Advertisement

ಸಾವಿನ ಮೆರವಣಿಗೆ ಮತ್ತೆ ಬೇಡ, ಯಾರೂ ಎಚ್ಚರ ತಪ್ಪುವುದು ಬೇಡ: ಕುಮಾರಸ್ವಾಮಿ ಮನವಿ

02:34 PM Nov 29, 2021 | Team Udayavani |

ಬೆಂಗಳೂರು: ಕೋವಿಡ್‌19 ಮೊದಲ ಅಲೆಯ ಆತಂಕ, ಎರಡನೇ ಅಲೆ ಸೃಷ್ಟಿಸಿದ ನರಕಯಾತನೆ ಎಂಥದ್ದು ಎಂದು ನಾವೆಲ್ಲ ಕಂಡು, ಅನುಭವಿಸಿದ್ದೇವೆ. ಆಸ್ಪತ್ರೆಯಲ್ಲಿ ಬೆಡ್‌ ಸಿಗದೇ, ಬದುಕುಳಿಯಲು ಪ್ರಾಣವಾಯುವೂ ಸಿಗದೇ ಉಸಿರು ಚೆಲ್ಲಿದ ಜೀವಗಳನ್ನು ನೆನೆಸಿಕೊಂಡರೆ ಕಣ್ಣುಗಳ ಕಟ್ಟೆಯೊಡೆಯುತ್ತದೆ. ಅಂಥ ಸಾವಿನ ಮೆರವಣಿಗೆ ಮತ್ತೆ ಬೇಡ. ಯಾರೂ ಎಚ್ಚರ ತಪ್ಪುವುದು ಬೇಡ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಮನವಿ ಮಾಡಿದ್ದಾರೆ.

Advertisement

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಕೋವಿಡ್ ಹೊಸ ತಳಿ ಓಮಿಕ್ರಾನ್ 30ಕ್ಕೂ ಹೆಚ್ಚು ರೂಪಾಂತರ ಹೊಂದಿರುವ ವರದಿ ಇದೆ. ಭಾರತವೂ ಸೇರಿ ಜಗತ್ತಿನ ವಿವಿಧ ದೇಶಗಳಲ್ಲಿ ಮಾರಕ ಮಾರಿ ಪುನಾ ಅಬ್ಬರಿಸುತ್ತಿದೆ. ಕೇಂದ್ರ ಸರಕಾರ, ಏಮ್ಸ್ ವೈದ್ಯರು ಈಗಾಗಲೇ ಎಚ್ಚರಿಕೆ ನೀಡಿದ್ದಾರೆ. ಎಲ್ಲೆಡೆ ಕೆನ್ನಾಲಗೆ ಚಾಚಿರುವ ಕೊರೋನಾ ಹೊಸ ತಳಿಯನ್ನೆದುರಿಸಲು ನಮಗೊಂದಿಷ್ಟು ತಾಳ್ಮೆ ಬೇಕಿದೆ ಎಂದಿದ್ದಾರೆ.

ಇದನ್ನೂ ಓದಿ:ಒಮಿಕ್ರಾನ್‌ ನಿಗ್ರಹಕ್ಕೆ ಸಿದ್ಧತೆ; ತಪಾಸಣೆ, ಸೋಂಕು ಪರೀಕ್ಷೆ ಹೆಚ್ಚಿಸಲು ರಾಜ್ಯಗಳಿಗೆ ಸೂಚನೆ

ಕೋವಿಡ್ ಶಿಷ್ಟಾಚಾರ ಪಾಲಿಸೋಣ. ಮಾಸ್ಕ್, ಸ್ಯಾನಿಟೈಸ್, ದೈಹಿಕ ಅಂತರ ಪಾಲನೆ ಮಹಾಮಾರಿ ನಿಯಂತ್ರಣಕ್ಕಿರುವ ಸರಳಸೂತ್ರಗಳು. ಅಗತ್ಯವಿದ್ದರೆ ಓಡಾಡಿ. ಹೊರಗೆ ಬಂದಾಗ ಮುನ್ನೆಚ್ಚರಿಕೆ ಜತೆಗೆ, ಇನ್ನೊಬ್ಬರ ಆರೋಗ್ಯದ ಬಗ್ಗೆ ಕಾಳಜಿ ಇರಲಿ. ಯಾವ ಕಾರಣಕ್ಕೂ ಮತ್ತೊಂದು ಸಾವಿನ ಅಲೆಗೆ ಅವಕಾಶ ಕೊಡುವುದು ಬೇಡ ಎಂದು ಎಚ್ ಡಿಕೆ ಮನವಿ ಮಾಡಿದ್ದಾರೆ.

Koo App

Advertisement

ಭಾರತವೂ ಸೇರಿ ಜಗತ್ತಿನ ವಿವಿಧ ದೇಶಗಳಲ್ಲಿ ಮಾರಕ ಮಾರಿ ಪುನಾ ಅಬ್ಬರಿಸುತ್ತಿದೆ. ಕೇಂದ್ರ ಸರಕಾರ, ಏಮ್ಸ್ ವೈದ್ಯರು ಈಗಾಗಲೇ ಎಚ್ಚರಿಕೆ ನೀಡಿದ್ದಾರೆ. ಎಲ್ಲೆಡೆ ಕೆನ್ನಾಲಗೆ ಚಾಚಿರುವ ಕೊರೋನಾ ಹೊಸ ತಳಿಯನ್ನೆದುರಿಸಲು ನಮಗೊಂದಿಷ್ಟು ತಾಳ್ಮೆ ಬೇಕಿದೆ. ಕೊರೋನ ಶಿಷ್ಟಾಚಾರ ಪಾಲಿಸೋಣ. ಮಾಸ್ಕ್, ಸ್ಯಾನಿಟೈಸ್, ದೈಹಿಕ ಅಂತರ ಪಾಲನೆ ಮಹಾಮಾರಿ ನಿಯಂತ್ರಣಕ್ಕಿರುವ ಸರಳಸೂತ್ರಗಳು. ಅಗತ್ಯವಿದ್ದರೆ ಓಡಾಡಿ. ಹೊರಗೆ ಬಂದಾಗ ಮುನ್ನೆಚ್ಚರಿಕೆ ಜತೆಗೆ, ಇನ್ನೊಬ್ಬರ ಆರೋಗ್ಯದ ಬಗ್ಗೆ ಕಾಳಜಿ ಇರಲಿ. 2/3

H D Kumaraswamy (@h_d_kumaraswamy) 29 Nov 2021

Advertisement

Udayavani is now on Telegram. Click here to join our channel and stay updated with the latest news.

Next