Advertisement
ಹಿರಿಯ ಸಾಹಿತಿ ಡಾ| ದೊಡ್ಡ ರಂಗೇಗೌಡರ ಸರ್ವಾಧ್ಯಕ್ಷತೆಯಲ್ಲಿ ನಡೆಯಲಿರುವ ಸಮ್ಮೇಳನಕ್ಕೆ ಇನ್ನು ಐದು ದಿನಗಳಷ್ಟೇ ಉಳಿದಿವೆ. ರಾಷ್ಟ್ರೀಯ ಹೆದ್ದಾರಿ ಬೈಪಾಸ್ ಬಳಿ ಅಜ್ಜಯ್ಯನ ಗದ್ದುಗೆ ಎದುರಿನ ನೂರಾರು ಎಕರೆ ವಿಶಾಲ ಜಾಗದಲ್ಲಿ ಬೃಹತ್ ವೇದಿಕೆ ನಿರ್ಮಾಣವಾಗುತ್ತಿದೆ. ಮುಖ್ಯ ವೇದಿಕೆ, ಎರಡು ಸಮಾನಾಂತರ ವೇದಿಕೆ, ಪುಸ್ತಕ ಮಳಿಗೆ, ವಾಣಿಜ್ಯ ಮಳಿಗೆ ನಿರ್ಮಾಣವಾಗುತ್ತಿದೆ. ಜರ್ಮನ್ ತಂತ್ರಜ್ಞಾನದಲ್ಲಿ ವೇದಿಕೆ ನಿರ್ಮಾಣವಾಗುತ್ತಿದೆ. ಮುಖ್ಯ ವೇದಿಕೆ, ಎರಡು ಸಮಾನಾಂತರ ವೇದಿಕೆಗಳ ನಿರ್ಮಾಣ ಬಹುತೇಕ ಅಂತಿಮ ಹಂತಕ್ಕೆ ಬಂದಿದೆ.
Related Articles
ನಗರ ಅಲಂಕಾರ
Advertisement
ಮೆರವಣಿಗೆ ಸಾಗುವ ಹಾದಿಯುದ್ದಕ್ಕೂ ಗೋಡೆಗಳ ಮೇಲೆ ಚಿತ್ರ ಬಿಡಿಸುವ ಕಾರ್ಯ ನಡೆಯುತ್ತಿದೆ. ಶಾಲಾ, ಕಾಲೇಜು, ಸರಕಾರಿ ಕಟ್ಟಡಗಳ ಆವರಣ ಗೋಡೆಗಳ ಮೇಲೆ ಆಕರ್ಷಕ ವರ್ಲಿ ಚಿತ್ರಗಳು ಕಂಗೊಳಿಸುತ್ತಿವೆ.
