Advertisement

ಪಿಐಎ ಶಾಖೆ ಕ್ರಮಬದ್ಧ ಕೋರಿಕೆ ತಿರಸ್ಕರಿಸಿದ ಆರ್‌ಬಿಐ: ಕೋರ್ಟ್‌ ತಡೆ

03:55 PM May 31, 2018 | Team Udayavani |

ಹೊಸದಿಲ್ಲಿ : ಪಾಕಿಸ್ಥಾನ್‌ ಇಂಟರ್‌ ನ್ಯಾಶನಲ್‌ ಏರ್‌ ಲೈನ್ಸ್‌ ನ ಭಾರತದಲ್ಲಿರುವ ಶಾಖೆಗಳನ್ನು ಕ್ರಮಬದ್ಧಗೊಳಿಸುವ ಪಿಐಎ ಕೋರಿಕೆಯನ್ನು ಭಾರತೀಯ ರಿಸರ್ವ್‌ ಬ್ಯಾಂಕ್‌ ತಿರಸ್ಕರಿಸಿರುವ ಆದೇಶಕ್ಕೆ ದಿಲ್ಲಿ ಹೈಕೋರ್ಟ್‌ ತಡೆಯಾಜ್ಞೆ ನೀಡಿದೆ. 

Advertisement

ಭಾರತದಲ್ಲಿನ ಪಿಐಎ ಶಾಖೆಗಳನ್ನು ಕ್ರಮಬದ್ಧ ಗೊಳಿಸಬೇಕೆಂಬ ಕೋರಿಕೆಯನ್ನು ಯಾವ ಕಾರಣಗಳಿಗಾಗಿ ತಿರಸ್ಕರಿಸಲಾಗಿದೆ ಎಂಬುದನ್ನು ಆರ್‌ಬಿಐ ತಿಳಿಸಿಲ್ಲವಾದ್ದರಿಂದ ಅದರ ಈ ಕ್ರಮಕ್ಕೆ ಜಸ್ಟಿಸ್‌ ರಾಜೀವ್‌ ಶಕ್‌ಧರ್‌ ಅವರು ತಡೆಯಾಜ್ಞೆ ನೀಡಿದರು. 

ಪಿಐಎ ಕೋರಿಕೆಯನ್ನು ತಿರಸ್ಕರಿಸಲಾಗಿದೆ ಎಂದು ಹೇಳುವ ಹಣಕಾಸು ಸಚಿವಾಲಯದ ಪತ್ರದ ನೆಲೆಯಲ್ಲಿ ಆರ್‌ಬಿಐ ತನ್ನ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ಅದರ ವಕೀಲರು ಕೋರ್ಟಿಗೆ ಮೌಖೀಕವಾಗಿ ತಿಳಿಸಿದರು. 

“ಹಾಗಿದ್ದರೂ ಯಾವ ಕಾರಣಗಳಿಗೆ ಪಿಐಎ ಕೋರಿಕೆಯನ್ನು ತಿರಸ್ಕರಿಸಲಾಗಿದೆ ಎಂಬುದು ಹಣಕಾಸು ಸಚಿವಾಲಯದ ಪತ್ರದಲ್ಲಿ ಸ್ಪಷ್ಟವಾಗಿಲ್ಲ’ ಎಂದು ನ್ಯಾಯಾಧೀಶರು ಆರ್‌ಬಿಐ ಕ್ರಮಕ್ಕೆ ತಡೆ ನೀಡಿದರು. 

Advertisement

Udayavani is now on Telegram. Click here to join our channel and stay updated with the latest news.

Next