ಚೆನ್ನೈ: ನವೆಂಬರ್ 6 ರಂದು ತಮಿಳುನಾಡಿನಾದ್ಯಂತ 44 ಸ್ಥಳಗಳಲ್ಲಿ ಪಥ ಸಂಚಲನ ನಡೆಸಲು ಆರ್‌ಎಸ್‌ಎಸ್‌ಗೆ ಮದ್ರಾಸ್ ಹೈಕೋರ್ಟ್ ಶುಕ್ರವಾರ ಅನುಮತಿ ನೀಡಿದೆ.
50 ರಲ್ಲಿ 44 ಸ್ಥಳಗಳಲ್ಲಿಮೆರವಣಿಗೆಗೆ ಅನುಮತಿ ನೀಡಬಹುದು ಎಂದು ಮದ್ರಾಸ್ ಹೈಕೋರ್ಟ್‌ನ ನ್ಯಾಯಮೂರ್ತಿ ಜಿಕೆ ಇಳಂತಿರಾಯನ್ ಹೇಳಿದ್ದಾರೆ. ಎಲ್ಲಾ ಸ್ಥಳಗಳಿಗೆ ಸಂಬಂಧಿಸಿದಂತೆ ಗುಪ್ತಚರ ವರದಿಗಳಲ್ಲಿ ತನಗೆ ಪ್ರತಿಕೂಲವಾದ ಏನೂ ಕಂಡುಬಂದಿಲ್ಲ ಮತ್ತು 6 ಸ್ಥಳಗಳಲ್ಲಿ ಮಾತ್ರ ಅಹಿತಕರ ಘಟನೆಗಳು ಸಂಭವಿಸುವ ಸಾಧ್ಯತೆಗಳಿವೆ ಎಂದು ಅವರು ಹೇಳಿದರು.
ಮೆರವಣಿಗೆಗಳನ್ನು ಶಾಂತಿಯುತವಾಗಿ ನಡೆಸಬೇಕು, ಇಲ್ಲದಿದ್ದರೆ ಪರಿಣಾಮಗಳನ್ನು ಎದುರಿಸಬೇಕು ಎಂದು ನ್ಯಾಯಾಲಯ ತೀರ್ಪು ನೀಡಿದೆ. ಕೊಯಮತ್ತೂರು, ಪೊಲ್ಲಾಚಿ ಮತ್ತು ನಾಗರ್‌ಕೋಯಿಲ್ ಸೇರಿದಂತೆ ಆರು ಕೋಮು ಸೂಕ್ಷ್ಮ ಸ್ಥಳಗಳಲ್ಲಿ ಮೆರವಣಿಗೆಗೆ ನ್ಯಾಯಾಲಯ ಅನುಮತಿ ನಿರಾಕರಿಸಿದೆ.
ಗುಪ್ತಚರ ಸಂಸ್ಥೆಗಳ ವರದಿಗಳಲ್ಲಿ ವ್ಯತಿರಿಕ್ತವಾಗಿ ಏನೂ ಕಂಡುಬಂದಿಲ್ಲ ಎಂದು ತೀರ್ಪು ನೀಡಿದ ನ್ಯಾಯಾಲಯ, ಎರಡು ತಿಂಗಳ ನಂತರ ಇತರ ಆರು ಸ್ಥಳಗಳಲ್ಲಿ ಮೆರವಣಿಗೆಗೆ ಅನುಮತಿ ಪಡೆಯಲು ಆರ್‌ಎಸ್‌ಎಸ್‌ಗೆ ಅನುಮತಿ ನೀಡಿದೆ.
ಕೊಯಮತ್ತೂರು ಇತ್ತೀಚೆಗೆ ದೀಪಾವಳಿಯ ಒಂದು ದಿನದ ಮೊದಲು ಕಾರ್ ಸ್ಫೋಟಕ್ಕೆ ಸಾಕ್ಷಿಯಾಗಿತ್ತು, ಇದರಲ್ಲಿ ಜಮೀಶಾ ಮುಬಿನ್ ಎಂಬ ಉಗ್ರ ನಂಟು ಹೊಂದಿದ್ದವ ಸಾವನ್ನಪ್ಪಿದ್ದ. ಷ್ಟ್ರೀಯ ತನಿಖಾ ಸಂಸ್ಥೆಯು ಈ ಪ್ರಕರಣದ ತನಿಖೆ ನಡೆಸುತ್ತಿದೆ.
ಈ ಹಿಂದೆ ಆರ್‌ಎಸ್‌ಎಸ್ ಸಂಘಟನೆಯು ಕೋರಿದ್ದ 50 ಸ್ಥಳಗಳ ಪೈಕಿ ಮೂರರಲ್ಲಿ ಮಾತ್ರ ಮೆರವಣಿಗೆಗೆ ರಾಜ್ಯ ಸರಕಾರ ಅನುಮತಿ ನೀಡಿತ್ತು. ನಂತರ ಆರ್‌ಎಸ್‌ಎಸ್ ಕೋರ್ಟ್ ಗೆ ನಿಂದನೆ ಅರ್ಜಿಯನ್ನು ಸಲ್ಲಿಸಿತ್ತು.