Advertisement
ಹಿಂದೂ ಧರ್ಮದಲ್ಲಿ ತುಳಸಿಗೆ ಹೆಚ್ಚಿನ ಸ್ಥಾನವಿದೆ. ಪ್ರತಿಯೊಂದು ಪೂಜೆ ಪುನಸ್ಕಾರಗಳಲ್ಲಿ ಶುದ್ಧತೆಯ ಸಂಕೇತವಾಗಿ ತುಳಸಿಯನ್ನು ಹೆಚ್ಚಾಗಿಯೇ ಬಳಸುತ್ತಾರೆ. ವಾಸ್ತು ಕೂಡ ತುಳಸಿಗೆ ಪೂಜನೀಯ ಸ್ಥಾನವನ್ನು ನೀಡಿದೆ. ಈ ಗಿಡವನ್ನು ಮನೆಯ ಮುಂದುಗಡೆ ಬೆಳೆಸುವುದರಿಂದ ಮನೆಯವರೆಲ್ಲರಿಗೂ ಒಳಿತಾಗುತ್ತದೆ ಎಂಬ ವಿಶ್ವಾಸ ಕೂಡ ನಮ್ಮಲಿದೆ. ವೈದ್ಯಕೀಯ ಕ್ಷೇತ್ರದಲ್ಲೂ ತುಳಸಿಯು ಹಲವಾರು ಅದ್ಬುತಗಳನ್ನು ಮಾಡಿದೆ.ತುಳಸಿ ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಬೆಳೆಯುವ ದೈವಿಕ ಸಸ್ಯ. ತುಳಸಿ ಧಾರ್ಮಿಕವಾಗಿ ಮಾತ್ರವಲ್ಲದೆ, ಔಷಧೀಯ ಗುಣಗಳನ್ನು ಹೊಂದಿದೆ.
• ಕಿಡ್ನಿಕಲ್ಲಿನ ಸಮಸ್ಯೆ ಇರುವವರು ತುಳಸಿ ರಸವನ್ನು ಜೇನಿನೊಂದಿಗೆ ನಿಯಮಿತವಾಗಿ ಸೇವಿಸುವುದರಿಂದ ಈ ಸಮಸ್ಯೆಯಿಂದ ಪರಿಹಾರ ಕಂಡುಕೊಳ್ಳಬಹುದು.
• ತುಳಸಿ ಬೊಜ್ಜನ್ನು ನಿಯಂತ್ರಿಸುವುದಲ್ಲದೆ ರಕ್ತದಲ್ಲಿನ ಕೊಬ್ಬಿನಂಶವನ್ನು ನಿಯಂತ್ರಿಸುತ್ತದೆ.
• ತುಳಸಿ ರಸವನ್ನು ಗಂಧದೊಂದಿಗೆ ತೇಯ್ದು ನೆತ್ತಿಗೆ ಹಚ್ಚುವುದರಿಂದ ತಲೆನೋವು ಕಡಿಮೆಯಾಗುತ್ತದೆ.
• ತುಳಸಿ ಎಲೆಯನ್ನು ಪ್ರತಿ ದಿನ ತಿಂದರೆ ಹಲವು ಸೋಂಕು ಮತ್ತು ರೋಗವನ್ನು ದೂರವಿರಿಸಬಹುದು . ಇದರ ಸೇವನೆಯಿಂದ ಜ್ಞಾಪಕ ಶಕ್ತಿಯೂ ಹೆಚ್ಚಾಗಿ ಬುದ್ಧಿವಂತಿಕೆಯೂ ಚುರುಕುಗೊಳ್ಳುತ್ತದೆ.
• ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತುಳಸಿ ರಸವನ್ನು ನೀರಿನೊಂದಿಗೆ ಬೆರೆಸಿ ಸೇವಿಸಿದರೆ ತ್ವಚೆಯ ಹೊಳಪು ಹೆಚ್ಚುತ್ತದೆ.
• ಹಲ್ಲು ಗಳಲ್ಲಿ ಊತ ಇರುವವರು ಇದರ ಎಲೆಯನ್ನು ನೋವಿರುವ ಹಲ್ಲಿನ ಕೆಳಗೆ ಇರಿಸಿ ಇದರಿಂದ ಹಲ್ಲು ನೋವು ಕಡಿಮೆಯಾಗುತ್ತದೆ.
• ತುಳಸಿ ಬೀಜದ ಪುಡಿ ಮತ್ತು ಅದರ ಬೇರಿನ ಪುಡಿಯನ್ನು ಸಮಾನ ಪ್ರಮಾಣದಲ್ಲಿ ತೇಯ್ದು ಹಸುವಿನ ಹಾಲಿನೊಂದಿಗೆ ಸೇವಿಸುವುದರಿಂದ ದುರ್ಬಲತೆ ಕಡಿಮೆಯಾಗುತ್ತದೆ.
• 2 ರಿಂದ 4 ಗ್ರಾಂ ತುಳಸಿಯನ್ನು ಪುಡಿ ಮಾಡಿ ಹಾಲಿನೊಂದಿಗೆ ಸೇವಿಸುವುದರಿಂದ ಮೂಳೆ ಸಮಸ್ಯೆಯಿಂದ ಪರಿಹಾರ ಕಂಡುಕೊಳ್ಳಬಹುದು.
ದೈವಿಕ ಸ್ಥಾನ ಹೊಂದಿರುವ ತುಳಸಿಯು ಆರೋಗ್ಯದಾಯಕವಾಗಿಯೂ ಬಹಳಷ್ಟು ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ.