ಹಾಸನ: ಸರ್ಕಾರದ ವಿವಿಧ ಇಲಾಖೆಗಳ ಕಾಮಗಾರಿಗಳ ಬಿಲ್ ಪಾವತಿಗೆ ಅಧಿಕಾರಿಗಳು ಗುತ್ತಿಗೆದಾರರಿಂದ ಬಿಲ್ ಮೊತ್ತದ ಶೇ.25ರಷ್ಟನ್ನು ವಸೂಲಿ ಮಾಡುತ್ತಿದ್ದಾರೆ.ಇಷ್ಟೊಂದು ಪ್ರಮಾಣದ ಭ್ರಷ್ಟಾಚಾರವನ್ನುಹಿಂದೆಂದೂ ನೋಡಿರಲಿಲ್ಲ ಎಂದು ಜೆಡಿಎಸ್ ಮುಖಂಡ, ಮಾಜಿ ಸಚಿವ ಎಚ್.ಡಿ.ರೇವಣ್ಣ ಆರೋಪ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಲೋಕಸಭೆಯ ಚುನಾವಣೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಅವರು ಎಚ್.ಡಿ.ಕುಮಾರಸ್ವಾಮಿ ಅವರನೇತೃತ್ವದ ಸಮ್ಮಿಶ್ರ ಸರ್ಕಾರವನ್ನು 10 ಪರ್ಸೆಂಟ್‌ಸರ್ಕಾರ ಎಂದು ಟೀಕಿಸುತ್ತಿದ್ದರು. ಆದರೆ ಈಗ ಬಿಜೆಪಿ ಸರ್ಕಾರ 25 ಪರ್ಸೆಂಟ್ ವಸೂಲಿ ಮಾಡುತ್ತಿದೆಯಲ್ಲಾ ಈಗ ಏನು ಹೇಳುತ್ತಾರೆಎಂದು ಪ್ರಶ್ನಿಸಿದರು.
ಕಾವೇರಿ ನೀರಾವರಿ ನಿಗಮದಲ್ಲಿ ಮುಖ್ಯ ಎಂಜಿನಿಯರ್ ಮಟ್ಟದಲ್ಲಿಯೇ ಬಿಲ್ ಪಾವತಿಯಲ್ಲಿ ಕಮೀಷನ್ ವ್ಯವಹಾರ ನಡೆಯುತ್ತಿದೆ. ನಾನು 21 ವರ್ಷಗಳಿಂದ ಶಾಸಕನಾಗಿದ್ದೇನೆ. ಈರೀತಿಯ ಲೂಟಿ ಹಿಂದೆಂದೂ ನೋಡಿರಲಿಲ್ಲ. ವಿಧಾನಸಭೆ ಅಧಿವೇಶನದಲ್ಲಿ ಶಾಸಕಎ.ಟಿ.ರಾಮಸ್ವಾಮಿ ಮುಖ್ಯಮಂತ್ರಿಯವರ ಸಮ್ಮುಖದಲ್ಲಿ ಬಹಿರಂಗ ವಾಗಿಯೇ 25ಪರ್ಸೆಂಟ್ ವಸೂಲಿಯ ಬಗ್ಗೆ ಹೇಳಿದರು. ಮುಖ್ಯಮಂತ್ರಿಯವರೇ ಹಣಕಾಸು ಸಚಿವರೂ ಆಗಿದ್ದಾರೆ. ಆದರೂ ಸರ್ಕಾರಕ್ಕೆ ಕನಿಷ್ಠ ಅಂಜಿಕೆಯೂ ಇಲ್ಲ. ಇಷ್ಟೊಂದು ಪ್ರಮಾಣದಲ್ಲಿಗುತ್ತಿಗೆದಾರರಿಂದ ವಸೂಲಿ ಮಾಡುತ್ತಿರುವಅಧಿಕಾರಿಗಳು, ಎಂಜಿನಿಯರುಗಳು ಬಿಜೆಪಿಯಶಾಸಕರು, ಸಚಿವರಿಗೆ ಎಷ್ಟು ಪರ್ಸೆಂಟ್‌ಕೊಡುತ್ತಿದ್ದಾರೆ ಎಂದು ಪ್ರಶ್ನಿಸಿದ ಅವರು, 5ರಾಜ್ಯಗಳ ವಿಧಾನಸಭಾ ಚುನಾವಣೆಗೆ ಬಿಜೆಪಿಯವರು ಗುತ್ತಿಗೆದಾರರಿಂದ ವಸೂಲಿ ಮಾಡುತ್ತಿದ್ದಾರೆಯೇ ಎಂದೂ ರೇವಣ್ಣ ಶಂಕಿಸಿದರು.
ಕಾಂಗ್ರೆಸ್ ಬಿಜೆಪಿ ಅಡೆjಸ್ಟ್‌ಮೆಂಟ್: ವಿಧಾನ ಸಭಾ ಅಧಿವೇಶನದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ನಹೊಂದಾಣಿಕೆ ರಾಜ ಕಾರಣದಿಂದಾಗಿಅಧಿವೇಶನ ನಿಗಿದಿಗಿಂತ ಒಂದು ವಾರದಮೊದಲೇ ಮುಕ್ತಾಯವಾಯಿತು. ಸಿಡಿ ವಿಷಯವನ್ನು ಪ್ರಸ್ತಾಪಿಸುತ್ತಾ ಅಧಿವೇಶನಮೊಟಕುಗೊಳ್ಳಲು ಕಾಂಗ್ರೆಸ್ ಕೂಡ ಬಿಜೆಪಿಗೆ ಸಹಕರಿದೆ. ಅಧಿವೇಶನ ಮೊಟಕುಗೊಂಡಿದ್ದರಿಂದಬಿಜೆಪಿಯವರು ಹುಳುಕು ಮುಚ್ಚಿಕೊಳ್ಳಲು ಸಾಧ್ಯವಾಯಿತು. ಅಧಿವೇಶನದಪ್ರಾರಂಭದಲ್ಲಿಯೇ ಕಾಂಗ್ರೆಸ್‌ನವರು ಸಿಡಿ ವಿಚಾರವನ್ನು ಪ್ರಸ್ತಾಪಿಸಬಹುದಿತ್ತು. ಅದನ್ನುಬಿಟ್ಟು ಜೆಡಿಎಸ್ ಚರ್ಚೆಗೆ ಸಜ್ಜಾಗುತ್ತಿದ್ದಾಗಕಾಂಗ್ರೆಸ್ ಸಿಡಿ ವಿಚಾರ ಪ್ರಸ್ತಾಪಿಸಿ ಸದನದಲ್ಲಿ ಧರಣಿ ನಡೆಸಿ ಅಧಿವೇಶನ ಮೊಟಕಾಗಲು ಕಾರಣವಾಯಿತು ಎಂದು ದೂರಿದರು.