Advertisement

ಹಾವೇರಿ: ಎಸಿಬಿ ದಾಳಿ; ಎಫ್ ಡಿಎ ಬಂಧನ, ನಾಲ್ವರ ವಿರುದ್ಧ ಪ್ರಕರಣ ದಾಖಲು

07:54 PM Sep 11, 2020 | Mithun PG |

ಹಾವೇರಿ: ಅಂಬೇಡ್ಕರ ಅಭಿವೃದ್ಧಿ ನಿಗಮದಿಂದ ಎಸ್‌ಸಿ ಫಲಾನುಭವಿಯೊಬ್ಬರಿಗೆ ಸಬ್ಸಿಡಿ ದರದಲ್ಲಿ ಭೂಮಿ ಮಂಜೂರಾತಿ ನೀಡಲು ಲಂಚ ಸ್ವೀಕರಿಸುತ್ತಿದ್ದ ವೇಳೆ ಎಸಿಬಿ ಅಧಿಕಾರಿಗಳು ಶುಕ್ರವಾರ ದಾಳಿ ನಡೆಸಿ ಪ್ರಥಮ ದರ್ಜೆ ಸಹಾಯಕರೊಬ್ಬರನ್ನು ಬಂಧಿಸಿದ್ದು, ನಿಗಮದ ಜಿಲ್ಲಾ ವ್ಯವಸ್ಥಾಪಕ ಸೇರಿದಂತೆ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

Advertisement

ಅಂಬೇಡ್ಕರ್ ಅಭಿವೃದ್ಧಿ ನಿಗಮದ ಕಚೇರಿ ಎಫ್‌ಡಿಎ ತಿಪ್ಪೇಸ್ವಾಮಿ ನಾಗರಾಜಪ್ಪ ಎಂಬವರು ಬಂಧಿತ ಆರೋಪಿ. ನಿಗಮದ ಜಿಲ್ಲಾ ವ್ಯವಸ್ಥಾಪಕ ವಸಂತಕುಮಾರ್, ಫೀಲ್ಡ್ ಆಫೀಸರ್ ದಾಮೋದರ ಹಾಗೂ ಎಫ್‌ಡಿಎ ರಾಘವೇಂದ್ರ ಎಂಬವರು ಎಸಿಬಿ ದಾಳಿ ವೇಳೆ ಕಚೇರಿಯಲ್ಲಿ ಇರಲಿಲ್ಲ. ರಾಣೆಬೆನ್ನೂರು ತಾಲೂಕಿನ ಬಸರಿಕಟ್ಟಾ ತಾಂಡಾ ನಿವಾಸಿ ಸಿದ್ದಪ್ಪ ಲಮಾಣಿ ಎಂಬವರು ನೀಡಿದ ದೂರಿನ ಹಿನ್ನೆಲೆಯಲ್ಲಿ ಎಸಿಬಿ ಡಿವೈಎಸ್ಪಿ ಸೋಮಲಿಂಗ ಕುಂಬಾರ ನೇತೃತ್ವದಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದರು.

ನಿಗಮದಿಂದ ಸೌಲಭ್ಯ ಮಂಜೂರಾತಿಗೆ ಈ ನಾಲ್ವರೂ ಸೇರಿ 75 ಸಾವಿರ ರೂ, ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಪೈಕಿ ಶುಕ್ರವಾರ 25 ಸಾವಿರ ರೂ, ಲಂಚದ ಹಣವನ್ನು ಆರೋಪಿ ತಿಪ್ಪೇಸ್ವಾಮಿ ಸ್ವೀಕರಿಸುತ್ತಿದ್ದಾಗ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸರು ದಾಳಿ ನಡೆಸಿ ವಶಕ್ಕೆ ಪಡೆದಿದ್ದಾರೆ. ಇನ್ನುಳಿದ ಮೂವರು ದಾಳಿ ವೇಳೆ ಕಚೇರಿಯಲ್ಲಿ ಇರಲಿಲ್ಲ. ಆದರೆ, ಅವರು ಲಂಚಕ್ಕೆ ಬೇಡಿಕೆ ಇಟ್ಟಿರುವ ಆಡಿಯೋ ಇದ್ದು, ಬಂಧಿತ ಆರೋಪಿ ಸೇರಿ ನಾಲ್ಕು ಜನರ ವಿರುದ್ಧ ಎಸಿಬಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next