Advertisement

HD ರೇವಣ್ಣ ಆಪ್ತ ಸತೀಶ್‌ ಬಾಬು ನಾಲ್ಕು ದಿನ ಎಸ್‌ಐಟಿ ವಶಕ್ಕೆ

12:02 AM May 14, 2024 | Team Udayavani |

ಬೆಂಗಳೂರು: ಮೈಸೂರಿನ ಕೆ.ಆರ್‌.ನಗರ ಠಾಣೆಯಲ್ಲಿ ದಾಖಲಾಗಿದ್ದ ಸಂತ್ರಸ್ತೆ ಅಪಹರಣ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಶಾಸಕ ಎಚ್‌.ಡಿ.ರೇವಣ್ಣ ಆಪ್ತ ಸತೀಶ್‌ ಬಾಬುನನ್ನು ನಗರದ 42ನೇ ಎಸಿಎಂಎಂ ಕೋರ್ಟ್‌ 4 ದಿನ ಎಸ್‌ಐಟಿ ವಶಕ್ಕೆ ನೀಡಿದೆ.

Advertisement

ಸಂತ್ರಸ್ತೆಯನ್ನು ಶಾಸಕ ರೇವಣ್ಣ ಮತ್ತು ಅವರ ಪತ್ನಿ ಭವಾನಿ ಸೂಚನೆ ಮೇರೆಗೆ ಆಕೆಯ ಮನೆಯಿಂದ ಕರೆದೊಯ್ದಿದ್ದ ಆರೋಪ ಸತೀಶ್‌ ಬಾಬು ಮೇಲಿದೆ. ಸಂತ್ರಸ್ತೆಯನ್ನು ಕೆ.ಆರ್‌.ನಗರ ತಾಲೂಕಿನ ಹನಗೋಡು ಹೋಬಳಿಯ ಕಾಳೇನಹಳ್ಳಿರುವ ತನ್ನ ಪರಿಚಿತರ ತೋಟದ ಮನೆಯಲ್ಲಿ ಇರಿಸಿದ್ದ ಎಂದು ಮಹಿಳೆಯ ಪುತ್ರ ಅಪಹರಣದ ದೂರು ನೀಡಿದ್ದ. ಇದರನ್ವಯ ಸತೀಶ್‌ಬಾಬುನನ್ನು ಎಸ್‌ಐಟಿ ಅಧಿಕಾರಿಗಳು ಬಂಧಿಸಿದ್ದರು.

ಎಸ್‌ಐಟಿಗೆ ಶಾಸಕ ಎ.ಮಂಜು ದೂರು
ಪೆನ್‌ಡ್ರೈವ್‌ ವೈರಲ್‌ ಮಾಡಿದ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಆರೋಪಿ ನವೀನ್‌ ಗೌಡ ವಿರುದ್ಧ ಅರಕಲಗೂಡು ಶಾಸಕ ಎ. ಮಂಜು ಸೋಮವಾರ ಸಿಐಡಿ ಕಚೇರಿ ಆವರಣದಲ್ಲಿ ಎಸ್‌ಐಟಿಗೆ ದೂರು ನೀಡಿದ್ದಾರೆ.

ಆರೋಪಿ ನವೀನ್‌ ಗೌಡ ತನ್ನ ಫೇಸ್‌ಬುಕ್‌ ಖಾತೆಯಲ್ಲಿ, ಎ.20ರಂದು ರಸ್ತೆಯಲ್ಲಿ ಸಿಕ್ಕಿದ್ದ ಪೆನ್‌ಡ್ರೈವ್‌ ಅನ್ನು ಎ.21ರಂದು ಅರಕಲಗೂಡಿನ ಮಾರುತಿ ಕಲ್ಯಾಣ ಮಂಟಪದಲ್ಲಿ ಶಾಸಕ ಎ.ಮಂಜು ಅವರಿಗೆ ಕೊಟ್ಟಿದ್ದೆ. ಕುಮಾರಸ್ವಾಮಿ ಅವರು ಹೇಳಿದಂತೆ ಅಶ್ಲೀಲ ವೀಡಿಯೋಗಳ ವೈರಲ್‌ ಹಿಂದೆ ಇರುವ ಮಹಾನಾಯಕ ಅರಕಲಗೂಡು ಶಾಸಕರೇ ಇರಬಹುದು ಎಂದು ರವಿವಾರ ಸ್ಫೋಟಕ ಪೋಸ್ಟ್‌ ಹಾಕಿದ್ದ. ಅದರಿಂದ ಆಕ್ರೋಶಗೊಂಡಿದ್ದ ಎ.ಮಂಜು ಎಸ್‌ಐಟಿಗೆ ದೂರು ನೀಡಿದ್ದಾರೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next