Advertisement

ಆರೋಗ್ಯ; ದಾಳಿಂಬೆ ಹಣ್ಣಿನ ರಸ ಮಾತ್ರವಲ್ಲ…ಇದರಲ್ಲಿದೆ ಹಲವು ಔಷಧೀಯ ಗುಣ

10:07 AM Feb 04, 2020 | mahesh |

ದಾಳಿಂಬೆ ಹಣ್ಣನ್ನು ಔಷಧವಾಗಿ ಹಲವಾರು ವರುಷಗಳಿಂದ ಬಳಸಲಾಗುತ್ತಿದೆ. ಇಂದಿಗೂ ಹಲವು ಆರೋಗ್ಯ ಸಮಸ್ಯೆ ನಿವಾರಿಸುವಲ್ಲಿ ಇದು ಸಹಕಾರಿ. ದಾಳಿಂಬೆ ಹಣ್ಣಿನ ರಸ ಅಥವಾ ಅದರ ಬೀಜ ಅಥವಾ ಸಿಪ್ಪೆ   ಪ್ರತಿ ಭಾಗವು ಅದ್ಭುತ ಪ್ರಯೋಜನಗಳನ್ನು ಹೊಂದಿದೆ.

Advertisement

  ದಾಳಿಂಬೆಯಲ್ಲಿದೆ ಕಬ್ಬಿಣದ ಖಜಾನೆ : ದೇಹದಲ್ಲಿ ಹೆಚ್ಚಿನ ಶಕ್ತಿ ತುಂಬಲು ರಕ್ತದಲ್ಲಿ ಕಬ್ಬಿಣದ ಅಂಶ ಇರುವುದು ಅಗತ್ಯ. ದೇಹದಲ್ಲಿ ಕಬ್ಬಿಣದ ಅಂಶ ಹೆಚ್ಚಲು ದಾಳಿಂಬೆ ಸೇವನೆ ಅತ್ಯುತ್ತಮ ಆಯ್ಕೆಯಾಗಿದೆ.

  ಹೃದಯಕ್ಕೆ ಒಳಿತು: ದಾಳಿಂಬೆ ಹಣ್ಣು ರಕ್ತವನ್ನು ತೆಳುವಾಗಿಸುವಲ್ಲಿ ಸಹಾಯ ಮಾಡುತ್ತದೆ. ಹಾಗಾಗಿ ಅನಗತ್ಯ ರಕ್ತ ಹೆಪ್ಪುಗಟ್ಟುವಿಕೆಯನ್ನು ತಡೆಗಟ್ಟುತ್ತದೆ. ಇದರಿಂದ ಹೃದಯ ಸೂಕ್ತ ರೀತಿಯಲ್ಲಿ ಕಾರ್ಯಾಚರಣೆ ಮಾಡುವಂತೆ ಉತ್ತೇಜಿಸುತ್ತದೆ.

ದೇಹದ ಕಾರ್ಯಕ್ಷಮತೆಯನ್ನು ವೃದ್ಧಿಸುತ್ತದೆ: ದಾಳಿಂಬೆ ರಸವು ದೇಹದ ಕಾರ್ಯಕ್ಷಮತೆಯನ್ನು ವೃದ್ಧಿಸುತ್ತದೆ. ಇದು ನೋವನ್ನು ಕಡಿಮೆ ಮಾಡಲು ಮತ್ತು ದೇಹಕ್ಕೆ ಚೈತನ್ಯವನ್ನು ಒದಗಿಸಲು ಸಹಾಯ ಮಾಡುತ್ತದೆ

  ಉತ್ತಮಗೊಳ್ಳುವ ರೋಗನಿರೋಧಕ ಶಕ್ತಿ: ದಾಳಿಂಬೆ ಹಣ್ಣು ರೋಗ ನಿರೋಧಕ ಶಕ್ತಿಯನ್ನು ಉತ್ತಮಪಡಿಸುವುದು. ದೇಹಕ್ಕೆ ಮಾರಕವಾಗುವ ಹಲವು ಕ್ರಿಮಿಗಳನ್ನು ಎದುರಿಸಲು ದೇಹವನ್ನು ಸದೃಢಗೊಳಿಸಲು ದಾಳಿಂಬೆಯಲ್ಲಿ ಹೇರಳವಾಗಿರುವ ವಿಟಮಿನ್ ಸಿ ನೆರವಾಗುತ್ತವೆ.

