Advertisement
ತುಳಸಿಯ ಔಷಧೀಯ ಉಪಯೋಗ:ಪ್ರತಿದಿನ ತುಳಸಿ ಎಲೆಗಳನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಜಗಿದು ತಿನ್ನುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಇದರ ಎಲೆಗಳಿಂದ ತಯಾರಿಸಿದ ಸುಗಂಧ ತೈಲವು ಬ್ಯಾಕ್ಟೀರಿಯಾ ನಿರೋಧಕ ಗುಣ ಹೊಂದಿದೆ.
ತುಳಸಿ ಎಲೆಗಳನ್ನು ಸೇವಿಸುವುದರಿಂದ ಜ್ವರ ಹಾಗೂ ಶೀತ ಕಡಿಮೆಯಾಗುತ್ತದೆ. ಸ್ವಲ್ಪ ತುಳಸಿ ಎಲೆಗಳನ್ನು ಚಹಾದೊಂದಿಗೆ ಕುದಿಸಿ ಕುಡಿಯುವುದರಿಂದ ಮಲೇರಿಯಾ ಹಾಗೂ ಡೆಂಗ್ಯೂ ಜ್ವರ ಉಪಶಮನವಾಗುತ್ತದೆ. ಹಾಗೆಯೇ ತುಳಸಿ ರಸ ಜ್ವರವನ್ನು ತಗ್ಗಿಸುವಲ್ಲಿ ಸಹಕಾರಿಯಾಗಿದ್ದು, ಇದರ ಎಲೆಯನ್ನು ಜಗಿಯುವುದರಿಂದ ಶೀತ ಹಾಗೂ ಕೆಮ್ಮು ನಿವಾರಣೆಯಾಗುತ್ತದೆ.
Related Articles
ಜೀರ್ಣಶಕ್ತಿ ಉತ್ತಮವಾಗಿದ್ದರೆ ಮನುಷ್ಯ ಆರೋಗ್ಯವಾಗಿ ಇರುತ್ತಾನೆ. ಹೀಗಾಗಿ ತುಳಸಿ ಎಲೆಗಳನ್ನು ಸೇವಿಸಿ ಜೀರ್ಣಶಕ್ತಿಯನ್ನು ವೃದ್ಧಿಸಿಕೊಂಡು ಆರೋಗ್ಯವಾಗಿ ಇರಬಹುದು.
Advertisement
ತಲೆನೋವಿಗೆ ಉಪಶಮನ ನೀಡುತ್ತದೆ:ತುಳಸಿ ರಸವನ್ನು ಗಂಧದೊಂದಿಗೆ ತೇಯ್ದು ನೆತ್ತಿಗೆ ಹಚ್ಚುವುದರಿಂದ ತಲೆನೋವು ದೂರವಾಗುತ್ತದೆ. ಹೀಗಾಗಿ ಅನೇಕ ತಲೆನೋವು ಔಷಧಿಗಳಲ್ಲಿ ತುಳಸಿ ಎಲೆಗಳನ್ನು ಬಳಸಲಾಗುತ್ತದೆ. ತುಳಸಿ ಎಲೆಯ ರಸವನ್ನು ಎಣ್ಣೆಯಲ್ಲಿ ಕಾಯಿಸಿ ತಲೆಗೆ ಹಚ್ಚುವುದರಿಂದ ತಲೆಯಲ್ಲಿನ ಹೇನು, ಹೊಟ್ಟು ಬರುವಿಕೆ ಕೂಡಾ ನಿವಾರಣೆಯಾಗುತ್ತದೆ. ಕೆಮ್ಮು,ಉಸಿರಾಟದ ತೊಂದರೆಗಳು:
ಉಸಿರಾಟದ ವ್ಯವಸ್ಥೆಗೆ ತುಲಸಿ ಒಂದು ಅಮೃತ ಸಮಾನ, ಈಗ ಮಾರುಕಟ್ಟೆಯಲ್ಲಿರುವ ಮುಕ್ಕಾಲು ಭಾಗ ಕಾಫ಼್ ಸಿರಪ್ ಗಳಲ್ಲಿ ತುಳಸಿಯನ್ನು ಉಪಯೋಗಿಸಲಾಗಿರುತ್ತದೆ. ತುಳಸಿಯೊಂದಿಗೆ ಜೇನುತುಪ್ಪ ಮತ್ತು ಶುಂಠಿ ರಸದ ಮಿಶ್ರಣವು ಅದ್ಭುತವಾಗಿ ಕೆಲಸ ಮಾಡುತ್ತದೆ. ಬಾಯಿ ಹುಣ್ಣು ನಿವಾರಿಸುತ್ತದೆ:
ಬಾಯಿಯಲ್ಲಿ ಹುಣ್ಣು ಮತ್ತು ಸೋಂಕುಗಳಿಗೆ ತುಳಸಿ ಎಲೆಗಳು ತುಂಬಾ ಪರಿಣಾಮಕಾರಿ. ಹದಿಹರೆಯದವರನ್ನು ಕಾಡುವ ಮೊಡವೆ ಯಾ ಸಮಸ್ಯೆಗಳಿಗೆ ತುಳಸಿ ಎಲೆಯನ್ನು ಅರೆದು ರಸವನ್ನು ಲೇಪಿಸಬೇಕು. ಊರಿ ಮೂತ್ರದ ತೊಂದರೆ ಇರುವಾಗ ತುಳಸಿ ಎಲೆಯ ರಸವನ್ನು ಹಾಲು ಸಕ್ಕರೆಯೊಂದಿಗೆ ಬೆರೆಸಿ ಕುಡಿಯಬೇಕು ಮಕ್ಕಳಲ್ಲಿ ಕಫದ ಸಮಸ್ಯೆ ಕಂಡು ಬಂದಲ್ಲಿ ತುಳಸಿ ಎಲೆಯ ರಸವನ್ನು ಜೇನು ತುಪ್ಪದೊಂದಿಗೆ ಬೆರೆಸಿ 2 3 ಗಂಟೆಗಳಿಗೊಮ್ಮೆ ಕುಡಿಸಿದರೆ ಕಫದ ಪ್ರಮಾಣ ಕಡಿಮೆಯಾಗುತ್ತದೆ. ಚಿಕ್ಕ ಮಕ್ಕಳಲ್ಲಿ ಹೊಟ್ಟೆ ನೋವು ಕಾಣಿಸಿಕೊಂಡಲ್ಲಿ ತುಳಸಿ ರಸದೊಂದಿಗೆ ಶುಂಠಿ ರಸ ಹಾಗು ಜೇನು ತುಪ್ಪ ಬೆರೆಸಿ ಕುಡಿಸಬೇಕು. ಹೀಗಿ ಸಾಕಷ್ಟು ಆರೋಗ್ಯಕರ ಅಂಶವನ್ನು ತುಳಸಿ ತನ್ನಲ್ಲಿ ಬಚ್ಚಿಟ್ಟುಕೊಂಡಿದೆ. ಹೀಗಾಗಿ ನಿಮ್ಮ ದಿನನಿತ್ಯದ ಆಹಾರದಲ್ಲಿ ಮಿತವಾಗಿ ತುಳಸಿ ಬಳಸಿ, ಆರೋಗ್ಯವನ್ನು ಕಾಯ್ದುಕೊಳ್ಳಿ.