Advertisement
ಅವರು ಶನಿವಾರ ಬಂಟ್ವಾಳ ಶ್ರೀ ವೆಂಕಟರಮಣ ಸ್ವಾಮಿ ಪದವಿ ಮತ್ತು ಪ.ಪೂ. ಕಾಲೇಜು ಗಳ ಸುವರ್ಣ ಮಹೋತ್ಸವದ ಮೂರನೇ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದರು. ವರ್ತಮಾನದ ಸ್ಪರ್ಧಾತ್ಮಕ ಪರಿಸರವು ವಿದ್ಯಾರ್ಥಿಗಳನ್ನು ಸಂಕುಚಿತ ಮನಸ್ಥಿತಿಯವರ ನ್ನಾಗಿಸುತ್ತಿದೆ. ಮಾನವನ ಬದುಕು ವಿಕಾಸ ಗೊಳ್ಳುವಲ್ಲಿ ಸಾಹಿತ್ಯದ ಓದು, ಬರವಣಿಗೆ ಮಹತ್ವದ ಪಾತ್ರ ವಹಿಸುತ್ತದೆ. ವಿದ್ಯಾರ್ಥಿ ಜೀವನದಲ್ಲಿರುವಾಗ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಗೆಲುವಿಗಿಂತ ಸ್ಪರ್ಧೆಗಳಲ್ಲಿ ಭಾಗವಹಿಸುವುದರಿಂದಲೇ ಆತ್ಮವಿಶ್ವಾಸ, ಛಲ, ಕುತೂಹಲ ಮೂಡಲು ಸಾಧ್ಯ ಎಂದರು.
ಎಸ್.ವಿ.ಎಸ್. ವಿದ್ಯಾಸಂಸ್ಥೆಯು ಉತ್ತಮ ಶಿಕ್ಷಣವನ್ನು ನೀಡುತ್ತಾ ಬಂದ ವಿದ್ಯಾರ್ಥಿ ಪೋಷಕ ಸಂಸ್ಥೆಯಾಗಿದೆ. ಸಾಹಿತ್ಯದ ಓದು ನಮ್ಮನ್ನು ಬೆಳೆಸುತ್ತದೆ. ಸಾಹಿತ್ಯದ ಓದಿನ ಮುಖೇನ ಸಮಾಜದ ನೋವು ನಲಿವಿಗೆ ಸ್ಪಂದಿಸುವ ಮನಸ್ಸು ನಿರ್ಮಾಣವಾಗುತ್ತದೆ. ಒಳ್ಳೆಯ ಪ್ರತಿಭೆ ಹುಟ್ಟಲು ಒಳ್ಳೆಯ ಪರಿಸರ ವಾತಾವರಣವು ಅಷ್ಟೇ ಮುಖ್ಯ. ವಿದ್ಯಾ ಕೇಂದ್ರಗಳು ವಿದ್ಯಾರ್ಥಿಗಳ ಸರ್ವಾಂಗೀಣ ವಿಕಾಸವನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಶಿಕ್ಷಣದ ಸ್ವರೂಪವನ್ನು ಯೋಜಿಸಬೇಕಾಗಿದೆ ಎಂದರು. ಶ್ರೀ ವೆಂಕಟರಮಣ ಸ್ವಾಮಿ ಕಾಲೇಜುಗಳ ಸಂಚಾಲಕ ಕೂಡಿಗೆ ಪ್ರಕಾಶ್ ಶೆಣೈ ಅಧ್ಯಕ್ಷತೆ ವಹಿಸಿದ್ದರು. ಪದವಿ ಕಾಲೇಜಿನ ಪ್ರಾಂಶುಪಾಲ ಡಾ| ಪಾಂಡುರಂಗ ನಾಯಕ್ ಮತ್ತು ಪ. ಪೂ. ಕಾಲೇಜಿನ ಪ್ರಾಂಶುಪಾಲೆ ಶಶಿಕಲಾ ಕೆ. ಉಪಸ್ಥಿತರಿದ್ದರು.
ಪದವಿ ಕಾಲೇಜಿನ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಗ್ರೀಷ್ಮಾ ಶಲ್ಮಾ ವೇಗಸ್, ಪ.ಪೂ. ಕಾಲೇಜಿನ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಅನನ್ಯಾ ಜಿ. ವಿದ್ಯಾರ್ಥಿ ಸಂಘದ ವಾರ್ಷಿಕ ವರದಿ ಮಂಡಿಸಿದರು. ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಾದ ಕೆ. ವೆಂಕಟೇಶ್ ನಾಯಕ್ ಮತ್ತು ಸಂಜು ಕಲ್ಬಿ ಪಟೇಲ್ ಉಪಸ್ಥಿತರಿದ್ದರು.
Related Articles
Advertisement