Advertisement
ಪಟ್ಟಣದ ಲಕ್ಷ್ಮೀದೇವಿ ದೇವಸ್ಥಾನದ ಬಳಿ ನಗರೋತ್ಥಾನ ಎರಡನೇ ಹಂತದಲ್ಲಿ 90 ಲಕ್ಷ ರೂ/ ಅನುದಾನದಡಿಸಿಸಿ ಚರಂಡಿ ಕಾಮಗಾರಿಗೆ ಗುತ್ತಿಗೆ ನೀಡಲಾಗಿದೆ. ಈ ಕಾಮಗಾರಿಗೆ ಕಳೆದ ಜೂನ್ ತಿಂಗಳಲ್ಲಿ ಶಾಸಕ ಡಿ.ಎಸ್.
ಹೂಲಗೇರಿ ಅಡಿಗಲ್ಲು ನೆರವೇರಿಸಿದ್ದರು. ಆದರೆ ಈವರೆಗೂ ಕಾಮಗಾರಿ ಆರಂಭವಾಗದೇ ಇರುವುದು ವಿಪರ್ಯಾಸದ ಸಂಗತಿಯಾಗಿದೆ.
ನೀರು ಹಾಗೂ ಮಳೆ ಬಂದಾಗ ನೀರು ಬೆಳಗಾವಿ-ಹೈದರಾಬಾದ್ ರಾಜ್ಯ ಹೆದ್ದಾರಿ ಮೇಲೆ ನಿಲ್ಲುತ್ತಿದೆ. ಈ
ನೀರಿನ ಮೇಲೆ ನಿತ್ಯವೂ ಸಾವಿರಾರು ವಾಹನಗಳು ಸಂಚರಿಸುವುದರಿಂದ ರಸ್ತೆಯಲ್ಲಿ ದೊಡ್ಡ ಗುಂಡಿ ಬಿದ್ದು ಮತ್ತಷ್ಟು ನೀರು ನಿಲ್ಲಲು ಕಾರಣವಾಗಿದೆ. ಇದರಿಂದ ರಸ್ತೆ ಸಂಪೂರ್ಣ ಹಾಳಾಗಿದೆ. ಗುಂಡಿಯಲ್ಲಿ ನೀರು ತುಂಬಿರುವುದರಿಂದ ಇದನ್ನು ತಿಳಿಯದೇ ಬೈಕ್ ಸವಾರರು ಅವಘಡಕ್ಕೆ ಸಿಲುಕಿ ಕೈ-ಕಾಲು ಮುರಿದುಕೊಂಡ ಉದಾಹರಣೆಗಳು ಸಾಕಷ್ಟಿವೆ. ಸಾರ್ವಜನಿಕರು ಮೂಗು ಮುಚ್ಚಿಕೊಂಡು ತಿರುಗಾಡಬೇಕಾಗಿದೆ. ಇಲ್ಲಿನ ನಿವಾಸಿಗಳು ಚರಂಡಿ ವ್ಯವಸ್ಥೆ ಕಲ್ಪಿಸುವಂತೆ ಬಹುದಿನಗಳಿಂದ ಪುರಸಭೆಗೆ ಒತ್ತಾಯಿಸಿದ್ದರಿಂದ ಪುರಸಭೆ
ನಗರೋತ್ಥಾನ ಯೋಜನೆಯಡಿ ಚರಂಡಿ ನಿರ್ಮಿಸಿಲು ಅನುದಾನ ಒದಗಿಸಿದೆ. ಆದರೆ ಗುತ್ತಿಗೆದಾರರು
ಮಾತ್ರ ಇನ್ನೂ ಕಾಮಗಾರಿ ಆರಂಭಿಸಿಲ್ಲ. ಇದರಿಂದ ಜನರು ನಿತ್ಯ ತೊಂದರೆ ಅನುಭವಿಸುವುದು ತಪ್ಪುತ್ತಿಲ್ಲ. ಈ
ಸಮಸ್ಯೆ ಪರಿಹರಿಸಲು ಪುರಸಭೆ ಆಡಳಿತಾಧಿಕಾರಿಯಾದ ತಹಶೀಲ್ದಾರ್ ಹಾಗೂ ಶಾಸಕರು ಈ ಬಗ್ಗೆ ಗಮನ ಹರಿಸಿ
ಕೂಡಲೇ ಕಾಮಗಾರಿ ಆರಂಭಿಸಲು ಗುತ್ತಿಗೆದಾರರಿಗೆ ಸೂಚಿಸಬೇಕಾಗಿದೆ.
Related Articles
ಗುತ್ತಿಗೆದಾರರ ವಿರುದ್ಧ ಕ್ರಮ ಜರಗಿಸಬೇಕೆಂದು ನಿವಾಸಿ ಹನುಮೇಶ ಒತ್ತಾಯಿಸಿದ್ದಾರೆ.
Advertisement