ವಾಷಿಂಗ್ಟನ್: ಹಾವುಗಳು ಭೂಮಂಡಲದಲ್ಲಿ ಅತ್ಯಂತ ಭಯಭೀತ ಹಾಗೂ ಭಯಾನಕ ಜೀವಿಯಾಗಿದೆ. ಆದರೆ ಹಲವೆಡೆ ಸಂಪ್ರದಾಯದಂತೆ ಹಾವನ್ನು ಭಯ, ಭಕ್ತಿಯಿಂದ ಪೂಜಿಸಲಾಗುತ್ತದೆ. ಈ ಸರಿಸೃಪಗಳ ಬಗ್ಗೆ ಅನೇಕ ಕಥೆಗಳು, ಜಾನಪದ ಕಥೆಗಳನ್ನು ಹೆಣೆದುಕೊಂಡಿದ್ದರು ಕೂಡಾ ಕೆಲವೊಂದು ವಿಸ್ಮಯ ಸಂಗತಿ ಆಗಾಗ ಬೆಳಕಿಗೆ ಬರುತ್ತಿರುತ್ತವೆ.
ಇದನ್ನೂ ಓದಿ:ಮೀನುಗಾರಿಕೆ ನಡೆಸುತ್ತಿದ್ದ ವೇಳೆ ನಾಪತ್ತೆ, ವ್ಯಕ್ತಿಯ ಅವಶೇಷ 2 ಮೊಸಳೆ ದೇಹದಲ್ಲಿ ಪತ್ತೆ!
ಟೆರಿಫೈಯಿಂಗ್ ನೇಚರ್ ಎಂಬ ಟ್ವೀಟರ್ ಹ್ಯಾಂಡಲ್ ನಲ್ಲಿ ಹಾವೊಂದು ಆಕಳಿಸುತ್ತಿರುವುದನ್ನು ತೋರಿಸುವ ವಿಡಿಯೋವನ್ನು ಶೇರ್ ಮಾಡಿದ್ದು, ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.
ಈ ವಿಡಿಯೋಕ್ಕೆ, ನೀವು ಎಂದಾದರು ಹಾವು ಆಕಳಿಸುವುದನ್ನು ಕಂಡಿದ್ದೀರಾ? ಎಂಬ ಕ್ಯಾಪ್ಶನ್ ನೀಡಲಾಗಿದೆ. ಜಗತ್ತಿನಲ್ಲಿ ಸುಮಾರು 3000 ಸಾವಿರ ವಿವಿಧ ಜಾತಿಯ ಹಾವುಗಳಿವೆ. ಅವುಗಳಲ್ಲಿ ಅಂದಾಜು 600 ವಿಷಕಾರಿ ಹಾವುಗಳಿದ್ದು, ಕೆಲವು ವ್ಯಕ್ತಿಯನ್ನು ಕೊಲ್ಲುವ ಕಾರ್ಕೋಟಕ ವಿಷವನ್ನು ಹೊಂದಿರುತ್ತವೆ ಎಂದು ವರದಿ ತಿಳಿಸಿದೆ.