Advertisement

ಅರೋಗ್ಯ ಕೇಂದ್ರದ ಸಮಸ್ಯೆ; ಉದಯವಾಣಿ ಫಲಶ್ರುತಿ : ವರದಿಗೆ ಎಚ್ಚತ್ತ ಅಧಿಕಾರಿಗಳು.!

09:19 PM Dec 09, 2022 | Team Udayavani |

ಕುರುಗೋಡು: ಸಮೀಪದ ಸಿರಿಗೇರಿ ಗ್ರಾಮದ ಪ್ರಾಥಮಿಕ ಅರೋಗ್ಯ ಕೇಂದ್ರದ ಸಮಸ್ಯೆಗಳ ಕುರಿತು ಹಾಗೂ ರೋಗಿಗೆ ಪ್ರಥಮ ಚಿಕಿತ್ಸೆ ದೊರಯದೆ ಮೃತಪಟ್ಟಿರುವ ಕುರಿತು ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಧರಣಿ ನಡೆಸಲಾಗಿತ್ತು. ರಾತ್ರಿ ಸಮಯದಲ್ಲಿ ಖಾಯಂ ವೈದ್ಯರನ್ನು ನೇಮಿಸಬೇಕು, 108 ಆಂಬುಲೆನ್ಸ್ ಸೇವೆ ಒದಗಿಸಬೇಕು, ಹೆಚ್ಚುವರಿ ಮಹಿಳಾ ವೈದ್ಯರನ್ನು ಕಲ್ಪಿಸಬೇಕು ಎಂಬ ಬೇಡಿಕೆಗಳನ್ನು ಇಟ್ಟುಕೊಂಡು ಧರಿಣಿ ನಡೆಸಲಾಗಿತ್ತು. ಅದರಂತೆ ತಾಲೂಕಿನ ಆರೋಗ್ಯ ಅಧಿಕಾರಿ ಪ್ರತಿಭಟನಾಕಾರರಿಗೆ ಸರಿಯಾಗಿ ಸ್ಪಂದನೆ ಮಾಡದ ಕಾರಣ ಡಿಎಚ್ಒ ಬರೋವರೆಗೆ  ಹಿಂಪಡಿಯುವುದಿಲ್ಲ ಎಂದು ಧರಣಿ ಮುಂದುವರಿಸಿದ ವರದಿ ಇಂದು ಉದಯವಾಣಿ ಪ್ರಕಟಿಸಿತ್ತು.

Advertisement

ವರದಿಗೆ ಎಚ್ಚತ್ತ ಅಧಿಕಾರಿಗಳು ಮನವಿ ಸ್ವೀಕರಿಸಿ ಬೇಡಿಕೆಗಳ ಈಡೇರಿಕೆಗೆ ಭರವಸೆ ನೀಡಿದ್ದಾರೆ ಹಾಗೆಯೇ ಕರ್ತವ್ಯ ಲೋಪ ತೋರಿದ ನರ್ಸನ್ನು ಅಮಾನತ್ತು ಮಾಡುವುದಾಗಿ ಕೂಡ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next