ಹಾಸನ: “ಕೋವಿಡ್ ಸೋಂಕಿತರಿಗೆ ಹಾಸನದಲ್ಲಿ 2000 ಹಾಸಿಗೆ, ಪ್ರತಿ ತಾಲೂಕಿನಲ್ಲೂ 1000 ಹಾಸಿಗೆ ವ್ಯವಸ್ಥೆ ಮಾಡಬೇಕು. ರೆಮ್‌ಡೆಸಿವಿಯರ್ ಚುಚ್ಚುಮದ್ದನ್ನು ಅಗತ್ಯದಷ್ಟು ಪೂರೈಕೆ ಮಾಡಬೇಕು, ಇಲ್ಲದಿದ್ದರೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಿವಾಸ ಕಾವೇರಿ ಬಳಿಯೇ ಹೋಗಿ ಮಲಗುವೆ’ ಎಂದು ಜೆಡಿಎಸ್ ಮುಖಂಡ, ಮಾಜಿ ಸಚಿವ ಎಚ್. ಡಿ. ರೇವಣ್ಣ ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರೆಮ್‌ಡೆಸಿವಿ ಯರ್ ಚುಚ್ಚುಮದ್ದಿಗಾಗಿ ಸೋಂಕಿತರು ಪರದಾಡು ವುದನ್ನುನೋಡಲಾಗುತ್ತಿಲ್ಲ. ಕಲಬುರುಗಿಗೆ ಅಲ್ಲಿನ ಸಂಸದ ಬೆಂಗಳೂರಿನಿಂದ ವಿಮಾನದಲ್ಲಿ ಕೊಂಡೊ ಯ್ಯಲು ಕೊಡುತ್ತಾರೆ. ಬೀದರ್‌ಗೆ ವಿಮಾನದಲ್ಲಿ ಕಳುಹಿಸುತ್ತಾರೆ. ಹಾಸನ ಜಿಲ್ಲೆಗೇಕೆ ಕೊಡುತ್ತಿಲ್ಲ ಎಂದು ಪ್ರಶ್ನಿಸಿದರು.
ಪೂರೈಕೆ ಮಾಡಿ: ಕಳೆದ ಶನಿವಾರ 480 ರೆಮ್ ಡೆಸಿವಿಯರ್ ಚುಚ್ಚುಮದ್ದು ಕೊಡಿಸಿದ್ದೆ. ಮಾಜಿಪ್ರಧಾನಿ ಎಚ್.ಡಿ.ದೇವೇಗೌಡರು ಮತ್ತು ತಾನುಒತ್ತಡ ತಂದಿದ್ದರ ಫಲವಾಗಿ ಶುಕ್ರವಾರ 220 ರೆಮ್ ಡೆಸಿವಿಯರ್ ಚುಚ್ಚುಮದ್ದು ಬರುತ್ತಿವೆ. ಮುಂದಿನ ದಿನಗಳ ಪರಿಸ್ಥಿತಿ ಅವಲೋಕಿಸಿ ಹಾಸನ ಜಿಲ್ಲೆಗೆ 10000 ಚುಚ್ಚುಮದ್ದು ಹಂಚಿಕೆ ಮಾಡಿ ಅಗತ್ಯಕ್ಕೆ ತಕ್ಕಂತೆ ಪೂರೈಕೆ ಮಾಡಬೇಕು ಎಂದು ಆಗ್ರಹಿಸಿದರು.
ವಿಮೆ ಮಾಡಿಸಿ: ವಿದ್ಯಾರ್ಥಿ ನಿಲಯಗಳು, ಮೊರಾರ್ಜಿ ದೇಸಾಯಿ ಶಾಲೆಗಳ ಹಾಲ್‌ಗಳನ್ನು ಕೋವಿಡ್ ಸೋಂಕಿತರ ಚಿಕಿತ್ಸೆಗೆ ಬಳಸಿಕೊಳ್ಳಬೇಕು. ತಕ್ಷಣದಿಂದಲೇ ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಕಾರ್ಯೋನ್ಮುಖವಾಗಬೇಕು. ಸರ್ಕಾರ ತುರ್ತಾಗಿ ಜಿಲ್ಲಾಧಿಕಾರಿ ಮತ್ತು ಡಿಎಚ್‌ಒಗಳಿಗೆ ನೇರ ಹಣ ಬಿಡುಗಡೆ ಮಾಡಿ ಖರ್ಚು ಮಾಡಲು ಸಂಪೂರ್ಣ ಸ್ವಾತಂತ್ರ್ಯ ನೀಡಬೇಕು. ವೈದ್ಯರು, ಶುಶ್ರೂಷಕರು, ಸಹಾಯಕರಿಗೆ ವಿಶೇಷ ವಿಮೆ ಮಾಡಿಸಬೇಕು ಎಂದು ರೇವಣ್ಣ ಸರ್ಕಾರವನ್ನು ಒತ್ತಾಯಿಸಿದರು.
ಜನರ ಜೀವ ಉಳಿಸುವ ಔಷಧ ಕೊಡಿಸಲಾಗದಿದ್ದರೆ ನಾವೇಕೆ ಶಾಸಕರಾಗಿರಬೇಕು?. ಹಾಸನ ಜಿಲ್ಲೆಗೆ ಅಗತ್ಯದಷ್ಟು ರೆಮ್‌ಡೆಸಿವಿಯರ್ ಚುಚ್ಚುಮದ್ದನ್ನು ಸರ್ಕಾರ ಪೂರೈಕೆ ಮಾಡಬೇಕು. ಇಲ್ಲದಿದ್ದರೆ ನಾನಂತೂ ಮುಖ್ಯಮಂತ್ರಿಯವರ ನಿವಾಸದ ಬಳಿಯೇ ಪ್ರತಿಭಟನೆ ಮಾಡೋದು ಖಚಿತ.
-ಎಚ್.ಡಿ.ರೇವಣ್ಣ, ಶಾಸಕ