ಆಂಧ್ರ ಪ್ರದೇಶ: ದೇಶದಲ್ಲಿ ಎಂತೆಂಥಾ ಛಲಗಾರರು ಇರುತ್ತಾರೆ ಎಂದು ಹೇಳಲು ಅಸಾಧ್ಯ ಇಲ್ಲೊಬ್ಬರು ಬರೋಬ್ಬರಿ 449 ಬಾರಿ ಕಾಲ್ನಡಿಗೆಯಲ್ಲೇ ತಿರುಪತಿ ತಿಮ್ಮಪ್ಪನ್ನ ದರ್ಶನ ಪಡೆಯುವ ಮೂಲಕ ಏಷ್ಯನ್ ಬುಕ್ ಆಫ್ ರೆಕಾರ್ಡ್ ನಲ್ಲಿ ಸ್ಥಾನ ಪಡೆದು ದಾಖಲೆ ನಿರ್ಮಿಸಿದ್ದಾರೆ.
ಇವರೇ ಶ್ರೀಕಾಕುಳಂ ನಗರದ ಮಹಂತಿ ಶ್ರೀನಿವಾಸ ರಾವ್ ಇವರು ತಿರುಪತಿ ವೆಂಕಟೇಶ್ವರನ ಪರಮ ಭಕ್ತರೂ ಹೌದು. ಶ್ರೀನಿವಾಸ ರಾವ್ ಅವರು 1997 ರಲ್ಲಿ ಮೊದಲ ಬಾರಿಗೆ ತಿರುಮಲವನ್ನು ತಲುಪಲು ಕಾಲ್ನಡಿಗೆಯಲ್ಲಿ ತಮ್ಮ ಯಾತ್ರೆಯನ್ನು ಪ್ರಾರಂಭಿಸಿದ ಅವರು 2018 ರ ಜುಲೈ 26 ರ ಹೊತ್ತಿಗೆ 175 ಬಾರಿ ದರ್ಶನ ಪೂರ್ಣಗೊಳಿಸಿದ್ದರಂತೆ.
1997 ರಿಂದ 2004 ರ ನಡುವೆ ವರ್ಷಕ್ಕೊಮ್ಮೆ ಏಳು ಬೆಟ್ಟಗಳನ್ನು ಕಾಲ್ನಡಿಗೆಯಲ್ಲಿ ಹತ್ತಿದ ಅವರು 2009 ರ ಹೊತ್ತಿಗೆ 28 ಬಾರಿ ಕಾಲ್ನಡಿಗೆಯಲ್ಲಿ ಕ್ಷೇತ್ರದ ದರ್ಶನ ಮಾಡಿದ್ದರಂತೆ. 2010 – 2014 ರ ನಡುವೆ ಅವರು 21 ಬಾರಿ ತಿರುಮಲ ಬೆಟ್ಟಗಳನ್ನು ಹತ್ತಿ ಇಳಿದಿದ್ದಾರೆ. ಇದಾದ ಬಳಿಕ 2015 ರಲ್ಲಿ 20 ಬಾರಿ ಮತ್ತು 2016 ರಲ್ಲಿ 15 ಬಾರಿ ವೆಂಕಟೇಶ್ವರನ ದರ್ಶನ ಪಡೆದರು. 2017 ರಲ್ಲಿ ತನ್ನ 50ನೇ ವಯಸ್ಸಿನಲ್ಲಿ ಶ್ರೀನಿವಾಸ ರಾವ್ ಅವರು ಕಾಲ್ನಡಿಗೆಯಲ್ಲಿ 50 ಬಾರಿ ಏಳುಕೊಂಡಲ್ ತಲುಪಿದ್ದರು. ಇದಾದ ಬಳಿಕ ಈ ವರ್ಷ ಜುಲೈ 26ರವರೆಗೆ ಒಟ್ಟು 40 ಬಾರಿ ಕಾಲ್ನಡಿಗೆಯಲ್ಲಿ ತಿಮ್ಮಪ್ಪನ ದರ್ಶನ ಪಡೆಯುವ ಮೂಲಕ ಇದುವರೆಗೆ ಒಟ್ಟು 449 ಬಾರಿ ತಿಮ್ಮಪ್ಪನ ದರ್ಶನ ಪಡೆದು ಏಷ್ಯನ್ ಬುಕ್ ಆಫ್ ರೆಕಾರ್ಡ್ ನಲ್ಲಿ ತನ್ನ ಹೆಸರು ದಾಖಲಿಸಿಕೊಂಡಿದ್ದಾರೆ.
ತನ್ನ 28 ನೇ ವಯಸ್ಸಿನಲ್ಲಿ ಬೆಟ್ಟ ಹತ್ತಲು ಆರಂಭಿಸಿದ ಶ್ರೀನಿವಾಸ್ ಮತ್ತೆ ಅದನ್ನು ಮುಂದುವರೆಸಿಕೊಂಡು ಹೋಗಿದ್ದರು, ಅಲ್ಲದೆ ಕೆಲವೊಮ್ಮೆ ದಿನಕ್ಕೆ ಮೂರೂ ಬಾರಿ ತಿರುಮಲ ಬೆಟ್ಟವನ್ನು ಹತ್ತಿದ ಉದಾಹರಣೆಯೂ ಇದೆಯಂತೆ, ಅಲ್ಲದೆ ದೇವಸ್ಥಾನಕ್ಕೆ ಬರುವ ಭಕ್ತರಲ್ಲಿ ವೆಂಕಟೇಶ್ವರನ ತತ್ವಗಳನ್ನು ಪ್ರಚಾರ ಮಾಡುತ್ತಾರಂತೆ, ಇಷ್ಟು ಮಾತ್ರವಲ್ಲೇ ಇದುವರೆಗೆ ಅವರ ಜೊತೆಗೆ ಸುಮಾರು 10,000 ಭಕ್ತರನ್ನು ತನ್ನ ಜೊತೆ ತಿರುಮಲ ಬೆಟ್ಟ ಹತ್ತಿಸಿ ತಿಮ್ಮಪ್ಪನ ದರ್ಶನ ಮಾಡಿಸಿದ್ದರಂತೆ. ಅದರಂತೆ ಶ್ರೀನಿವಾಸ್ ಅವರ ಹೆಸರು 2020 ರಲ್ಲಿ ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ಮತ್ತು ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಸ್ಥಾನ ಪಡೆದಿದೆ.
ಇದನ್ನೂ ಓದಿ: Uttarkhand: ಧಾರಾಕಾರ ಮಳೆ, ಭೂ ಕುಸಿತ-ಬದರಿನಾಥ್ ರಾಷ್ಟ್ರೀಯ ಹೆದ್ದಾರಿ ಬಂದ್