ಹೊಸದಿಲ್ಲಿ : ಖಾಸಗಿ ಮತ್ತು ಸರಕಾರಿ ವಲ ಯಗಳು ವಿಭಿನ್ನವಾಗಿ ಚಿಂತನೆ ನಡೆಸಬೇಕು. ಜಗತ್ತಿನ ಅರ್ಥ ವ್ಯವಸ್ಥೆಯಲ್ಲಿ ಮುಂದು ವರಿಯಲು, ಅವಕಾಶಗಳನ್ನು ಬಳಸಿ ಕೊಳ್ಳಲು ಇದು ಸಹಕಾರಿಯಾಗಲಿದೆ ಎಂದು ಪ್ರಧಾನಿ ಮೋದಿ ಕರೆ ನೀಡಿದ್ದಾರೆ.
Advertisement
ಕೇಂದ್ರ ಬಜೆಟ್‌ಗೆ ಮುಂಚಿತವಾಗಿ ನೀತಿ ಆಯೋಗ ಹಾಗೂ ಖ್ಯಾತ ಅರ್ಥಶಾಸ್ತ್ರಜ್ಞ ರೊಂದಿಗೆ ನಡೆಸಿದ ಸಂವಾದದಲ್ಲಿ ಮೋದಿ ಈ ವಿಚಾರ ಪ್ರಸ್ತಾವಿಸಿದರು. ದೇಶದ ಆರ್ಥಿಕತೆಯ ವೇಗ ಹೆಚ್ಚಿಸಲು ಅನು ಸರಿಸಬಹುದಾದ ಕ್ರಮಗಳು ಕುರಿತು ಸಲಹೆ ಹಾಗೂ ಮಾರ್ಗಗಳನ್ನು ಚರ್ಚಿಸ ಲಾಗಿದೆ. ಸರಕಾರಿ ಹಾಗೂ ಖಾಸಗಿ ಕ್ಷೇತ್ರ ಪರಿಧಿಯಾಚೆಗೆ ಯೋಚಿಸುವ ಸಾಮರ್ಥ್ಯ ಬೆಳಸಿಕೊಳ್ಳಬೇಕೆಂದು ಸಲಹೆ ನೀಡಿದ್ದಾರೆ.