Advertisement
ಅಂತಹ ಕರಿಬೇವಿನ ಸೊಪ್ಪು ಆಹಾರದ ರುಚಿಯನ್ನು ಹೆಚ್ಚಿಸುತ್ತದೆ ಮಾತ್ರವಲ್ಲ, ಇದು ಆರೋಗ್ಯಕ್ಕೂ ಒಳ್ಳೆಯದು. ಕರಿಬೇವು ಅಡುಗೆಯಲ್ಲಿ ಬಳಸಿದರೂ ಸೇವಿಸುವಾಗ ಅದನ್ನು ಬದಿಗೆ ಸರಿಸಿ ಬಿಸಾಡುವವರು ಅಧಿಕ ಮಂದಿ. ಕರಿಬೇವಿನ ಎಲೆಗಳ ಪ್ರಯೋಜನಗಳ ಬಗ್ಗೆ ತಿಳಿದರೆ ನೀವು ಮುಂದೆ ಕರಿಬೇವು ಸೇವಿಸುವ ಅಭ್ಯಾಸ ರೂಢಿಸಿಕೊಳ್ಳಬಹುದು.
Related Articles
Advertisement
ಕೊಲೆಸ್ಟ್ರಾಲ್ ನಿಯಂತ್ರಣ: ನಮ್ಮ ದಿನನಿತ್ಯದ ಆಹಾರದಲ್ಲಿ ಕರಿಬೇವಿನ ಬಳಕೆ ದೇಹದಲ್ಲಿನ ಕೊಲೆಸ್ಟ್ರಾಲ್ನ್ನು ನಿಯಂತ್ರಿಸುತ್ತದೆ. ಕರಿಬೇವಿನ ಎಲೆಗಳನ್ನು ಜಗಿಯುವುದು ಕೂಡಾ ತೂಕ ಮತ್ತು ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಕಣ್ಣಿನ ಆರೋಗ್ಯ: ಕರಿಬೇವಿನ ಸೊಪ್ಪಿನಲ್ಲಿ ವಿಟಮಿನ್ ಎ ಪೋಷಕಾಂಶ ಇರುವುದರಿಂದ ಕಣ್ಣಿನ ದೃಷ್ಟಿ ಹೆಚ್ಚಿಸಲು ಸಹಾಯ ಮಾಡುತ್ತದೆ. ಕರಿಬೇವಿನ ಎಲೆಗಳನ್ನು ತಿನ್ನುವುದರಿಂದ ಇರುಳು ಕುರುಡುತನ ನಿವಾರಣೆಯಾಗುತ್ತದೆ. ಅದರೊಂದಿಗೆ ಕಣ್ಣುಗಳಿಗೆ ಸಂಬಂಧಿಸಿದ ಇತರ ಅನೇಕ ಕಾಯಿಲೆಗಳನ್ನು ತಡೆಯುತ್ತದೆ.
ಚರ್ಮದ ಕಾಂತಿ ಹೆಚ್ಚಿಸಲು: ಕರಿಬೇವಿನ ಎಲೆಗಳಲ್ಲಿರುವ ಗುಣಗಳು ಚರ್ಮದ ಕಾಂತಿ ಹೆಚ್ಚಿಸುವಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತದೆ. ನಮ್ಮ ದಿನನಿತ್ಯದ ಅಡುಗೆಯಲ್ಲಿ ಕರಿಬೇವು ಉಪಯೋಗಿಸುವುದು ಸಹಕಾರಿಯಾಗಲಿದೆ.
ಮೂತ್ರ ಸಂಬಂಧಿ ಕಾಯಿಲೆಗೆ: ಕರಿಬೇವನ್ನು ಕುದಿಸಿ, ಕಷಾಯ ಮಾಡಿ ಕುಡಿಯುವುದು ಮೂತ್ರಕ್ಕೆ ಸಂಬಂಧಿಸಿದ ಕಾಯಿಲೆಗೆ ಉತ್ತಮ ಪರಿಹಾರ.
ಕೂದಲು ಸಮಸ್ಯೆ: ದೇಹದಲ್ಲಿ ಪೋಷಕಾಂಶಗಳ ಕೊರತೆಯಾದರೆ ಸಣ್ಣ ವಯಸ್ಸಿನಲ್ಲೇ ಕೂದಲು ಬಿಳಿಯಾಗಿಬಿಡುತ್ತದೆ. ಇಂತಹ ಸಮಸ್ಯೆಯನ್ನು ಕರಿಬೇವಿನ ಆಹಾರದಿಂದ ತಡೆಯಬಹುದು. ಬಿಳಿ ಕೂದಲಿನ ಸಮಸ್ಯೆ ಮಾತ್ರವಲ್ಲದೇ ಕೂದಲ ಬೆಳವಣಿಗೆಗೆ, ಕೂದಲು ಉದುರುವುದು ತಡೆಗಟ್ಟಲು, ತಲೆಹೊಟ್ಟುವಿನಂತಹ ಸಮಸ್ಯೆಗಳಿಗೆ ಕರಿಬೇವಿನ ಎಲೆಗಳು ಸಹಕಾರಿಯಾಗಿದೆ.