Advertisement
ಬಂಕಾಪುರ, ಹಾವೇರಿ, ಹಾನಗಲ್ಲ, ಶಿಗ್ಗಾವಿ, ಸವಣೂರ ಸೇರಿದಂತೆ ವಿವಿಧ ಶಾಲಾ, ಕಾಲೇಜುಗಳಿಗೆ ನೂರಾರು ವಿದ್ಯಾರ್ಥಿಗಳು ಪ್ರತಿನಿತ್ಯ ಸಂಚರಿಸುತ್ತೇವೆ. ಆದರೆ, ಬಸ್ ಚಾಲಕರು ವಿದ್ಯಾರ್ಥಿಗಳನ್ನು ಕಂಡರೆ ಬಸ್ ನಿಲ್ಲಿಸದೇ ಪಲಾಯನಗೈಯುತ್ತಾರೆ. ಇದರಿಂದ ನಮ್ಮ ವ್ಯಾಸಂಗಕ್ಕೆ ತುಂಬಾ ತೊಂದರೆಯಾಗುತ್ತಿದೆ. ಚಾಲಕರಿಗೆ ಬಸ್ ನಿಲುಗಡೆಗೊಳಿಸಲು ಮೇಲಧಿಕಾರಿಗಳಿಂದ ಅಧಿಕೃತ ಆದೇಶವಿದ್ದರೂ ಅದನ್ನು ಪಾಲಿಸದೇ ವಿದ್ಯಾರ್ಥಿಗಳನ್ನು ಕಂಡರೆ ಮಲತಾಯಿ ಧೋರಣೆ ಅನುರಿಸುತ್ತಿದ್ದಾರೆ ಎಂದು ದೂರಿದರು.
Related Articles
Advertisement
ವಿಷಯ ತಿಳಿದು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಪಿಎಸ್‌ಐ ಪರಶುರಾಮ ಕಟ್ಟಿಮನಿ ಅವರು, ವಿದ್ಯಾರ್ಥಿಗಳ ಅಹವಾಲು ಆಲಿಸಿ ಮಾತನಾಡಿ, ಬಸ್ ನಿಲ್ಲಿಸಿ ಪ್ರತಿಭಟನೆ ಮಾಡುವುದು ಸರಿಯಾದ ಕ್ರಮವಲ್ಲ. ಬಸ್ ಚಾಲಕ ತಪ್ಪು ಮಾಡಿದರೆ ಅವರ ಮೇಲೆ ಸಂಬಂಧಿಸಿದ ಮೇಲಧಿ ಕಾರಿಗಳಿಗೆ ದೂರು ಕೊಡಿ. ಚಾಲಕ ತಪ್ಪು ಮಾಡಿದರೆ ಅವರ ಮೇಲೆ ಮೇಲಧಿಕಾರಿಗಳು ಕ್ರಮ ಜರುಗಿಸುತ್ತಾರೆ ಎಂದು ವಿದ್ಯಾರ್ಥಿಗಳನ್ನು ಸಮಾಧಾನಪಡಿಸಿದರು. ನಂತರ ವಿದ್ಯಾರ್ಥಿಗಳು ಪ್ರತಿಭಟನೆ ಹಿಂಪಡೆದರು.
ಶ್ರೀಕಾಂತ ಪಾಟೀಲ, ಮಲ್ಲೇಶಪ್ಪ ವಟವಟಿ, ಪುಟ್ಟಯ್ಯ ಮಡ್ಲಿಮಠ, ಸಚಿನ್‌ಗೌಡ ಪಾಟೀಲ, ಸುರೇಶ ಉಳ್ಳಟ್ಟಿ, ವಿಶ್ವನಾಥ, ಚಂದ್ರಗೌಡ, ಯಲ್ಲಪ್ಪಗೌಡ, ನಂದಿಧೀಶ ಪಾಟೀಲ ಇತರರು ಭಾಗವಹಿಸಿದ್ದರು.
ವಿದ್ಯಾರ್ಥಿ ಜೀವನ ಮುಗಿಸದೇ ನೌಕರಿಗೆ ಪಡೆದರಾ? ಬಸ್ ಚಾಲಕ, ನಿರ್ವಾಹಕರು ವಿದ್ಯಾರ್ಥಿ ಜೀವನ ಮುಗಿಸದೇ ನೌಕರಿಗೆ ಪಡೆದರಾ? ಇವರಿಗೆ ವಿದ್ಯಾರ್ಥಿಗಳ ಸಮಸ್ಯೆ ಅರ್ಥವಾಗುವುದಿಲ್ಲವಾ? ಎಂದು ಪ್ರತಿಭಟನಾಕಾರರು ಬಸ್ ಚಾಲಕನನ್ನು ತರಾಟೆಗೆ ತೆಗೆದುಕೊಂಡರು. ನಂತರ ಪಿಎಸ್‌ಐ ಪರಶುರಾಮ ಕಟ್ಟಿಮನಿ ಅವರು ವಿದ್ಯಾರ್ಥಿಗಳನ್ನು ಸಮಾಧಾನಪಡಿಸಿದರು.