Advertisement
ಪೂರ್ಣಕುಂಭ ಹೊತ್ತ ಮಹಿಳೆಯರು ಹಾಗೂ ಕಲಾ ತಂಡಗಳ ಮೆರವಣಿಗೆಯೊಂದಿ ಗಾಂಧಿ ಸ್ತಬ್ಧಚಿತ್ರ ಯಾತ್ರೆಗೆ ಅದ್ದೂರಿ ಸ್ವಾಗತ ಕೋರಲಾಯಿತು. ದಾವಣಗೆರೆ ಪ್ರವಾಸ ಮುಗಿಸಿ ಹರಿಹರ ಮಾರ್ಗವಾಗಿ ರಾಣಿಬೆನ್ನೂರ ಪ್ರವೇಶ ಮಾಡಿದ ಸ್ತಬ್ಧಚಿತ್ರ ಯಾತ್ರೆಗೆ ಗುರುವಾರ ಬೆಳಗ್ಗೆ ಗಡಿಭಾಗದಲ್ಲಿ ಮಾಗೋಡ ಕ್ರಾಸ್‌ನಲ್ಲಿ ಸ್ವಾಗತಿಸಿ ನಗರದ ವಿವಿಧ ಮಾರ್ಗಗಳಲ್ಲಿ ಮೆರವಣಿಗೆ ನಡೆಸಲಾಯಿತು. ಈ ಸಂದರ್ಭದಲ್ಲಿ ಪೂರ್ಣಕುಂಭಹೊತ್ತ ನೂರಾರು ಮಹಿಳೆಯರು ಹಾಗೂ ನೂರಾರು ಶಾಲಾ ಮಕ್ಕಳು ಭಾಗವಹಿಸಿದ್ದರು. ವಿವಿಧ ಇಲಾಖೆ ಅಧಿಕಾರಿಗಳು, ಜನಪ್ರತಿನಿಧಿಗಳು, ಮಹಿಳಾ ಸಂಘಟಕರು ಭಾಗವಹಿಸಿ ಮೆರವಣಿಗೆಗೆ ಮೆರಗು ತಂದರು.
Related Articles
Advertisement
ಹಾವೇರಿಗೆ ಆಗಮಿಸಿದ ‘ಶಾಂತಿಮಾರ್ಗ’ ಸ್ತಬ್ಧಚಿತ್ರ ಅ. 2ರಂದು ಮುಖ್ಯಮಂತ್ರಿಯವರಿಂದ ಉದ್ಘಾಟನೆಗೊಂಡು ಬೆಂಗಳೂರು ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ, ದಾವಣಗೆರೆ, ಹಾವೇರಿ, ಬಳ್ಳಾರಿ, ಕೊಪ್ಪಳ, ಗದಗ, ಬಾಗಲಕೋಟೆ, ರಾಯಚೂರು, ಯಾದರಗಿರಿ, ಕಲ್ಬುರ್ಗಿ, ಬೀದರ ಜಿಲ್ಲೆ ಒಳಗೊಂಡಂತೆ 15 ಜಿಲ್ಲೆಯ 34 ತಾಲೂಕುಗಳಲ್ಲಿ ಸಂಚಾರಿಸಿ ಜಾಗೃತಿ ಮೂಡಿಸಲಿದೆ.
ರಾಣಿಬೆನ್ನೂರ: ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ 150ನೇ ಜಯಂತಿ ನಿಮಿತ್ತ ವಾರ್ತಾ ಇಲಾಖೆ ಹಮ್ಮಿಕೊಂಡಿದ್ದ ಸ್ತಬ್ಧಚಿತ್ರ ಮೆರವಣಿಗೆ ಗುರುವಾರ ಹರಿಹರ ಮೂಲಕ ನಗರಕ್ಕೆ ಆಗಮಿಸಿತು. ನಗರದ ಹೊರ ವಲಯದ ಕಮದೊಡ ಬಳಿ ತಾಲೂಕು ಆಡಳಿತ ಮತ್ತು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ವಿವಿಧ ಶಾಲೆಯ ವಿದ್ಯಾರ್ಥಿಗಳು ಹಾಗೂ ನೂರಾರು ಮಹಿಳೆಯರು ಕುಂಭ ಹೊತ್ತು ಸ್ತಬ್ಧಚಿತ್ರವನ್ನು ಬರಮಾಡಿಕೊಂಡರು. ಅನಂತರ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಹಾವೇರಿಯತ್ತ ಬೀಳ್ಕೊಡಲಾಯಿತು. ಉಪವಿಭಾಗಾಧಿಕಾರಿ ತಿಪ್ಪೇಸ್ವಾಮಿ, ತಹಸೀಲ್ದಾರ್ ಸಿ.ಕೆ. ಕುಲಕರ್ಣಿ, ತಾಪಂ ಅಧ್ಯಕ್ಷ ನೀಲಕಂಠಪ್ಪ ಕುಸಗೂರ, ಬಿಇಒ ಎನ್ ಶ್ರೀಧರ, ನಗರಸಭಾ ಸದಸ್ಯ ಮಲ್ಲಿಕಾರ್ಜುನ ಅಂಗಡಿ, ನಾಗರಾಜ ಇದ್ದರು.