Advertisement

ಮುಖ್ಯೋಪಾಧ್ಯಾಯರ ಸಭೆ

01:02 PM Jun 11, 2017 | Team Udayavani |

ಹೊನ್ನಾಳಿ: ತಾಲೂಕಿನ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಕಳೆದ ಎರಡು ವರ್ಷಗಳಿಂದ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ್ದು, 2018ರ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಗಳಿಸಿ ಹ್ಯಾಟ್ರಿಕ್‌ ಫಲಿತಾಂಶ ದಾಖಲಾಗಬೇಕು ಎಂದು ಬಿಆರ್‌ಸಿ ಎಚ್‌.ಎಸ್‌.ಉಮಾಶಂಕರ್‌ ಹೇಳಿದರು.

Advertisement

ಗುರುಭವನದಲ್ಲಿ ಶನಿವಾರ ನಡೆದ ತಾಲೂಕು ಪ್ರೌಢಶಾಲೆಗಳ ಮುಖ್ಯೋಪಾಧ್ಯಾಯರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಹ ಶಿಕ್ಷಕರ ಹಾಗೂ ಮುಖ್ಯೋಪಾಧ್ಯಾಯರ ಮಧ್ಯ ಉತ್ತಮ ಮತ್ತು ಆರೋಗ್ಯಕರ ಸಂಬಂಧವಿದ್ದು ಜೂನ್‌ ತಿಂಗಳಿನಿಂದಲೇ ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಪಾಠ ಪ್ರವಚನಗಳನ್ನು ಮಾಡುತ್ತಾ ಹೋದರೆ ಫಲಿತಾಂಶ ಕಡಿಮೆ ಬರಲು ಸಾಧ್ಯವಿಲ್ಲ ಎಂದರು. 

ಬುದ್ಧಿಮತ್ತೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನು ಶಿಕ್ಷಕರು ದತ್ತು ತೆಗೆದುಕೊಂಡು ಕಲಿಕೆ ಮಾಡಬೇಕು ದತ್ತು ಗೆತೆದುಕೊಳ್ಳುವುದು ಕೇವಲ ಕಾಟಾಚರಕ್ಕೆ ಮಾಡಬಾರದು. ಇಲಾಖೆಗಳ ಎಲ್ಲಾ ಕೆಲಸ ಕಾರ್ಯಗಳನ್ನು ಶಿಕ್ಷಕರು ಮಾಡಿಕೊಂಡು ಇಂದು ಫಲಿತಾಂಶದ ಕಡೆ ಗಮನಕೊಡಬೇಕಿದೆ.

ಇಲಾಖೆ ಮಾಹಿತಿ ಕೇಳಿದಾಗ ತಕ್ಷಣ ಸ್ಪಂದಿಸಿ ಶಿಕ್ಷಕರು ಕಾರ್ಯನ್ಮುಖರಾಗುತ್ತಿದ್ದಾರೆ ಎಂದು ಹೇಳಿದರು. ಮುಖ್ಯೋಪಾಧ್ಯಾಯರ ಸಂಘದ ನೂತನ ಅಧ್ಯಕ್ಷ ಕೆ.ಸಿ.ಮಂಜಪ್ಪ ಮಾತನಾಡಿ, ತಾಲೂಕು ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಸಂಘ ಕಳೆದ ಹಲವಾರು ವರ್ಷಗಳಿಂದ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಾ ಬಂದಿದೆ.

ಎಲ್ಲಾ ಮುಖ್ಯೋಪಾಧ್ಯಾಯರ ಸಹಕಾರದಿಂದ ಮುಂದಿನ ದಿನಗಳಲ್ಲಿ ಮಕ್ಕಳ ಹಿತದೃಷ್ಟಿ ಇಟ್ಟುಕೊಂಡು ಸಂಘದ ವತಿಯಿಂದ ಉತ್ತಮ ಕಾರ್ಯಕ್ರಮ ಹಮ್ಮಿಕೊಳ್ಳೋಣ ಎಂದು ಹೇಳಿದರು. ನಿಕಟಪೂರ್ವ ಅಧ್ಯಕ್ಷ ಗೋವಿನಕೋವಿ ಸರ್ಕಾರಿ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಜಯಣ್ಣ ಮಾತನಾಡಿದರು. 

Advertisement

ಕಳೆದ ಮೂರು ವರ್ಷಗಳಿಂದ ತಾಲೂಕು ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷನಾಗಿ ಕಾರ್ಯ ನಿರ್ವಹಿಸಿದ್ದು ತೃಪ್ತಿ ತಂದಿದೆ. ಸಂಘಕ್ಕೆ ಮುಂದಿನ ದಿನಗಳಲ್ಲಿ ನನ್ನ ಸಹಕಾರ ಸದಾ ಇರುತ್ತದೆ ಎಂದರು. ಇಸಿಒಗಳಾದ ಮಹಾಂತೇಶ್‌, ಗೋವಿಂದರಾಜ್‌, ಸಿಬ್ಬಂದಿಗಳಾದ ಬಸಣ್ಣ, ವಾಸಪ್ಪ, ಇಲಾಖಾ ಮಾಹಿತಿ ನೀಡಿದರು. ಸಂಘದ ಕಾರ್ಯದರ್ಶಿ ತಿಪ್ಪೇಸ್ವಾಮಿ ನಿರೂಪಿಸಿದರು. 

ಪ್ರೌಢಶಾಲಾ ಸಂಘದ ನೂತನ ಪದಾಧಿಕಾರಿಗಳು: ಕೆ.ಸಿ.ಮಂಜಪ್ಪ(ಅಧ್ಯಕ್ಷರು), ಹಾಲೇಶಪ್ಪ(ಉಪಾಧ್ಯಕ್ಷರು), ತಿಪ್ಪೇಸ್ವಾಮಿ (ಕಾರ್ಯದರ್ಶಿ), ಗಿರಿಜಮ್ಮ(ಸಹ ಕಾರ್ಯದರ್ಶಿ), ಅಂಜಿನಪ್ಪ, ಸುಧಾ(ಸಂಘಟನಾ ಕಾರ್ಯದರ್ಶಿಗಳು), ಗೋಪಿನಾಥ್‌, ಸಂತೋಷ, ವಿಜಯಾನಂದಸ್ವಾಮಿ, ವೀರಪ್ಪ, ಮಹೇಂದ್ರ, ಪಾಲಾಕ್ಷಪ್ಪ, ಮಂಜಪ್ಪ(ನಿರ್ದೇಶಕರುಗಳು). 

Advertisement

Udayavani is now on Telegram. Click here to join our channel and stay updated with the latest news.

Next