ಹಾವೇರಿ: ಮಳೆಹಾನಿ ಸ್ಥಳ ವೀಕ್ಷಣೆ ಮಾಡಲು ಆಗಮಿಸಿದ್ದ ಅಧಿಕಾರಿಗಳನ್ನು ಗ್ರಾಮಸ್ಥರು ಕೂಡಿಹಾಕಿದ ಘಟನೆ ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಎರೆಕುಪ್ಪಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದಲ್ಲಿ ಮಳೆಯಿಂದ ಮನೆ ಹಾಗೂ ರೈತರ ಬೆಳೆ ಹಾಳಾದ ಪರಿಣಾಮ ಬ್ಯಾಡಗಿ ಶಾಸಕ ವಿರೂಪಾಕ್ಷ ಬಳ್ಳಾರಿ ಅವರು ವೀಕ್ಷಣೆಗೆ ಆಗಮಿಸಿದ್ದ ವೇಳೆ ಈ ಘಟನೆ ನಡೆದಿದೆ.
ಗ್ರಾಮದಲ್ಲಿ ರಸ್ತೆ ಒಳಚರಂಡಿ ಸರಿಪಡಿಸುವಂತೆ ಗ್ರಾಮಸ್ಥರು ಸಾಕಷ್ಟು ಬಾರಿ ಮನವಿ ಮಾಡಿದ್ದರೂ ದುರಸ್ತಿಗೊಳಿದ ಕಾರಣ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ, ತಹಶಿಲ್ದಾರ ಶಂಕರ್ ಬಾರ್ಕಿ ಅವರನ್ನು ಗ್ರಾಮಸ್ಥರು ಮನೆಯಲ್ಲಿ ಕೂಡಿಹಾಕಿದರು.
ಇದನ್ನೂ ಓದಿ:ಗೋವಾದ ಮಹದಾಯಿ ನದಿ ರಕ್ಷಣೆಯಾಗಬೇಕು: ಮಾಜಿ ಸಚಿವ ಪಿ.ಚಿದಂಬರಂ
ಇತ್ತ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿಗೂ ತರಾಟೆಗೆ ತೆಗೆದುಕೊಂಡರು. ಈಗ ಹೋದರೆ ನೀವು ಮತ್ತೆ ಗ್ರಾಮದತ್ತ ತಿರುಗಿ ನೋಡಲ್ಲ. ಜನ ಪ್ರತಿನಿಧಿಗಳಾಗಿ ನಮ್ಮ ಸಮಸ್ಯೆ ಸರಿಪಡಿಸಿ ಎಂದು ಗ್ರಾಮಸ್ಥರು ಪಟ್ಟು ಹಿಡಿದರು.