ಕಮಲನಗರ: ಇಲ್ಲಿಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ಬೆಂಗಳೂರು ಕಾಯಕಲ್ಪ ಅಧಿಕಾರಿ ಡಾ| ಕೆ. ಪ್ರಕಾಶ ಭೇಟಿ ನೀಡಿ ವ್ಯವಸ್ಥೆ ಪರಿಶೀಲಿಸಿದರು. ನಂತರ ಮಾತನಾಡಿದ ಅವರು, ಆಸ್ಪತ್ರೆ ಸ್ವತ್ಛತೆ ಬಗ್ಗೆ ಮೂರು ತಂಡ ರಚಿಸಲಾಗಿದೆ. ತಾಲೂಕು, ಜಿಲ್ಲಾ ಮಟ್ಟದ ಮತ್ತು ಬೆಂಗಳೂರು ತಂಡ. ಅದರಲ್ಲಿ ಯಾವ ಆರೋಗ್ಯ ಸಮುದಾಯ ಕೇಂದ್ರ ಮತ್ತು ತಾಲೂಕು ಮಟ್ಟದ ಆಸ್ಪತ್ರೆ ಸ್ವತ್ಛತೆಗೆ ಮೊದಲ ಆದ್ಯತೆ ನೀಡುತ್ತದೆಯೋ ಅಂತಹ ಆಸ್ಪತ್ರೆಗೆ ವಿಶೇಷ ಗಮನಹರಿಸಿ 95 ಅಂಕ ಪಡೆದ ಆಸ್ಪತ್ರೆಗೆ 3 ಲಕ್ಷ ರೂ. ಮತ್ತು 75 ಅಂಕ
ಪಡೆದ ಆಸ್ಪತ್ರಗೆ ಸಮಾಧಾನಕರ 1 ಲಕ್ಷ ರೂ. ಆಸ್ಪತ್ರೆ ವಿವಿಧ ಅಭಿವೃದ್ಧಿಗೆ ಹಣ ನೀಡಲಾಗುತ್ತಿದೆ ಎಂದು ಹೇಳಿದರು.
ಬೀದರ ಜಿಲ್ಲೆಯಲ್ಲಿ ಒಟ್ಟು 72 ಆಸ್ಪತ್ರೆಗಳಿವೆ. ಈ ಪೈಕಿ 19 ಆಸ್ಪತ್ರೆಗಳು ಸ್ವತ್ಛತೆಗೆ ಆಯ್ಕೆ ಮಾಡಲಾಗಿದೆ. ಹಂತ-ಹಂತವಾಗಿ ಬೀದರ ಜಿಲ್ಲೆಯ ವಿವಿಧ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಆಸ್ಪತ್ರೆಗಳ ಸ್ವತ್ಛತೆ ಬಗ್ಗೆ ಪರಿಶೀಲಿಸುವುದು ನಮ್ಮ ಉದ್ದೇಶವಾಗಿದೆ ಎಂದು ಹೇಳಿದರು.
ಕಳೆದ ಎರಡು ವರ್ಷಗಳಿಂದ ಪಟ್ಟಣದ ಪುಂಡರು ಮತ್ತು ಸ್ಥಳೀಯ ವ್ಯಾಪಾರಿಗಳ ಖಾಸಗಿ ವಾಹನಗಳ ಹಾವಳಿ ದಿನನಿತ್ಯ ಹೆಚ್ಚಾಗಿದೆ. ಇದರಿಂದ ವಿವಿಧ ಗ್ರಾಮದ ತುರ್ತು ಚಿಕಿತ್ಸೆಗಾಗಿ ಬರುವ ರೋಗಿಗಳಿಗೆ ತೊಂದರೆ ಅನುಭವಿಸುಂತಾಗಿದೆ. ಯಾವುದೇ ಖಾಸಗಿ ವಾಹನ ಆಸ್ಪತ್ರೆ ಆವರಣದಲ್ಲಿ ಬೀಡಲು ಅವಕಾಶ ನೀಡುಬಾರದು ಎಂದು ಆಸ್ಪತ್ರೆ ವೈದ್ಯಾಧಿಕಾರಿ ಡಾ| ರಮೇಶ ಕಾಂಬಳೆ ಅವರಿಗೆ ತಾಕೀತು ಮಾಡಿದರು. ಡಾ| ಮಧುಸೂಧನ, ಡಾ| ಸಿದ್ದರಾಮ, ಡಾ| ಕೆ. ಪಾಟೀಲ ಸೇರಿದಂತೆ ಸಮುದಾಯ ಅರೋಗ್ಯ ಕೇಂದ್ರದ ಸಿಬ್ಬಂದಿ ಇದ್ದರು.