Advertisement

ರಾಷ್ಟ್ರ, ಸೈನಿಕರ ರಕ್ಷಣೆಗೆ “ಹವನ ಅಭಿಯಾನ’

07:00 AM Aug 05, 2018 | Team Udayavani |

ಶಿರಸಿ: ಭಾರತಕ್ಕೆ ಒಳಿತಾಗಬೇಕು, ಸನಾತನ ಸಂಸ್ಕೃತಿ ಉಳಿಯಬೇಕು, ಸೈನಿಕರ ರಕ್ಷಣೆ ಜೊತೆ ಭಾರತ ಮತ್ತೆ ವಿಶ್ವಗುರುವಾಗಿ ಮೆರೆಯಬೇಕು ಎಂಬ ಆಶಯದಲ್ಲಿ ವೈದಿಕರ, ವಿದ್ವಾಂಸರ ತಂಡವೊಂದು ಹವನ ಅಭಿಯಾನ ನಡೆಸುತ್ತಿದೆ. ದೇಶದ ವಿವಿಧೆಡೆಯ ವೈದಿಕರು ಸಂಕಲ್ಪ ನಡೆಸಿ ನಿಗದಿತ ದೇವಸ್ಥಾನಗಳಲ್ಲಿ ಪೂಜೆ, ವಿಶೇಷ ಹವನಗಳನ್ನು ನಡೆಸುತ್ತಿದ್ದಾರೆ. 

Advertisement

ಇಡೀ ಭಾರತ, ಪ್ರಜೆಗಳ ಒಳಿತಿಗಾಗಿ ವೈದಿಕರ ಪಡೆ ಪ್ರತಿಫಲಾಪೇಕ್ಷೆ ಇಲ್ಲದೆ ಸೇವೆ ಸಲ್ಲಿಸುತ್ತಿದೆ.ಒಂದಿಷ್ಟು ಯುವ ವೈದಿಕರು  “ಹವನ ಅಭಿಯಾನ’ ಆರಂಭಿಸಿದ್ದಾರೆ. ರಾಷ್ಟ್ರ ನಿರ್ಮಾಣದಲ್ಲಿ ತಮ್ಮ ಕೊಡುಗೆ ಜೊತೆ ಭಗವಂತನಲ್ಲಿ ಮೊರೆ ಇಡುವ ಈ ಕಾರ್ಯದಲ್ಲಿ 40ಕ್ಕೂ ಅ ಧಿಕ ವೈದಿಕರು ಪಾಲ್ಗೊಳ್ಳುತ್ತಿದ್ದಾರೆ. ದೇವಸ್ಥಾನಗಳಲ್ಲಿ ಆಯಾ ಗ್ರಾಮಸ್ಥರ ಸಹಕಾರದಿಂದ ಈ ಅಭಿಯಾನ ನಡೆಸುತ್ತಿದ್ದಾರೆ. 

ಊಟೋಪಚಾರ, ಹವನದ ಸಾಮಗ್ರಿಗಳನ್ನು ಹೊರತುಪಡಿಸಿ ಉಳಿದ್ಯಾವುದರ ತಲೆಬಿಸಿ ಇಲ್ಲ. ಒಮ್ಮೆ ಅದಕ್ಕೂ ತೊಂದರೆ ಇದ್ದರೆ ವೈದಿಕರೇ ಸಿದ್ಧಗೊಳಿಸಿಕೊಂಡು ನಡೆಸಿ ಬರುತ್ತಾರೆ. ಸ್ಥಳೀಯ ಮಾತೆಯರು ರಾಮ ರûಾ ಸ್ತೋತ್ರ ಮಾಡುತ್ತಾರೆ.

ಎಲ್ಲೆಲ್ಲಿ ವೈದಿಕರು?: ಹವನಗಳಲ್ಲಿ ಸುಮಾರು 40ರಿಂದ 50 ವೈದಿಕರು ಸ್ವಯಂಪ್ರೇರಣೆಯಿಂದ ಪಾಲ್ಗೊಳ್ಳುತ್ತಾರೆ. 
ಬೆಂಗಳೂರು, ಹುಬ್ಬಳ್ಳಿ, ಯಲ್ಲಾಪುರ, ಶಿರಸಿ, ಸಿದ್ದಾಪುರ ಭಾಗದ ವೈದಿಕರು ಸೇರಿಕೊಂಡಿದ್ದಾರೆ. ಅಥರ್ವಶೀರ್ಷ ಹವನಕ್ಕೆ ಜಪಗಳೂ ಆಗಬೇಕು. ಅದಕ್ಕಾಗಿ ಕಾಶಿ, ನೇಪಾಳ, ತಮಿಳುನಾಡಿನ ಪಾಠ ಶಾಲೆಗಳ ವೈದಿಕರು, ವಿದ್ವಾಂಸರೂ ಜಪ ಮಾಡಿ ಮುಖ್ಯಸ್ಥರಿಗೆ ಅದರ ಲೆಕ್ಕ ನೀಡುತ್ತಿದ್ದಾರೆ. ಈಗಾಗಲೇ ಉತ್ತರ ಕನ್ನಡದ ಭೈರುಂಬೆಯಲ್ಲಿ ಹಾಗೂ ಶುಕ್ರವಾರ ಹುಳಗೋಳ ದೇವಸ್ಥಾನದಲ್ಲಿ ನಡೆದಿದ್ದು, ಇನ್ನು ಮುಂದೆ ಕೂಡ ಇದನ್ನು ಸೇವಾ ಮಾರ್ಗದಲ್ಲೇ ಮುಂದುರಿಸುವುದಾಗಿ ವೈದಿಕ ಪ್ರಮುಖರು ತಿಳಿಸಿದ್ದಾರೆ.

ಇದು ಒಳ್ಳೆಯ ಪ್ರಯತ್ನ. ಆಧ್ಯಾತ್ಮಿಕ ನಾಡಿನಲ್ಲಿ ದೇವರ ಮೊರೆಯಿಂದಲೂ ಲೋಕ ಕಲ್ಯಾಣವಾಗಲಿದೆ. ವಿಶ್ವಗುರು ಸ್ಥಾನಕ್ಕೆ ಭಾರತ ಮರಳಲಿ ಎಂಬ ಉದ್ದೇಶದಿಂದ ನಡೆಯುತ್ತಿರುವ ವೈದಿಕರ ಮಾರ್ಗ ಕಣ್ತುಂಬಿ ಬಂತು.
– ಕೆ.ಕೆ. ಹೆಗಡೆ, ಯಲ್ಲಾಪುರ

Advertisement

ಸ್ಪಂದನೆ ಚೆನ್ನಾಗಿದೆ. ಇಲ್ಲಿ ಎಲ್ಲರೂ ಒಂದೇ, ಉದ್ದೇಶವೂ ಒಂದೇ. ಈ ಕಾರಣದಿಂದ ಯಾರೂ ಪ್ರಮುಖರಲ್ಲ, ಎಲ್ಲರೂ ಪ್ರಮುಖರೇ. ರಾಷ್ಟ್ರದ ಹಿತ ನಮ್ಮ ಧ್ಯೇಯವಷ್ಟೇ.
– ವೈದಿಕ ಪ್ರಮುಖರು

Advertisement

Udayavani is now on Telegram. Click here to join our channel and stay updated with the latest news.

Next