ರಾಂಚಿ : 2015ರ ಡಿಸೆಂಬರ್ 17ರಂದು ರಸ್ತೆ ಅಪಘಾತದಲ್ಲಿ ಮಡಿದಿದ್ದ ವ್ಯಕ್ತಿಯೊಬ್ಬರ ಕುಟುಂಬಕ್ಕೆ 1.5 ಕೋಟಿ ರೂ. ಪರಿಹಾರ ಪಾವತಿಸುವಂತೆ ಛತ್ತೀಸ್‌ಗಢದ ಮೋಟಾರು ವಾಹನ ಅಪಘಾತ ಕ್ಲೇಮುಗಳ ನ್ಯಾಯ ಮಂಡಳಿಯು ಎಚ್ ಡಿ ಎಫ್ ಸಿ ಎರ್ಗೋ ವಿಮಾ ಕಂಪೆನಿಗೆ ಆದೇಶಿಸಿದೆ.
ರಸ್ತೆ ಅಪಘಾತದಲ್ಲಿ ಮಡಿದಿದ್ದ ಲಾರೆನ್ಸ್ ಟಿಗ್ಗಾ ಎಂಬವರು ಛತ್ತೀಸ್‌ಗಢದ ಕೋರ್ಬಾದಲ್ಲಿನ ಎನ್‌ಟಿಪಿಸಿ ಘಟಕದಲ್ಲಿ ಉಪ ಇಂಜಿನಿಯರ್ ಆಗಿ ದುಡಿಯುತ್ತಿದ್ದರು.
ಅಪಘಾತದಲ್ಲಿ ಮೃತಪಟ್ಟ ಲಾರೆನ್ಸ್ ಅವರು ನಿರ್ಲಕ್ಷ್ಯದ ವಾಹನ ಚಾಲನೆಯಿಂದಲೇ ಅಪಘಾತ ಸಂಭವಿಸಿದ್ದರಿಂದ ನಾವು ಪರಿಹಾರ ಕೊಡಬೇಕಾಗಿಲ್ಲ ಎಂದು ಎಚ್ ಡಿ ಎಫ್ ಸಿ ಎರ್ಗೊ ಕಂಪೆನಿ ವಾದಿಸಿತ್ತು.
ವಾದ-ವಿವಾದ ಆಲಿಸಿದ ನ್ಯಾಯಾಧೀಶ ಥಾಮವ್ ಎಕ್ಕಾ ಅವರು ಎಚ್ ಡಿ ಎಫ್ ಸಿ ಎರ್ಗೊ ವಿಮಾ ಕಂಪೆನಿ ಮೃತನ ಕುಟುಂಬಕ್ಕೆ ಒಂದು ತಿಂಗಳ ಒಳಗೆ 1.5 ಕೋಟಿ ರೂ. ಪರಿಹಾರ ಪಾವತಿಸುವಂತೆ ಸೂಚಿಸಿತ್ತು. ಮೃತ ಲಾರೆನ್ಸ್ ಅವರಿಗೆ ತಿಂಗಳಿಗೆ ಸಿಗುತ್ತಿದ್ದ 1 ಲಕ್ಷ ರೂ. ವೇತನ ಮತ್ತು ನಿವೃತ್ತಿಗೆ ಮುನ್ನ ಅವರಿಗಿದ್ದ ಸೇವಾವಧಿಯನ್ನು ಅನುಲಕ್ಷಿಸಿ ನ್ಯಾಯಾಲಯ ಈ ತೀರ್ಪು ನೀಡಿತು.