ನವದೆಹಲಿ: ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಪರಾಜಗೊಂಡ ಬೆನ್ನಲ್ಲೇ ಬಂಡಾಯ ಸೃಷ್ಟಿಯಾಗಿದ್ದು, ಹಿಮಾಚಲಪ್ರದೇಶ ಮುಖ್ಯಮಂತ್ರಿ ಸುಖವಿಂದರ್ ಸುಖು ಸಿಂಗ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂಬ ಸುದ್ದಿ ಪ್ರಕಟಗೊಂಡಿತ್ತು. ಇದೀಗ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿಂಗ್, ಪಕ್ಷದ ಹೈಕಮಾಂಡ್ ಆಗಲಿ, ಪಕ್ಷದ ವರಿಷ್ಠರಾಗಲಿ ನನ್ನ ರಾಜೀನಾಮೆ ಕೇಳಿಲ್ಲ. ನಾನು ವಿಧಾನಸಭೆಯಲ್ಲಿ ಬಹುಮತವನ್ನು ಸಾಬೀತುಪಡಿಸುವುದಾಗಿ ವಿಶ್ವಾಸವ್ಯುಕ್ತಪಡಿಸಿದ್ದಾರೆ.
ಇದನ್ನೂ ಓದಿ:ಅಪಘಾತದಲ್ಲಿ ಸಾವು ಎಂಬ ಸುದ್ದಿ ವೈರಲ್: ವಿಡಿಯೋ ಮಾಡಿ “ನಾನು ಜೀವಂತವಾಗಿದ್ದೇನೆ..” ಎಂದ ನಟಿ
ಬಜೆಟ್ ಮಂಡನೆಗೂ ಮುನ್ನ ಭಾರತೀಯ ಜನತಾ ಲಕ್ಷ ಸುಳ್ಳು ಸುದ್ದಿಯನ್ನು ಹರಡುತ್ತಿದೆ ಎಂದು ಮುಖ್ಯಮಂತ್ರಿ ಸುಖುವಿಂದರ್ ಸುಖು ಆರೋಪಿಸಿದ್ದಾರೆ. ಬಿಜೆಪಿ ಕಾಂಗ್ರೆಸ್ ಪಕ್ಷವನ್ನು ಒಡೆಯಲು ಬಯಸುತ್ತಿದೆ. ಕಾಂಗ್ರೆಸ್ ಶಾಸಕರು ಪಕ್ಷ ತೊರೆದು ಬಿಜೆಪಿಗೆ ಸೇರ್ಪಡೆಗೊಳ್ಳಲಿ ಎಂಬುದು ಅವರ ಸಂಚಾಗಿದೆ. ಆದರೆ ಕಾಂಗ್ರೆಸ್ ಶಾಸಕರು ಒಗ್ಗಟ್ಟಿನಿಂದ ಇದ್ದಿರುವುದಾಗಿ ತಿಳಿಸಿದ್ದಾರೆ.
68 ಸದಸ್ಯಬಲದ ಹಿಮಾಚಲ ಪ್ರದೇಶ ವಿಧಾನಸಭೆಯಲ್ಲಿ ಕಾಂಗ್ರೆಸ್ ಬಹುಮತ ಸಾಬೀತುಪಡಿಸುವಂತೆ ಬಿಜೆಪಿ ಒತ್ತಾಯಿಸಿದ್ದು, ಈ ಬೆಳವಣಿಗೆ ಹಿನ್ನಲೆಯಲ್ಲಿ ಸಿಎಂ ಸಿಂಗ್ ರಾಜೀನಾಮೆ ನೀಡಲಿದ್ದಾರೆ ಎಂಬ ವದಂತಿ ಹಬ್ಬಿತ್ತು.
ಅಡ್ಡಮತದಾನಕ್ಕೂ ಮೊದಲು ಕಾಂಗ್ರೆಸ್ 40 ಶಾಸಕರನ್ನು ಹೊಂದಿತ್ತು. ಒಂದು ವೇಳೆ ಅಡ್ಡಮತದಾನ ಮಾಡಿದ ಆರು ಶಾಸಕರು ಬಂಡಾಯ ಎದ್ದರೆ, ಕಾಂಗ್ರೆಸ್ ಸಂಖ್ಯಾಬಲ 34ಕ್ಕೆ ಇಳಿಕೆಯಾಗಲಿದೆ. ಬಹುಮತಕ್ಕೆ 35 ಶಾಸಕರ ಬೆಂಬಲ ಅಗತ್ಯ. ಬಿಜೆಪಿ 25 ಶಾಸಕರನ್ನು ಹೊಂದಿದ್ದು, ಪಕ್ಷೇತರರು ಮೂವರು ಹಾಗೂ ಬಂಡಾಯ ಎದ್ದ 6 ಕಾಂಗ್ರೆಸ್ ಶಾಸಕರನ್ನು ಸೆಳೆದುಕೊಂಡರು ಕೂಡಾ ಬಿಜೆಪಿ ಸಂಖ್ಯಾಬಲವೂ 34 ತಲುಪಲಿದೆ. ಇದರಿಂದ ಅತಂತ್ರ ಸ್ಥಿತಿ ನಿರ್ಮಾಣವಾಗಲಿದೆ ವಿನಃ ಬಹುಮತ ಕಷ್ಟಸಾಧ್ಯ ಎಂದು ವರದಿ ತಿಳಿಸಿದೆ.