Advertisement

ಕ್ಲರ್ಕ್‌ಗಳ ನೆರವಿಗೆ ಜಂಟಿ ಸಭೆ ನಡೆಸಿ

04:10 AM May 24, 2020 | Lakshmi GovindaRaj |

ಬೆಂಗಳೂರು: ಲಾಕ್‌ಡೌನ್‌ನಿಂದ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ವಕೀಲರ ಬಳಿ ಸೇವೆ ಸಲ್ಲಿಸುತ್ತಿರುವ ನೋಂದಾಯಿತ ಕ್ಲರ್ಕ್‌ಗಳಿಗೆ ನೆರವು ನೀಡುವ ದೃಷ್ಟಿಯಿಂದ ಯೋಜನೆ ರೂಪಿಸುವ ಸಂಬಂಧ ಬೆಂಗಳೂರು ವಕೀಲರ ಸಂಘ  ಹಾಗೂ ಕರ್ನಾಟಕ ರಾಜ್ಯ ವಕೀಲರ ಕ್ಲರ್ಕ್‌ಗಳ ಸಂಘದ ಜಂಟಿ ಸಭೆ ಏರ್ಪಡಿಸುವಂತೆ ರಾಜ್ಯ ವಕೀಲರ ಪರಿಷತ್‌ಗೆ ಹೈಕೋರ್ಟ್‌ ಸೂಚನೆ ನೀಡಿದೆ.

Advertisement

ಲಾಕ್‌ಡೌನ್‌ ಪರಿಣಾಮ ಕೋರ್ಟ್‌ ಕಲಾಪಗಳು ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಕೆಲಸವಿಲ್ಲದೆ ಆರ್ಥಿಕ ಸಂಕಷ್ಟ  ಎದುರಿಸುತ್ತಿರುವ ಕ್ಲರ್ಕ್‌ಗಳಿಗೆ ನೆರವು ನೀಡಲು 5 ಕೋಟಿ ರೂ. ಮೊತ್ತದ ಕಾರ್ಪಸ್‌ ನಿಧಿ ಸ್ಥಾಪಿಸುವಂತೆ ಕರ್ನಾಟಕ ರಾಜ್ಯ ವಕೀಲರ ಕ್ಲರ್ಕ್‌ಗಳ ಸಂಘ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ  ನಡೆಸಿದ ಮುಖ್ಯ ನ್ಯಾ. ಎ.ಎಸ್‌. ಓಕಾ ನೇತೃತ್ವದ ವಿಭಾಗೀಯ ನ್ಯಾಯಪೀಠ ಈ ಸೂಚನೆ ನೀಡಿತು. ವಾದ ಆಲಿಸಿದ ನ್ಯಾಯಪೀಠ, ವಕೀಲರ ಸಮರ್ಪಕ ಕಾರ್ಯ ನಿರ್ವಹಣೆ   ಯಲ್ಲಿ ಕ್ಲರ್ಕ್‌ಗಳ ಪಾತ್ರ ಮಹತ್ವದ್ದಾಗಿದೆ.

ಲಾಕ್‌ಡೌನ್‌  ಹಿನ್ನೆಲೆ ಯಲ್ಲಿ ಕ್ಲರ್ಕ್‌ಗಳು ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿದ್ದಾರೆ ಅನ್ನುವುದರಲ್ಲಿ ಎರಡು ಮಾತಿಲ್ಲ. ಇವರ ಆರ್ಥಿಕ ನೆರ ವಿಗೆ ಯೋಜನೆಯೊಂದು ರೂಪಿಸುವ ಅವಶ್ಯಕತೆಯಿದೆ. ಇದಕ್ಕಾಗಿ, ರಾಜ್ಯ ವಕೀಲರ ಪರಿಷತ್‌ ವತಿಯಿಂದ   ಬೆಂಗ ಳೂರು ವಕೀಲರ ಸಂಘ ಹಾಗೂ ವಕೀಲರ ಕ್ಲರ್ಕ್‌ಗಳ ಸಂಘದ ಜಂಟಿ ಸಭೆ ಏರ್ಪಡಿಸಬೇಕು ಎಂದು ಹೇಳಿತು.ಇದೇ ವೇಳೆ ಬೆಂಗಳೂರು ವಕೀಲರ ಸಂಘವನ್ನು ಅರ್ಜಿಯಲ್ಲಿ ಪ್ರತಿವಾದಿಯ ನ್ನಾಗಿ ಸೇರಿಸುವಂತೆ ಅರ್ಜಿದಾರರಿಗೆ  ಸೂಚಿಸಿದ ನ್ಯಾಯಪೀಠ ವಿಚಾರಣೆ ಯನ್ನು ಮುಂದೂಡಿತು.

Advertisement

Udayavani is now on Telegram. Click here to join our channel and stay updated with the latest news.

Next