Advertisement

ಕಹಿ, ಕಹಿ ಹಾಗಲಕಾಯಿ…ಆರೋಗ್ಯಕ್ಕೆ ಹಲವು ಸಿಹಿ ಉಪಯೋಗವಿದೆ!

05:59 PM Jun 01, 2020 | mahesh |

ಹಿತ್ತಲ ಗಿಡ ಮನೆ ಮದ್ದು ಎಂಬಂತೆ ಪುಕ್ಕಟೆಯಾಗಿ ಮನೆಯ ಅಂಗಳದಲ್ಲಿ ನಾವೇ ಉಣಿಸಿದ ನೀರು ಮತ್ತು ಗೊಬ್ಬರದಿಂದ ಬೆಳೆಯುವ ಈ ಸಸ್ಯ ನಮ್ಮ ಆರೋಗ್ಯದಲ್ಲಿ ತನ್ನ ಕಹಿಯ ಸ್ವಭಾವದಿಂದಲೇ ಅದ್ಬುತ ಚಮತ್ಕಾರವನ್ನೇ ಮಾಡುತ್ತದೆ.

Advertisement

ಹಾಗಲಕಾಯಿಯ ಹಲವು ರೀತಿಯಲ್ಲಿ ನಮ್ಮ ದೇಹಕ್ಕೆ ಉತ್ತಮವಾಗಿದೆ.

ರಕ್ತ ಶುದ್ಧೀಕರಣ: ರಕ್ತಕ್ಕೆ ಸಂಬಂಧಿಸಿದ ಅನೇಕ ತೊಂದರೆಗಳನ್ನು ನೀಗಿಸುವಲ್ಲಿ ಹಾಗಲಕಾಯಿಯದು ಮೊದಲ ಸ್ಥಾನ. ನಿಂಬೆಹಣ್ಣು ಮತ್ತು ಸ್ವಲ್ಪ ಜೇನಿನೊಂದಿಗೆ ಇದನ್ನು ಸೇವಿಸುತ್ತ ಬಂದರೆ ಕ್ರಮೇಣ ರಕ್ತ ಶುದ್ಧಿಯಾಗುತ್ತದೆ.

ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ:
ಕಹಿ ಹಾಗಲಕಾಯಿ ರಸವು ಪ್ರಕೃತಿಯಲ್ಲಿ ಉರಿಯೂತದ ಮತ್ತು ದೇಹದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಹೃದಯಾಘಾತ ಮತ್ತು ಪಾರ್ಶ್ವವಾಯು ನಂತಹ ಅಪಾಯವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ.

ಅಪಾಯಕಾರಿ ರೋಗಗಳ ತಡೆಗೆ ಇದು ರಾಮಬಾಣ: ಕಾಲರಾ, ಜಾಂಡೀಸ್ ನಂತಹ ಅಪಾಯಕಾರಿ ರೋಗಗಳ ತಡೆಗೆ ಇದು ರಾಮಬಾಣ. ಅಷ್ಟೇ ಅಲ್ಲ, ಹುಳುಕಡ್ಡಿ ಮುಂತಾದ ಅಲರ್ಜಿ ಸಂಬಂಧಿತ ಕಾಯಿಲೆಗಳನ್ನು ಅತಿ ಬೇಗ ಗುಣಪಡಿಸುತ್ತದೆ.

Advertisement

ಮಧುಮೇಹ: ಕಹಿಯಾದ ಹಾಗಲಕಾಯಿಯಲ್ಲಿನ ಹೈಪೊಗ್ಲೈಸಮಿಕ್ ಎಂಬ ನೈಸರ್ಗಿಕ ಇನ್ಸುಲಿನ್ ರಕ್ತದಲ್ಲಿನ ಸಕ್ಕರೆ ಅಂಶವನ್ನು ತಗ್ಗಿಸುವುದಲ್ಲದೆ, ರಕ್ತಕ್ಕೆ ಗ್ಲೂಕೋಸ್ ನೀಡಿ ಸಾಮರ್ಥ್ಯ ಹೆಚ್ಚುವಂತೆ ಮಾಡುತ್ತದೆ.

