Advertisement

ಮಲೆನಾಡು ಅಭಿವೃದ್ಧಿ ಕಡೆಗಣನೆ ಆರೋಪ

05:22 PM Sep 03, 2022 | Team Udayavani |

ಬೇಲೂರು : ಜೆಡಿಎಸ್‌ ಪಕ್ಷದಲ್ಲಿ ಕಾರ್ಯಕರ್ತರ ಕಡೆಗಣನೆ ಮಲೆನಾಡು ಭಾಗದ ಅಭಿವೃದ್ಧಿಗೆ ಆದ್ಯತೆ ನೀಡಿಲ್ಲ. ಮುಂದಿನ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ತರುವುದು ಹಾಗೂ ನಿಷ್ಠಾವಂತ ಕಾರ್ಯಕರ್ತರು ಬೇರೆ ಪಕ್ಷದ ಕಡೆ ಮುಖ ಮಾಡುತ್ತಿದ್ದಾರೆ ಎಂದು ಕಾರ್ಯಕರ್ತರು ಆರೋಪಿಸಿದರಲ್ಲದೆ ಶಾಸಕ ಲಿಂಗೇಶ್‌ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಪ್ರಸಂಗ ನಡೆಯಿತು.

Advertisement

ಪಟ್ಟಣದ ವೀರಶೈವ ಕಲ್ಯಾಣ ಮಂಟಪದಲ್ಲಿ ನಡೆದ ಜೆಡಿಎಸ್‌ ಕಾರ್ಯಕರ್ತರ ಸಭೆಯಲ್ಲಿ ಮಾಜಿ ತಾಪಂ ಮಾಜಿ ಉಪಾಧ್ಯಕ್ಷ ಕುಮಾರ್‌, ವಿಜಯ ಕುಮಾರ್‌, ಹಿರಿಯ ಮುಖಂಡ ಮೊಗಪ್ಪಗೌಡ ಇನ್ನಿತರ ಜೆಡಿಎಸ್‌ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿ, ಸ್ಥಳೀಯ ಶಾಸಕರು ದೂರವಾ ಣಿಗೆ ಸ್ಪಂದಿಸುತ್ತಿಲ್ಲ. ಕೆಲವೇ ಕೆಲ ಕಾರ್ಯಕರ್ತರನ್ನು ಮಾತ್ರ ಪರಿಗಣಿಸುತ್ತಿದ್ದಾರೆ. ಕಾರ್ಯಕರ್ತರಿಗೆ ಶಕ್ತಿ ತುಂಬುವ ಬದಲು ಅವರಿಗೆ ಮಾನಸಿಕ ನೋವು ನೀಡಿದ್ದಾರೆ. ಮಲೆನಾಡು ಭಾಗದ ನಿಷ್ಠಾವಂತ ಜೆಡಿಎಸ್‌ ಕಾರ್ಯಕರ್ತರನ್ನು ತೀವ್ರವಾಗಿ ಕಡೆಗಣಿಸಿದ್ದಾರೆ. ಯುವಕರಿಗೆ ಪಕ್ಷದಲ್ಲಿ ಆದ್ಯತೆ ನೀಡುತ್ತಿಲ್ಲ. ರಸ್ತೆ ಗುಂಡಿಯಿಂದ ಹದಗೆಟ್ಟಿದೆ. ರೇವಣ್ಣನವರು ಮತ್ತು ಪ್ರಜ್ವಲ್‌ ರೇವಣ್ಣ ಅವರು ಚುನಾವಣೆ ವೇಳೆ ಬೇಲೂರಿಗೆ ಬರುತ್ತಾರೆ. ನೆರೆ ಪರಿಹಾರ ವಿಳಂಬವಾಗಿದೆ. ಪದಾಧಿಕಾರಿಗಳ ಅಯ್ಕೆ ವೇಳೆ ತಮಗೆ ಇಷ್ಟ ಬಂದ ವ್ಯಕ್ತಿಗಳಿಗೆ ಮಣೆ ಹಾಕುತ್ತಾರೆ ಎಂದು ಸ್ಥಳೀಯ ಶಾಸಕರು ಮತ್ತು ಜೆಡಿಎಸ್‌ ನಾಯಕರ ವಿರುದ್ಧ ಸಭೆಯಲ್ಲಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.

ಸರ್ಕಾರಕ್ಕೆ ರೇವಣ್ಣ ಎಚ್ಚರಿಕೆ: ಮಾಜಿ ಸಚಿವ ಎಚ್‌ .ಡಿ.ರೇವಣ್ಣ ಮಾತನಾಡಿ, ಪ್ರತಿ ತಾಲೂಕಿನಲ್ಲಿ ತಲಾ ಒಂದು ದಿನದ ಕಾರ್ಯಕರ್ತರ ಸಭೆ ಹಮ್ಮಿಕೊಂಡು ಕಾರ್ಯಕರ್ತರ ಸಮಸ್ಯೆ ಹಾಗೂ ಸಲಹೆ ಸಂಗ್ರಹಿಸಲಾಗುತ್ತಿದೆ. ಅಲ್ಲದೆ ಜಿಲ್ಲೆಯಲ್ಲಿ ಎಂದೂ ಕಾಣದ ಅತಿವೃಷ್ಟಿ ಪರಿಹಾರ ನೀಡುವಲ್ಲಿ ಸರ್ಕಾರ ತೀವ್ರ ವಿಳಂಬ ನೀತಿ ಅನುಸರಿಸುತ್ತಿರುವ ಹಿನ್ನೆಲೆ ಸದ್ಯದಲ್ಲಿ ಶಾಸಕರನ್ನು ಒಳಗೊಂಡು ಸಂಬಂಧಿಸಿದ ಇಲಾಖೆ ಮುಂದೆ ಧರಣಿ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರಲ್ಲದೆ ಪಕ್ಷಕ್ಕೆ ಕಾರ್ಯಕರ್ತರೆ ಜೀವಾಳವಾಗಿದ್ದು ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದರು.

