಮಂದಿ ಶಿಬಿರಾ ರ್ಥಿಗಳು ಭಾಗವಹಿಸಿದ್ದರು.
ಮಧುಮೇಹ, ಬೊಜ್ಜು ಕರಗುವಿಕೆ, ತೂಕ ಕಡಿಮೆ ಮಾಡುವುದು ಥೈರಾ ಯಿಡ್, ಗಂಟುನೋವು, ಬೆನ್ನುನೋವಿಗೆ ಬೇಕಾಗುವಆಸನ, ಮುದ್ರೆಗಳ ಮಾಹಿತಿ, ಆಹಾರ ಸೇವಿಸುವ ಕ್ರಮಗಳ ಬಗ್ಗೆ ತಿಳಿಸಿಕೊಡಲಾಗುವುದು ಎಂದು ಜಗದೀಶ್ ಶೆಟ್ಟಿ ಬಿಜೈ ತಿಳಿಸಿದರು.