Advertisement

ಎಚ್‌ಡಿಎಫ್ ಸಿಗೆ 10,342 ಕೋಟಿ ರೂ. ಲಾಭ

11:03 PM Jan 15, 2022 | Team Udayavani |

ನವದೆಹಲಿ: ದೇಶದ ಖಾಸಗಿ ರಂಗದ ಪ್ರಮುಖ ಬ್ಯಾಂಕ್‌ಗಳಲ್ಲಿ ಒಂದಾಗಿರುವ ಎಚ್‌ಡಿಎಫ್ ಸಿ ಬ್ಯಾಂಕ್‌ನ ನಿವ್ವಳ ಲಾಭ ಶೇ.18ರಷ್ಟು ಹೆಚ್ಚಳವಾಗಿದ್ದು, 10,342 ಕೋಟಿ ರೂ.ಗಳಿಗೆ ಏರಿಕೆಯಾಗಿದೆ.

Advertisement

2021ರ ಡಿಸೆಂಬರ್‌ ಅಂತ್ಯಕ್ಕೆ ಮುಕ್ತಾಯವಾದ ತ್ತೈಮಾಸಿಕದ ವರದಿ ಇದಾ ಗಿದೆ.

ಕಳೆದ ವಿತ್ತೀಯ ವರ್ಷದ ಇದೇ ಅವಧಿಯಲ್ಲಿ ಬ್ಯಾಂಕ್‌ 8,758.29 ಕೋಟಿ ರೂ. ನಿವ್ವಳ ಲಾಭ ಗಳಿಸಿತ್ತು. 2021-22ರ ವಿತ್ತ ವರ್ಷದ ಅಕ್ಟೋಬರ್‌-ಡಿಸೆಂಬರ್‌ ಅವಧಿಯಲ್ಲಿ ಎಚ್‌ಡಿಎಫ್ ಸಿಯ ಒಟ್ಟಾರೆ ಆದಾಯ 40,651.60 ಕೋಟಿ ರೂ.ಗೇರಿತ್ತು.

ಇದನ್ನೂ ಓದಿ:ಗಣರಾಜ್ಯೋತ್ಸವ ಪರೇಡ್‌ನ‌ಲ್ಲಿ ಕೇವಲ 24,000 ಪ್ರೇಕ್ಷಕರಿಗೆ ಮಾತ್ರ ಅವಕಾಶ

2020-21ನೇ ಸಾಲಿನ ಇದೇ ಅವಧಿಯಲ್ಲಿ 37,522 ಕೋಟಿ ರೂ. ಆದಾಯ ದಾಖಲಿಸಿತ್ತು. ಇದರ ಜತೆಗೆ ಕಳೆದ ತ್ತೈಮಾಸಿಕದಲ್ಲಿ ಬ್ಯಾಂಕ್‌ನ ಅನುತ್ಪಾದಕ ಆಸ್ತಿ ಪ್ರಮಾಣ ಶೇ.1.26ಕ್ಕೆ ಏರಿಕೆಯಾಗಿದೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next