ಹಾಸನ: ಜೆಡಿಎಸ್ ಪ್ರಾಬಲ್ಯದ ಭಯದಿಂದಲೇ ಕಾಂಗ್ರೆಸ್ ಮುಖಂಡರು ಮೇಕೆದಾಟು ಪಾದಯಾತ್ರೆ ನಡೆಸುತ್ತಿದ್ದಾರೆ ಎಂದು ಜೆಡಿಎಸ್ ಮುಖಂಡ, ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೆಡಿ ಎಸ್ ಕಂಡರೆ ಎರಡು ರಾಷ್ಟ್ರೀಯ ಪಕ್ಷಗಳಿಗೂ ಭಯ.ಹಾಗಾಗಿಯೇ ಜೆಡಿಎಸ್ ಪ್ರಾಬಲ್ಯದ ಜಿಲ್ಲೆಗಳ ಜನರನ್ನೇ ಕರೆಸಿಕೊಂಡು ಕಾಂಗ್ರೆಸ್ ಮುಖಂಡರು ಪಾದ ಯಾತ್ರೆ ಮಾಡುತ್ತಿದ್ದಾರೆ ಎಂದು ಪ್ರತಿಕ್ರಿಯಿಸಿದರು.
ರಾಜ್ಯದ ನೀರಾವರಿ ಯೋಜನೆಗಳಿಗೆ ಜೆಡಿಎಸ್‌ಎಂದೂ ಅಡ್ಡಿಯಾಗಿಲ್ಲ. ನೀರಾವರಿ ಯೋಜನೆಗಳು ಅನುಷ್ಠಾನವಾಗಬೇಕೆಂಬುದೂ ಜೆಡಿಎಸ್‌ನ ಮಹದಾಸೆ. ಹಾಗೆಂದು ಕಾಂಗ್ರೆಸ್ ಮುಖಂಡರ ಹಿಂದೆ ಹೋಗಬೇಕೇ ಎಂದು ಪ್ರಶ್ನಿಸಿದ ರೇವಣ್ಣ ಅವರು, ದೇವೇಗೌಡರು ಈ ರಾಜ್ಯದಲ್ಲಿ ನೀರಾವರಿಗಾಗಿ ಎಷ್ಟು ಹೋರಾಟ ಮಾಡಿದ್ದಾರೆ. ಕಾವೇರಿವಿವಾದದಲ್ಲಿ ಏನೇನು ಮಾಡಿ ರಾಜ್ಯಕ್ಕೆ ಕಾವೇರಿಯಲ್ಲಿ ನ್ಯಾಯವಾದ ಪಾಲು ಹೋಡಾಡಿದ್ದಾರೆ ಎಂದು ರಾಜ್ಯದ ಜನರಿಗೆ ಗೊತ್ತಿದೆ ಎಂದರು.
ಡಿಕೆಶಿಗೆ ತಿರುಗೇಟು: ದೇವೇಗೌಡರು ನೀರಾವರಿ ಸಚಿವರಾದ ನಂತರ 20 ವರ್ಷ ಕಾಂಗ್ರೆಸ್‌ನವರು, 10ವರ್ಷ ಬಿಜೆಪಿಯವರು ನೀರಾವರಿ ಸಚಿವರಾಗಿದ್ದಾರೆಯೇ ಹೊರತು, ಜೆಡಿಎಸ್‌ನವರು ನೀರಾವರಿ ಸಚಿವರಾಗಿಲ್ಲ. ಬಿಜೆಪಿ ಸರ್ಕಾರದಲ್ಲಿ ಈಶ್ವರಪ್ಪ,ರಮೇಶ್ ಜಾರಕಿಹೊಳಿ, ಸಿದ್ಧರಾಮಯ್ಯ ಸರ್ಕಾರದಲ್ಲಿಎಂ.ಬಿ.ಪಾಟೀಲ್ ಅವರು 5 ವರ್ಷ, ಎಚ್.ಡಿ. ಕುಮಾರಸ್ವಾಮಿ ಅವರ ಸರ್ಕಾರದಲ್ಲಿ ಈಗ ಮೆಕೆ ದಾಟು ಪಾದಯಾತ್ರೆಯ ದೊಂಬರಾಟ ನಡೆಸುತ್ತಿರುವ ಡಿ.ಕೆ.ಶಿವಕುಮಾರ್ ಅವರೇ ನೀರಾವರಿ ಸಚಿವ ರಾಗಿದ್ದರು. ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದಯುಪಿಎ, ಬಿಜೆಪಿ ನೇತೃತ್ವದ ಎನ್‌ಡಿಎ ಕೇಂದ್ರದಲ್ಲಿ ಅಧಿ ಕಾರದಲ್ಲಿದದ್ದು. ನೀರಾವರಿಯಲ್ಲಿ ರಾಜ್ಯಕ್ಕೆ ಏನಾ ದರೂ ದ್ರೋಹವಾಗಿದ್ದರೆ ಈ ಎರಡೂ ರಾಷ್ಟ್ರೀಯ ಪಕ್ಷ ಗಳಿಂದಲೇ ಹೊರತು ಜೆಡಿಎಸ್ ನಿಂದಲ್ಲ ಎಂದು ಡಿ.ಕೆ. ಶಿವಕುಮಾರ್ ಅವರ ಆರೋಪಕ್ಕೆ ತಿರುಗೇಟು ನೀಡಿದರು.