ಸಂಗೀತವು ಸೃಜನಶೀಲತೆ ಮಟ್ಟವನ್ನು ಹೆಚ್ಚಿಸುತ್ತದೆ ಎಂಬ ಮಾತು ಈಗ ಸುಳ್ಳು ಎನ್ನುತ್ತಾರೆ ಸ್ವೀಡನ್‌ನ ಮನೋವಿಜ್ಞಾನಿಗಳು. ಹೊಸ ಅಧ್ಯಯನದ ಪ್ರಕಾರ ಸಂಗೀತವನ್ನು ಕೇಳುವುದರಿಂದ ಸೃಜನಾತ್ಮಕ ಕಾರ್ಯಗಳನ್ನು ಪೂರ್ಣಗೊಳಿಸುವ ಸಾಮರ್ಥ್ಯ ಕುಗ್ಗುತ್ತದೆ ಎನ್ನಲಾಗಿದೆ. ಸಂಗೀತವು ಕೆಲಸದ ಸ್ಮರಣೆಗೆ ಅಡ್ಡಿಪಡಿಸುತ್ತದೆ. ಅಲ್ಲದೇ ನಿಮಗೆ ಗೊತ್ತಿರುವ ಸಂಗೀತದ ಸಾಲುಗಳಿಗೂ, ಗೊತ್ತಿರದ ಸಂಗೀತದ ಸಾಲುಗಳಿಗೂ ಬಹಳ ವ್ಯತ್ಯಾಸವಿದ್ದು, ಇದು ಮಾಡುವ ಕೆಲಸದ ಮೇಲೆ ಪರಿಣಾಮ ಬೀರುತ್ತದೆ ಎನ್ನುತ್ತಾರೆ ಅವರು ಆಫ್ ಕ್ಲಿನಿಕಲ್ ಆನ್ ಕೋಲಾಜಿಯಲ್ಲಿ ಪ್ರಕಟವಾಗಿದೆ.
Advertisement
ಉಸಿರಾಟದ ಏರುಪೇರು, ಹೃದಯ ಬಡಿತಗಳ ಬಗೆಗೆ ಯಾರಿಗೆ ಹೆಚ್ಚು ಮಾಹಿತಿ ಇರುತ್ತದೆಯೋ ಅಂತವರಲ್ಲಿ ಧನಾತ್ಮಕ ಶರೀರ ರಚನೆಯಾಗುತ್ತದೆ. ಈ ವಿಷಯ ಇತ್ತೀಚೆಗೆ ಅಂಗಾಲಿಯಾ ರಸ್ಕಿನ್ ಯುನಿವರ್ಸಿಟಿ ನಡೆಸಿದ ಅಧ್ಯಯನದಲ್ಲಿ ದೃಢಪಟ್ಟಿದೆ. ಈ ಸಂಶೋಧನೆಯಲ್ಲಿ 18ರಿಂದ 76 ವಯಸ್ಸಿನವರೆಗಿನ ಮಹಿಳೆಯರು ಮತ್ತು ಪುರುಷರು ಭಾಗಿಯಾಗಿದ್ದರು. ಇದರಲ್ಲಿ ಯಾವ ವ್ಯಕ್ತಿಗೆ ತನ್ನ ಆಂತರಿಕ ಸೂಚನೆಗಳ ಮೇಲೆ ಹೆಚ್ಚು ನಂಬಿಕೆಯಿರುತ್ತದೆಯೋ ಆ ವ್ಯಕ್ತಿ ತನ್ನ ಬಾಹ್ಯ ಶರೀರದಲ್ಲಿ ಗುಣಾತ್ಮಕ ಸಂವೇದನೆಯನ್ನು ಹೊಂದಿರುತ್ತಾನೆೆ. ಶರೀರದಲ್ಲಿ ಉಂಟಾಗುವ ನೆಗೆಟಿವ್ ಚಿಂತನೆಗಳಿಗೂ ಇದೇ ಆಂತರಿಕ ಸೂಚನೆಗಳು ಕಾರಣವಾಗಿರುತ್ತವೆ. ಈ ಸಂಶೋಧನೆ ನಮ್ಮ ದೇಹದ ಮೇಲಿನ ಅರಿವು ಧನಾತ್ಮಕ ಶರೀರಕ್ಕೆ ಸಹಾಯಕ ಎಂಬುದನ್ನು ತಿಳಿಸುತ್ತದೆ.