ಸಮಗ್ರ ಅಭಿವೃದ್ಧಿ ಗುರಿ: ತಾಲೂಕು ಜೆಡಿಎಸ್‌ ಅಧ್ಯಕ್ಷ ತೊ.ಚ.ಅನಂತಸುಬ್ಬರಾಯ ಮಾತನಾಡಿ, ಈಗಾಗಲೇ ಹೋಬಳಿ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ನೇಮಕ ಪ್ರಕ್ರಿಯೆ ನಡೆಯುತ್ತಿದೆ. ಬೇಲೂರು ವಿಧಾನಸಭೆಗೆ ಜೆಡಿಎಸ್‌ ಪಕ್ಷದಿಂದ ಹಾಲಿ ಶಾಸಕರಾದ ಲಿಂಗೇಶ್‌ ಅಂತಿಮ ಅಭ್ಯರ್ಥಿ ಎಂದ ಅವರು ಪಕ್ಷ ಎಂದಿಗೂ ಮಲೆನಾಡು ಪ್ರದೇಶವನ್ನು ನಿರ್ಲಕ್ಷ್ಯ ಮಾಡಿಲ್ಲ, ಜಿಲ್ಲೆಯ ಮತ್ತು ರಾಜ್ಯ ಸಮಗ್ರ ಅಭಿವೃದ್ಧಿ ಜೆಡಿಎಸ್‌ ಪಕ್ಷಕ್ಕೆ ಶಕ್ತಿ ತುಂಬಬೇಕಿದೆ ಎಂದು ಹೇಳಿದರು.

ಬಿಜೆಪಿ ಸರ್ಕಾರದಲ್ಲಿ ಅಭಿವೃದ್ಧಿ ಹಿನ್ನಡೆ: ಜೆಡಿಎಸ್‌ ಮುಖಂಡರಾದ ಎಂ.ಎ.ನಾಗರಾಜು, ಮಲ್ಲೇಗೌಡ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆರಾದ ಲತಾ ಮಂಜೇಶ್ವರಿ, ಇಂದಿರಾ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರಾದ ರಂಗೇಗೌಡ, ಹರೀಶ್‌ ಸದಸ್ಯರಾದ ಕಮಲ , ಅಬ್ದುಲ್‌ ಸುಭಾನ್‌, ಕಮಲ ಚನ್ನಪ್ಪ, ಪುರಸಭೆ ಮಾಜಿ ಅಧ್ಯಕ್ಷ ಟಿ.ಎ.ಶ್ರೀ ನಿಧಿ,ಮುಖಂಡರಾದ ದೊಡ್ಡವೀರೇಗೌಡ, ಸಿ.ಹೆಚ್‌. ಮಹೇಶ್‌, ಅಬ್ದುಲ್‌ ಖಾದರ್‌, ಇತರರು ಇದ್ದರು.

Advertisement

ಅಭಿವೃದ್ಧಿ ಹಿನ್ನಡೆ : ಕೆಲ ಸಂದರ್ಭದಲ್ಲಿ ಕಾರ್ಯಕರ್ತರ ದೂರ ವಾಣಿ ಸ್ಪಂದಿಸಲು ಸಾಧ್ಯವಾಗಿಲ್ಲ, ಹಾಗಂತ ಅಭಿವೃದ್ಧಿ ಕಡೆಗಣಿಸಿಲ್ಲ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಜಿಲ್ಲೆಗೆ ಬಿಡುಗಡೆ ಯಾದ ಅನುದಾನವನ್ನು ಹಿಂಪಡೆಯುವ ಮೂಲಕ ಸೇಡಿನ ರಾಜಕಾರಣ ಮಾಡಿದ್ದಾರೆ. ಮಲೆನಾಡು ಭಾಗದಲ್ಲಿ ಅಭಿವೃದ್ಧಿ ಸ್ವಲ್ಪ ಮಟ್ಟಿಗೆ ಹಿನ್ನಡೆಯಾಗಿದೆ. ಮುಂದಿನ ದಿನಗಳಲ್ಲಿ ಅಭಿವೃದ್ಧಿ ಒತ್ತು ನೀಡಲಾಗುತ್ತದೆ ಎಂದು ಶಾಸಕ ಕೆ.ಎಸ್‌.ಲಿಂಗೇಶ್‌ ಸಮರ್ಥಿಸಿಕೊಂಡು ಕಾರ್ಯಕರ್ತರನ್ನು ಸಮಾಧಾನ ಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next