ಆಕರ್ಷಕ ವರ್ಲಿ ಚಿತ್ರಗಳು ಪೊಲೀಸ್ ಠಾಣೆಯ ಗೋಡೆ ಮೇಲೆ ಬಿಡಿಸಿರುವ ಪೌರಾಣಿಕ ಹಿನ್ನೆಲೆ ಯುಳ್ಳ ಹಾಗೂ ಜನಪದ ಜೀವನ ಶೈಲಿಯ ಚಿತ್ರಗಳಾದ ಸುಗ್ಗಿಯ ದಿನಗಳು, ರೈತರು ಹಾಗೂ ಆಲಂಕಾರಿಕ ಬಳ್ಳಿಗಳು, ಮದುವೆ ದಿಬ್ಬಣ, ಸಾಲು ರಹಿತ ದಸರಾ ಆನೆಗಳು, ರಂಗೋಲಿ ಚಿತ್ರ, ತೋರಣ, ಪ್ರಾಣಿ, ಪಕ್ಷಿ, ನವಿಲು, ಒಂಟಿ, ಮೊಲ, ಜಿಂಕೆ, ಸ್ವಾಗತ ಬೋರ್ಡ್‌ಗಳು ಸಹಿತ ವಿವಿಧ ರೀತಿಯ ವರ್ಲಿ ಚಿತ್ರಗಳನ್ನು ಬಿಡಿಸಲಾಗುತಿದೆ. ಮೂರು ವೇದಿಕೆಗಳ ನಿರ್ಮಾಣ
ಸಮ್ಮೇಳನಕ್ಕಾಗಿ ಒಂದು ಪ್ರಧಾನ ವೇದಿಕೆ ಹಾಗೂ ಎರಡು ಸಮಾನಾಂತರ ವೇದಿಕೆಗಳನ್ನು ನಿರ್ಮಿಸಲಾಗುತ್ತಿದೆ. ಮೊದಲ ವೇದಿಕೆಯಲ್ಲಿ 30 ಸಾವಿರ ಜನರು ಹಾಗೂ ಉಳಿದ ವೇದಿಕೆಯಲ್ಲಿ ತಲಾ 2,500 ಆಸನಗಳ ವ್ಯವಸ್ಥೆ ಮಾಡಲಾಗಿದೆ. 600 ಮಳಿಗೆಗಳನ್ನು ಹಾಕಲಾಗಿದೆ. ಜಿಲ್ಲೆಗೊಂದರಂತೆ 30 ಕೌಂಟರ್‌ಗಳನ್ನು ಸ್ಥಾಪಿಸಲಾಗಿದೆ. 10 ಸಾವಿರ ಪ್ರತಿನಿ ಧಿಗಳ ನೋಂದಣಿಯಾಗಿದೆ. ಎಲ್ಲರಿಗೂ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ಗಣ್ಯರಿಗೆ, ಮಾಧ್ಯಮದವರಿಗೆ ಪ್ರತ್ಯೇಕ ಊಟದ ವ್ಯವಸ್ಥೆ, ಮಾರ್ಗವ್ಯವಸ್ಥೆ, ವಾಹನ ನಿಲುಗಡೆ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾ ಧಿಕಾರಿ ರಘುನಂದ ಮೂರ್ತಿ ತಿಳಿಸಿದರು. ಸಮ್ಮೇಳನ ವೇದಿಕೆ ನಿರ್ಮಾಣದ ಕಾರ್ಯ ಭರದಿಂದ ಸಾಗಿದೆ. ಇನ್ನೆರಡು ದಿನಗಳಲ್ಲಿ ವೇದಿಕೆ ಸಂಪೂರ್ಣವಾಗಿ ಸಿದ್ಧಗೊಳ್ಳಲಿದೆ. ಕನ್ನಡದ ಅಸ್ಮಿತೆಯನ್ನು ಬೆಳಗಿಸುವ ನಿಟ್ಟಿನಲ್ಲಿ ಹಾವೇರಿಯಲ್ಲಿ ನಡೆಯುವ 86ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 86 ಕನ್ನಡ ಸಾಧಕರಿಗೆ ಸಮ್ಮಾನ ಆಯೋಜಿಸಲಾಗಿದೆ. “ಸಾಮರಸ್ಯದ ಭಾವ ಕನ್ನಡದ ಜೀವ’ ಎಂಬ ವಿಷಯದ ಮೇಲೆ ಮೊದಲ ವೇದಿಕೆಯಲ್ಲಿ ಮೊದಲ ಗೋಷ್ಠಿ ಆರಂಭಗೊಳ್ಳಲಿದೆ. 37 ವಿಚಾರಗೋಷ್ಠಿಗಳನ್ನು ಆಯೋ ಜಿಸಲಾಗಿದೆ. ಮುಖ್ಯಮಂತ್ರಿಗಳು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
-ಡಾ| ಮಹೇಶ ಜೋಷಿ, ಕಸಾಪ ಅಧ್ಯಕ್ಷ – ವೀರೇಶ ಮಡ್ಲುರಾ