ಮುಂಬೈ:ದೇಶಾದ್ಯಂತ ಕೋವಿಡ್ 19 ಸೋಂಕಿನಿಂದ ಬಹುತೇಕ ಜನರು ತೊಂದರೆ ಅನುಭವಿಸಿದ್ದರೆ, ನವಿ ಮುಂಬೈಯ 28 ವರ್ಷದ ಯುವಕನೊಬ್ಬ ಜುಲೈ ತಿಂಗಳಿನಲ್ಲಿ ಪತ್ನಿಗೆ ಕರೆ ಮಾಡಿ ತನಗೆ ಕೋವಿಡ್ 19 ಪಾಸಿಟಿವ್ ಬಂದಿರುವುದಾಗಿ ತಿಳಿಸಿದ ಮೇಲೆ ನಾಪತ್ತೆಯಾಗಿದ್ದ. ಇದೀಗ ಪೊಲೀಸರು ಪ್ರಕರಣದ ಜಾಡು ಹಿಡಿದು ತನಿಖೆ ನಡೆಸಿದಾಗ ಆತನ ಅಸಲಿ ಕಥೆ ಬಯಲಾಗಿದೆ ಎಂದು ವರದಿ ತಿಳಿಸಿದೆ.
ಕೋವಿಡ್ 19 ಕಥೆ ಕಟ್ಟಿದ್ದ ಪತಿ:
ಜುಲೈ 24ರಂದು ಪತಿ ನಾಟಕೀಯವಾಗಿ ಪತ್ನಿಗೆ ಕರೆ ಮಾಡಿ, ನನ್ನ ಕೋವಿಡ್ 19 ಪರೀಕ್ಷೆಯ ವರದಿ ಬಂದಿದೆ. ಅದರಲ್ಲಿ ಪಾಸಿಟಿವ್ ಎಂದಿದೆ. ಹೀಗಾಗಿ ನಾನಿನ್ನು ಬದುಕುವುದರಲ್ಲಿ ಅರ್ಥವಿಲ್ಲ ಎಂದು ಬಡಬಡಿಸಿ ಹೇಳಿದ್ದ. ಆದರೆ ಹೆಂಡತಿ ಪ್ರಶ್ನೆ ಕೇಳುವ ಮುನ್ನವೇ ಮೊಬೈಲ್ ಕರೆಯನ್ನು ಕಟ್ ಮಾಡಿದ್ದ. ನಂತರ ಆಕೆ ತನ್ನ ಸಹೋದರನಿಗೆ ಕರೆ ಮಾಡಿ ವಿಷಯ ತಿಳಿಸಿದ್ದಳು. ಕೊನೆಗೆ ಪೊಲೀಸ್ ಠಾಣೆಯಲ್ಲಿ ನಾಪತ್ತೆಯಾಗಿರುವ ಬಗ್ಗೆ ದೂರು ನೀಡಿದ್ದರು.
ಇದನ್ನೂ ಓದಿ: ಆರ್ ಸಿ ಬಿ ಥೀಮ್ ಸಾಂಗ್ ರಿಲೀಸ್ : ಕನ್ನಡ ಸಾಹಿತ್ಯ ಇಲ್ಲದ್ದಕ್ಕೆ ಅಭಿಮಾನಿಗಳು ಗರಂ..!
ತನಿಖೆಯ ಸಂದರ್ಭದಲ್ಲಿ ವ್ಯಕ್ತಿಯ ಬೈಕ್, ಹೆಲ್ಮೆಟ್, ಬ್ಯಾಗ್ ಹಾಗೂ ಕೀ ವಾಶಿ ಸೆಕ್ಟರ್ 17ರ ರಸ್ತೆಯಲ್ಲಿ ಪತ್ತೆಯಾಗಿತ್ತು. ಆದರೆ ಈ ವ್ಯಕ್ತಿಯ ಬಗ್ಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲವಾಗಿತ್ತು. ಎಸಿಪಿ ವಿನಾಯಕ್ ವಾಟ್ಸ್ ಪ್ರಕಾರ, ದೂರಿನ ಆಧಾರದಲ್ಲಿ ತನಿಖೆಯನ್ನು ಚುರುಕುಗೊಳಿಸಿದ್ದರು.
ಸಮೀಪದ ಸಿಸಿಟಿವಿ ಫೂಟೇಜ್ ಅನ್ನು ಪರಿಶೀಲಿಸಿದ್ದರು. ಪೊಲೀಸರು ಕೂಡಾ ಮೊಬೈಲ್ ಲೋಕೇಶನ್ ಪತ್ತೆ ಹಚ್ಚಲು ಪ್ರಯತ್ನಿಸಿದ್ದರು. ಕೊನೆಗೆ ಈ 28ವರ್ಷದ ಯುವಕ ನಾಪತ್ತೆಯಾಗಿದ್ದ ರಾತ್ರಿ ಎರಡು ಬಾರಿ ಪೊಲೀಸ್ ಕಂಟ್ರೋಲ್ ರೂಂ “100”ಕ್ಕೆ ಕರೆ ಮಾಡಿರುವುದು ಪತ್ತೆಯಾಗಿತ್ತು. ಆತ ತನ್ನ ಪ್ರಕರಣದ ಬಗ್ಗೆ ತಿಳಿದುಕೊಳ್ಳಲು ಯತ್ನಿಸಿದ್ದ ಎಂದು ವರದಿ ಹೇಳಿದೆ.
ಎಲ್ಲಾ ದಿಕ್ಕಿನಿಂದಲೂ ತನಿಖೆ ನಡೆಸಿದ ಪೊಲೀಸರಿಗೆ ಈತನಿಗೆ ಮತ್ತೊಂದು ಸಂಬಂಧ ಇದ್ದಿರುವುದು ಪತ್ತೆಯಾಗಿತ್ತು. ಸುಮಾರು ಒಂದು ತಿಂಗಳ ಕಾಲ ಶೋಧ ನಡೆಸಿದ್ದ ಪೊಲೀಸರಿಗೆ ನಾಪತ್ತೆಯಾಗಿದ್ದ ವ್ಯಕ್ತಿ ಇಂಧೋರ್ ನಲ್ಲಿ ಇದ್ದಿರುವುದನ್ನು ಪತ್ತೆಹಚ್ಚಿದ್ದರು.
ಇದನ್ನೂ ಓದಿ: ಮಂಗಳೂರು: ಹಂಪನಕಟ್ಟೆಯಲ್ಲಿ ಪತ್ತೆಯಾದ ಶತಮಾನದ ಹಿಂದಿನ ಬಾವಿ!
ವಾಶಿ ಪೊಲೀಶ್ ಠಾಣಾಧಿಕಾರಿ ಸಂಜೀವ್ ಧುಮಾಲ್ ಅವರನ್ನು ಇಂದೋರ್ ಗೆ ಕಳುಹಿಸಿದಾಗ, ನಾಪತ್ತೆಯಾಗಿದ್ದ ವ್ಯಕ್ತಿ ಪ್ರಿಯತಮೆ ಜತೆ ಪತ್ತೆಯಾಗಿದ್ದು, ಇಬ್ಬರನ್ನೂ ಸೆಪ್ಟೆಂಬರ್ 15ರಂದು ಮುಂಬೈಗೆ ವಾಪಸ್ ಕರೆತರಲಾಗಿತ್ತು ಎಂದು ಎಸಿಪಿ ವಿನಾಯಕ್ ತಿಳಿಸಿದ್ದಾರೆ.