ರೋಗ ರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ: ಸೋಂಕುಗಳ ವಿರುದ್ಧ ಹೋರಾಡಲು, ಹಾಗಲಕಾಯಿ ಗಿಡದ ಎಲೆಗಳನ್ನು ಅಥವಾ ಹಣ್ಣುಗಳನ್ನು ನೀರಿನಲ್ಲಿ ಕುಡಿಸಿ ಪ್ರತಿದಿನ ಸೇವಿಸಿರಿ. ಇದು ನಿಮ್ಮ ರೋಗನಿರೋಧಕ ಶಕ್ತಿಯ ವರ್ಧನೆಗೆ ಸಹಕಾರಿ.

ಕಣ್ಣುಗಳಿಗೆ ಒಳ್ಳೆಯದು : ಪ್ರತಿ ದಿನ ಹಾಗಲಕಾಯಿ ಜ್ಯೂಸ್ ಕುಡಿಯುವುದರಿಂದ ಕಣ್ಣಿನ ಪೊರೆಗಳಂತಹ ದೃಷ್ಟಿಗೆ ಸಂಬಂಧಿಸಿದ ಸಮಸ್ಯೆಗಳನ್ನು ತಡೆಯಲು ಸಹಾಯ ಮಾಡುತ್ತದೆ, ಏಕೆಂದರೆ ಇದರಲ್ಲಿ ಕಣ್ಣಿನ ಆರೋಗ್ಯಕ್ಕೆ ಅಗತ್ಯವಾಗಿ ಬೇಕಾಗಿರುವ ಬೀಟಾ   ಕ್ಯಾರೋಟಿನ್ ಮತ್ತು ವಿಟಮಿನ್ ‘ ಎ ‘ ನಂತಹ ಸಂಯುಕ್ತಗಳು ಸೇರಿವೆ.

ಚರ್ಮ ಮತ್ತು ಕೂದಲಿನ ಆರೋಗ್ಯವನ್ನು ಸುಧಾರಿಸುತ್ತದೆ : ಕಹಿ ಹಾಗಲಕಾಯಿ ಶಕ್ತಿಯುತವಾದ ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿರುವುದರಿಂದ ಅಕಾಲಿಕ ಚರ್ಮದ ವಯಸ್ಸು ಹೆಚ್ಚಾಗುವಿಕೆಯನ್ನು ತಡೆಯುತ್ತದೆ ಮತ್ತು ಇದು ಚರ್ಮದ ಸುಕ್ಕುಗಳನ್ನು ಕಡಿಮೆ ಮಾಡುತ್ತದೆ.

ಮಧುಮೇಹಕ್ಕೆ ಅತ್ಯುತ್ತಮ : ಹಾಗಲಕಾಯಿ ರಸವು ಮಧುಮೇಹಕ್ಕೆ ಅತ್ಯುತ್ತಮ ನೈಸರ್ಗಿಕ ಮತ್ತು ಆಯುರ್ವೇದಿಕ ಔಷಧವಾಗಿದೆ. ಮತ್ತು ಇದರ ತಾಜಾ ರಸವನ್ನು ಬೆಳಿಗ್ಗೆ ಬೇಗನೆ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ನಮ್ಮ ದೇಹದ ಎಲ್ಲಾ ನರನಾಡಿಗಳಲ್ಲಿ ಸಂಚರಿಸಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಇದ್ದಕ್ಕಿದಂತೆ ತೂಕ ಹೆಚ್ಚಾಗುವ, ಅಧಿಕ ರಕ್ತದ ಒತ್ತಡದಿಂದ ಬಳಲುವ, ಹೃದ್ರೋಗ, ಅಧಿಕ ಕೊಲೆಸ್ಟ್ರಾಲ್ ಮುಂತಾದ ಮಧುಮೇಹ ಸಂಬಂಧಿತ ಆರೋಗ್ಯ ಸಮಸ್ಯೆಗಳ ಸಾಧ್ಯತೆ ಉಂಟಾಗುವುದನ್ನು ಕಡಿಮೆ ಮಾಡುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next