Advertisement

ಅಭಿಮಾನಿ ಟೀಕೆಗೆ ರಾಹುಲ್‌ ಟ್ವೀಟ್‌

11:14 AM Mar 01, 2017 | Team Udayavani |

ಮುಂಬಯಿ: ಮೊದಲ ಟೆಸ್ಟ್‌ ಪಂದ್ಯದಲ್ಲಿ ಪ್ರವಾಸಿ ಆಸ್ಟ್ರೇಲಿಯ ವಿರುದ್ಧ ಹೀನಾಯವಾಗಿ ಸೋತ ಬೆನ್ನಲ್ಲೇ ಭಾರತ ತಂಡದ ಆಟಗಾರರ ಕಳಪೆ ಪ್ರದರ್ಶನದ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.  

Advertisement

ಇದಕ್ಕೆ ಆರಂಭಿಕ ಬ್ಯಾಟ್ಸ್‌ಮನ್‌ ಕೆ.ಎಲ್‌. ರಾಹುಲ್‌ ಕೂಡ ಹೊರತಾಗಿಲ್ಲ. ಅವರು ಅಭಿಮಾನಿಯೊಬ್ಬನಿಂದ ಟ್ವಿಟರ್‌ನಲ್ಲಿ ಟೀಕೆಗೆ ಗುರಿಯಾಗಿದ್ದಾರೆ. ಆ ಆಭಿಮಾನಿಗೆ ಟ್ವಿಟರ್‌ನಲ್ಲೇ ಸ್ವಲ್ಪ ಖಾರವಾಗಿ ಉತ್ತರ ನೀಡಿದ್ದಾರೆ.

ರಾಹುಲ್‌ ಸ್ಪಿನ್ನರ್‌ ರವಿಚಂದ್ರನ್‌ ಅಶ್ವಿ‌ನ್‌ ಟ್ವಿಟರ್‌ನಲ್ಲಿ ತನ್ನನ್ನು ಫಾಲೋ ಮಾಡಿದ್ದಕ್ಕೆ ಭಾರೀ ಸಂತಸ ವ್ಯಕ್ತಪಡಿಸಿದ್ದರು. “ನನ್ನ ಪಾಲಿಗೆ ಎಂಥ ದಿನವಿದು. ಕ್ರಿಕೆಟ್‌ ದಂತಕತೆಯೊಬ್ಬರು ನನ್ನನ್ನು ಫಾಲೋ ಮಾಡಿದ್ದಾರೆ. ಇದರಿಂದ ನನಗೆ ಬಹಳ ಸಂತೋಷವಾಗಿದೆ’ ಎಂದಿದ್ದರು. 

ಈ ಟ್ವೀಟ್‌ ಹಾಕಿದ ಕೆಲವೇ ಕ್ಷಣಗಳಲ್ಲಿ ಅಭಿಮಾನಿಯೊಬ್ಬ ಕೆ.ಎಲ್‌. ರಾಹುಲ್‌ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. “ಅದನ್ನೆಲ್ಲ ಮೊದಲು ಬಿಡು, ರನ್‌ ಮಾಡುವುದು ಹೇಗೆ ಎನ್ನುವ ದಾರಿಯನ್ನು ಮೊದಲು ಹುಡುಕು’ ಎಂದು ತಿಳಿಸಿದ್ದಾರೆ. ಇದಕ್ಕೆ ರಾಹುಲ್‌ ಪ್ರತಿ ಟ್ವೀಟ್‌ ಮಾಡಿ, “ನಿನಗೆ ಹೇಗೆ ರನ್‌ ಮಾಡುವುದು ಎನ್ನುವುದು ಚೆನ್ನಾಗಿ ಗೊತ್ತು. ದಯವಿಟ್ಟು ಬಂದು ನನಗೂ ಸ್ವಲ್ಪ ಹೇಳಿಕೊಡು…’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next