Advertisement
ಈ ಡೀಲ್ ಅಂತಿಮಗೊಂಡರೆ, ಮಾರು ಕಟ್ಟೆ ಬಂಡವಾಳದ ವಿಚಾರದಲ್ಲಿ ಭಾರತದ 3ನೇ ಅತಿದೊಡ್ಡ ಕಂಪನಿ ಎಂಬ ಖ್ಯಾತಿಗೆ ಎಚ್‌ಡಿಎಫ್ ಸಿ ಪಾತ್ರವಾಗಲಿದೆ. ಅಷ್ಟೇ ಅಲ್ಲ, ಅತಿ ಹೆಚ್ಚು ಬಂಡವಾಳ ಹೊಂದಿರುವ ಜಗತ್ತಿನ ಟಾಪ್ 100 ಕಂಪನಿಗಳಲ್ಲಿ ಒಂದು ಎಂಬ ಹೆಗ್ಗಳಿಕೆಯನ್ನೂಗಳಿಸಲಿದೆ.
Related Articles
Advertisement
ಆಸ್ತಿ ಮೌಲ್ಯವೆಷ್ಟು?: ಪ್ರಸ್ತುತ ಎಚ್‌ಡಿಎಫ್ ಸಿ ಹೌಸಿಂಗ್ ಫೈನಾನ್ಸ್ ಕಂಪನಿಯ ಒಟ್ಟು ಆಸ್ತಿ ಮೌಲ್ಯ 6.23 ಲಕ್ಷ ಕೋಟಿ ರೂ.ಗಳಾಗಿದ್ದರೆ, ಎಚ್‌ಡಿಎಫ್ ಸಿ ಬ್ಯಾಂಕ್ 19.38 ಲಕ್ಷ ಕೋಟಿ ರೂ. ಆಸ್ತಿ ಮೌಲ್ಯ ಹೊಂದಿದೆ.
ಹೀಗಾಗಿ, ಈ ಎರಡೂ ಕಂಪನಿ ಗಳ ಒಟ್ಟು ಮೌಲ್ಯ 25.61 ಲಕ್ಷ ಕೋಟಿ ರೂ.ಗಳಾಗಲಿವೆ. ಇನ್ನು, ಎಚ್‌ಡಿಎಫ್ ಸಿ ಬ್ಯಾಂಕು 6.8 ಕೋಟಿ ಗ್ರಾಹಕರನ್ನು ಹೊಂದಿದ್ದು, 3 ಸಾವಿರಕ್ಕೂ ಹೆಚ್ಚು ನಗರ ಗಳಲ್ಲಿ 6,342 ಶಾಖೆಗಳನ್ನು ಹೊಂದಿದೆ.
ಅನುಕೂಲತೆಗಳೇನು?-ಎಚ್‌ಡಿಎಫ್ ಸಿ ಹೌಸಿಂಗ್ ಫೈನಾನ್ಸ್‌ನ ಶೇ.70ರಷ್ಟು ಗ್ರಾಹಕರು ಎಚ್‌ಡಿಎಫ್ ಸಿ ಬ್ಯಾಂಕ್‌ನಲ್ಲಿ ಖಾತೆ ಹೊಂದಿಲ್ಲ. ವಿಲೀನದಿಂದಾಗಿ ಬ್ಯಾಂಕ್ ಗ್ರಾಹಕರ ಸಂಖ್ಯೆ ಏರಿಕೆಯಾಗಲಿದೆ.
-ಸಂಸ್ಥೆಯ ಮಾರುಕಟ್ಟೆ ಮೌಲ್ಯ ಗಣನೀಯವಾಗಿ ಹೆಚ್ಚಳವಾಗಲಿದೆ
-ಎಫ್ ಪಿಐ ತಮ್ಮ ಹೂಡಿಕೆಯ ಪ್ರಮಾಣವನ್ನು ಇನ್ನೂ ಶೇ.7ರಷ್ಟು ಹೆಚ್ಚಿಸಿಕೊಳ್ಳಬಹುದು. 60 ಸಾವಿರ ದಾಟಿದ ಬಿಎಸ್‌ಇ ಸೂಚ್ಯಂಕ
ಬಾಂಬೆ ಷೇರುಪೇಟೆಯಲ್ಲಿ ಸೂಚ್ಯಂಕ 1,335.05 ಪಾಯಿಂಟ್ಲ ಏರಿಕೆಯಾಗಿದೆ. ಹೀಗಾಗಿ, ದಿನಾಂತ್ಯಕ್ಕೆ 60,611.74ರಲ್ಲಿ ಮುಕ್ತಾಯವಾಗಿದೆ. ಎಫ್ಎಂಸಿಜಿ, ಐಟಿ, ಬ್ಯಾಂಕಿಂಗ್ ಮತ್ತು ವಿತ್ತೀಯ ಸಂಸ್ಥೆಗಳ ಷೇರುಗಳಿಗೆ ಭಾರೀ ಬೇಡಿಕೆ ಉಂಟಾಗಿದ್ದ ರಿಂದ ಈ ಬೆಳವಣಿಗೆಯಾಗಿದೆ. ಎಚ್‌ಡಿಎಫ್ ಮತ್ತು ಎಚ್‌ಡಿಎಫ್ ಸಿ ಬ್ಯಾಂಕ್ ಷೇರು ಗಳೂ ಕೂಡ ಕ್ರಮವಾಗಿ ಶೇ.9.97, ಶೇ.9.30ರಷ್ಟು ಬೇಡಿಕೆ ಕಂಡವು. ನಿಫ್ಟಿ ಸೂಚ್ಯಂಕ 382.95 ಪಾಯಿಂಟ್ಸ್ ಏರಿಕೆಯಾಗುವುದರ ಮೂಲಕ 18,053.40ರಲ್ಲಿ ಮುಕ್ತಾಯ ವಾಗಿದೆ. ಐರೋಪ್ಯ ಒಕ್ಕೂಟ, ಶಾಂಘೈ, ಸಿಯೋಲ್‌ನ ಸ್ಟಾಕ್‌ಎಕ್ಸ್‌ಚೇಂಜ್‌ಗಳಲ್ಲಿ ಕೂಡ ವಹಿವಾಟು ಉತ್ತಮವಾಗಿಯೇ ನಡೆದಿದೆ. ಎಚ್‌ಡಿಎಫ್ ಸಿ ಮತ್ತು ಎಚ್‌ಡಿಎಫ್ ಸಿ ಬ್ಯಾಂಕ್ ವಿಲೀನ ಘೋಷಣೆ ಮಾಡಿದ್ದರಿಂದ ಸೆನ್ಸೆಕ್ಸ್ ಏರಿಕೆಯಾಗಿದೆ.