Advertisement

ರೇಪಾದ ಬಾಲಕಿಯ ಗರ್ಭಪಾತಕ್ಕೆ ಮದ್ರಾಸ್‌ ಹೈಕೋರ್ಟ್‌ ಅನುಮತಿ

12:26 PM May 05, 2018 | udayavani editorial |

ಚೆನ್ನೈ : ಐದು ತಿಂಗಳ ಹಿಂದೆ ತನಗೆ ಪರಿಚಯ ಇದ್ದವನಿಂದಲೇ ಅತ್ಯಾಚಾರಕ್ಕೆ ಗುರಿಯಾಗಿ ಗರ್ಭವತಿಯಾಗಿದ್ದ 14 ವರ್ಷ ಪ್ರಾಯದ ಬಾಲಕಿಗೆ ಗರ್ಭಪಾತ ಮಾಡಿಸಿಕೊಳ್ಳಲು ಮದ್ರಾಸ್‌ ಹೈಕೋರ್ಟ್‌ ಅನುಮತಿ ನೀಡಿದೆ.

Advertisement

ಚೆಂಗಲ್‌ಪೇಟೆಯ ಮಕ್ಕಳ ಕಲ್ಯಾಣ ಸಮಿತಿಯು ಮದ್ರಾಸ್‌ ಹೈಕೋರ್ಟಿಗೆ ಈ ವಿಷಯದಲ್ಲಿ ಸಂತ್ರಸ್ತ ಬಾಲಕಿಯ ಪರವಾಗಿ ಅರ್ಜಿ ಸಲ್ಲಿಸಿತ್ತು. 

ಜಸ್ಟಿಸ್‌ ಟಿ ರಾಜ ಅವರು ಅರ್ಜಿಯ ವಿಚಾರಣೆಯನ್ನು ನಡೆಸಿ ಚೆಂಗಲ್‌ಪೆಟ್‌ ಮೆಡಿಕಲ್‌ ಕಾಲೇಜ್‌ ಆಸ್ಪತ್ರೆಯ ಡೀನ್‌ಗೆ ಹುಡುಗಿಯ ಸುರಕ್ಷಿತ ಗರ್ಭಪಾತ ಮಾಡಿಸುವಂತೆ ಮತ್ತು ಭ್ರೂಣವನ್ನು ಸಂರಕ್ಷಿಸಿಡುವಂತೆ ಆದೇಶಿಸಿದರು. ವೈದ್ಯಕೀಯ ಪರೀಕ್ಷೆಯಲ್ಲಿ ಹುಡುಗಿಯು 18 ವಾರಗಳ ಗರ್ಭವನ್ನು ಹೊಂದಿರುವುದು ಕಂಡು ಬಂದಿತ್ತು. 

ಹುಡುಗಿಯ ಹೆತ್ತವರು ಕಾಂಚೀಪುರಂ ಕಲೆಕ್ಟರ್‌ ರನ್ನು ಸಂಪರ್ಕಿಸಿ ತಮ್ಮ ಮಗಳ ಮೇಲೆ ಐದು ತಿಂಗಳ ಹಿಂದೆ ಅತ್ಯಾಚಾರ ನಡೆದಿದ್ದು ಆಕೆಯೀಗ ಗರ್ಭವತಿಯಾಗಿದ್ದಾಳೆ ಎಂದು ದೂರು ನೀಡಿದ್ದರು. ಆಗಲೇ ಚೆಂಗಲ್‌ಪೆಟ್‌ ಮಕ್ಕಳ ಕಲ್ಯಾಣ ಸಮಿತಿ ಬಾಲಕಿಯ ಪರವಾಗಿ ಮುಂದೆ ಬಂದಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next