ನವದೆಹಲಿ: ಎಚ್ ಸಿಎಲ್ ಟೆಕ್ನಾಲಜೀಸ್ ಹಾಗೂ ಶಿವ ನಾಡಾರ್ ಫೌಂಡೇಶನ್ ಸ್ಥಾಪಕ ಶಿವ ನಾಡಾರ್ ಅವರು 2023ನೇ ಸಾಲಿನಲ್ಲಿಯೂ ಪ್ರತಿದಿನ ಅಂದಾಜು 5.6 ಕೋಟಿ ರೂಪಾಯಿಯಷ್ಟು ದೇಣಿಗೆ ನೀಡುವ ಮೂಲಕ ದೇಶದ ಮಹಾದಾನಿ ಎಂಬ ಹೆಗ್ಗಳಿಕೆಗೆ ಭಾಜನರಾಗಿದ್ದಾರೆ.
ಇದನ್ನೂ ಓದಿ:Iran; ಮಾದಕವಸ್ತು ವ್ಯಸನಿಗಳ ಪುನರ್ವಸತಿ ಕೇಂದ್ರದಲ್ಲಿ ಭೀಕರ ಅಗ್ನಿ ಅವಘಡ: 27 ಮಂದಿ ಮೃತ್ಯು
ದೇಶದ ಮಹಾದಾನಿ ಶಿವ ನಾಡಾರ್ ಅವರು 2023ನೇ ಸಾಲಿನಲ್ಲಿ ಬರೋಬ್ಬರಿ 2,042 ಕೋಟಿ ರೂಪಾಯಿಯಷ್ಟು ಹಣವನ್ನು ದೇಣಿಗೆ ನೀಡಿದ್ದು, ಅಂದಾಜು ಪ್ರತಿದಿನ ಸುಮಾರು 5.6 ಕೋಟಿ ರೂಪಾಯಿಯಷ್ಟು ದೇಣಿಗೆ ನೀಡಿದಂತಾಗಿದೆ ಎಂದು ವರದಿ ತಿಳಿಸಿದೆ.
ಎಡೆಲ್ ಗಿವ್ ಹೂರೂನ್ ಇಂಡಿಯಾ Philanthropy ಬಿಡುಗಡೆಗೊಳಿಸಿರುವ ವರದಿಯಲ್ಲಿ ನಾಡಾರ್ ದೇಣಿಗೆ ಬಗ್ಗೆ ತಿಳಿಸಿದ್ದು, ನಾಡಾರ್ ಅವರು ಶಿಕ್ಷಣ, ಕಲೆ ಮತ್ತು ಸಂಸ್ಕೃತಿಯನ್ನೊಳಗೊಂಡ ಪ್ರಮುಖ ಕ್ಷೇತ್ರಗಳಿಗೆ ದೇಣಿಗೆ ನೀಡುತ್ತಿರುವುದಾಗಿ ವರದಿ ವಿವರಿಸಿದೆ.
ಪ್ರಸಕ್ತ ಸಾಲಿನ ದಾನಿಗಳ ಪಟ್ಟಿಯಲ್ಲಿ 24 ಮಂದಿ ಇದ್ದು, ಇದರಲ್ಲಿ ಟಾಪ್ 10ನಲ್ಲಿ ಶಿವ ನಾಡಾರ್, ಅಜೀಂ ಪ್ರೇಮ್ ಜಿ, ನಂದನ್ ನಿಲೇಕಣಿ, ರೋಹಿಣಿ ನಿಲೇಕಣಿ, ನಿತೀನ್ ಮತ್ತು ನಿಖಿಲ್ ಕಾಮತ್, ಸುಬ್ರೋತೋ ಬಾಗ್ಚಿ, ಸುಶ್ಮಿತಾ ಹಾಗೂ ಎಎಂ ನಾಯ್ಕ್ ಸೇರಿದ್ದಾರೆ ಎಂದು ವರದಿ ತಿಳಿಸಿದೆ.
ಮಹಾದಾನಿಯ ಪಟ್ಟಿಯಲ್ಲಿ ಶಿವ ನಾಡಾರ್ ಮೊದಲ ಸ್ಥಾನದಲ್ಲಿದ್ದು, ಅಜೀಂ ಪ್ರೇಮ್ ಜೀ ಎರಡನೇ ಸ್ಥಾನದಲ್ಲಿದ್ದಾರೆ. ವಿಪ್ರೋ ಸ್ಥಾಪಕ ಪ್ರೇಮ್ ಜೀ ಅವರು ಪ್ರಸಕ್ತ ಸಾಲಿನಲ್ಲಿ 1,774 ಕೋಟಿ ರೂಪಾಯಿ ದೇಣಿಗೆ ನೀಡಿರುವುದಾಗಿ ವರದಿ ತಿಳಿಸಿದೆ.