Advertisement

20 ನಿಮಿಷ ವಿಳಂಬವಾದ್ದಕ್ಕೆ ಉದ್ಯೋಗಿ ವಜಾ

09:48 PM Aug 04, 2022 | Team Udayavani |

ನವದೆಹಲಿ: ಏಳು ವರ್ಷಕ್ಕಿಂತಲೂ ಹೆಚ್ಚು  ಅವಧಿಯಲ್ಲಿ ಮೊದಲ ಬಾರಿಗೆ ಉದ್ಯೋಗಿಯೊಬ್ಬ ಕಚೇರಿಗೆ 20 ನಿಮಿಷ ವಿಳಂಬವಾಗಿ ಆಗಮಿಸಿದ್ದ ಎಂಬ ಕಾರಣಕ್ಕಾಗಿ ಆತನನ್ನು ವಜಾ ಮಾಡಲಾಗಿದೆ.

Advertisement

ಇಂಥ ಘಟನೆ ನಡೆದಿದ್ದ ಅಮೆರಿಕದ ಫ್ಲಾರಿಡಾದಲ್ಲಿ. ಈ ಬಗ್ಗೆ ರೆಡ್‌ಇಟ್‌ ಜಾಲತಾಣದಲ್ಲಿ ವ್ಯಕ್ತಿಯೊಬ್ಬರು ಘಟನೆಯನ್ನು ವಿವರಿಸಿ ಬರೆದುಕೊಂಡಿದ್ದಾರೆ.

ಕಂಪನಿಯ ಆಡಳಿತ ಮಂಡಳಿಯ ನಿರ್ಧಾರ ಉಳಿದ ಉದ್ಯೋಗಿಗಳನ್ನು ಸಿಟ್ಟಿಗೆಬ್ಬಿಸಿದೆ. ಏಳು ವರ್ಷಕ್ಕಿಂತಲೂ ಅಧಿಕ ಆತ ಕೆಲಸ ಮಾಡುತ್ತಿದ್ದ ಅವಧಿಯಲ್ಲಿ ನಿಗದಿತ ಅವಧಿಗೆ ಆತ ಕರ್ತವ್ಯಕ್ಕೆ ಹಾಜರಾಗುತ್ತಿದ್ದ. ಒಂದು ದಿನ 20 ನಿಮಿಷ ವಿಳಂಬವಾಗಿ ಬಂದಿದ್ದಾನೆ ಎಂಬ ಕಾರಣಕ್ಕಾಗಿ ಆತನನ್ನು ವಜಾ ಮಾಡಲಾಗಿದೆ.

ಆತನನ್ನು ಮತ್ತೆ ಕೆಲಸಕ್ಕೆ ತೆಗೆದುಕೊಳ್ಳಬೇಕು ಎಂದು ಇತರ ಉದ್ಯೋಗಿಗಳು ಪ್ರತಿಭಟನೆ ನಡೆಸಲಾರಂಭಿಸಿದ್ದಾರೆ. ಈ ಘಟನೆ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next