Advertisement

  ಸಂಧಿವಾತ ತಡೆಯುತ್ತದೆ: ದಾಳಿಂಬೆ ಹಣ್ಣು ಸೇವಿಸುವುದರಿಂದ ಸಂಧಿವಾತವನ್ನು ತಡೆಗಟ್ಟಬಹುದು. ಅದಕ್ಕೆ ಕಾರಣ ಈ ಹಣ್ಣಿನಲ್ಲಿರುವ ಉರಿಯೂತದ ವಿರೋಧಿ ಲಕ್ಷಣಗಳು.

  ಅಲರ್ಜಿಗೆ ನೈಸರ್ಗಿಕ ಪ್ರತಿರೋಧಿಯಾಗಿದೆ: ಹಲವರಿಗೆ ಕೆಲವು ವಸ್ತುಗಳಿಂದ ಅಲರ್ಜಿಯುಂಟಾಗುತ್ತದೆ ಈ ಅಲರ್ಜಿಯನ್ನು ಪ್ರತಿರೋಧಿಸುವ ಅಂಶ ದಾಳಿಂಬೆ ಹಣ್ಣಿನಲ್ಲಿರುದರಿಂದ ಇದರ ಸೇವನೆ ಅತ್ಯುತ್ತಮ .

  ಹೊಟ್ಟೆ ತುಂಬಿಸುತ್ತದೆ: ದಾಳಿಂಬೆ ಹಣ್ಣಿನಲ್ಲಿ ಆಹಾರದ ನಾರಿನಂಶ ಹೆಚ್ಚಿರುತ್ತದೆ. ಇದರಿಂದ ಈ ಹಣ್ಣನ್ನು ಸೇವಿಸಿದರೆ ಹೊಟ್ಟೆ ಹಸಿವು ತಣಿದು, ಹೊಟ್ಟೆ ತುಂಬಿದ ಭಾವವನ್ನು ನೀಡುತ್ತದೆ.

  ಜೀರ್ಣಕ್ರಿಯೆಯನ್ನು ನಿಧಾನಿಸುತ್ತದೆ: ನಾರಿನಂಶ ಜೀರ್ಣಕ್ರಿಯೆಯನ್ನು ನಿಧಾನಿಸುವುದರೊಂದಿಗೆ, ಕರುಳಿನಲ್ಲಿ ಆಹಾರ ಹೀರುವಿಕೆಯನ್ನು ಕಡಿಮೆಗೊಳಿಸುತ್ತದೆ. ಹಾಗಾಗಿ ಇದು ಅನಗತ್ಯ ಆಹಾರ ಸೇವನೆಯನ್ನು ತಡೆಗಟ್ಟುತ್ತದೆ. ಇದು ತೂಕ ನಿಭಾಯಿಸುವವರಿಗೆ ಸೂಕ್ತವಾದ ಹಣ್ಣು.

  ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ: ದಾಳಿಂಬೆ ಹಣ್ಣಿನಲ್ಲಿ ಆ್ಯಂಟಿಓಕ್ಸಿಡಾಂಟ್ಸ್ ಹೆಚ್ಚಾಗಿದ್ದು, ರೋಗ ನಿರೋಧಕ ಶಕ್ತಿಯನ್ನು ವರ್ಧಿಸುತ್ತದೆ. ಇದು ಎಲ್ಲಾ ಬಗೆಯ ವೈರಸ್ ಮತ್ತು ಬ್ಯಾಕ್ಟೀರಿಯಾ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡುತ್ತದೆ.

  ಮೊಡವೆಗಳನ್ನು ನಿವಾರಿಸುತ್ತದೆ: ಉರಿಯೂತದ ವಿರೋಧಿ ಗುಣದಿಂದ ದಾಳಿಂಬೆ ಮೊಡವೆಗಳನ್ನು ನಿವಾರಿಸುವಲ್ಲಿ ಸಹಾಯ ಮಾಡುತ್ತದೆ. ದಾಳಿಂಬೆ ಬೀಜಗಳನ್ನು ಅರಿಶಿನದೊಂದಿಗೆ ಪುಡಿಮಾಡಿ ಮೊಡವೆಗಳಾಗಿರುವ ಸ್ಥಳಕ್ಕೆ ಲೇಪಿಸುದರಿಂದ ಮೊಡವೆಗಳನ್ನು ನಿವಾರಿಸಬಹುದು

Advertisement

Udayavani is now on Telegram. Click here to join our channel and stay updated with the latest news.

Next