Advertisement

ಹಟ್ಟಿಕುದ್ರು ಸೇತುವೆ: 150 ಮೀ. ಸ್ಲ್ಯಾಬ್ ಕಾಮಗಾರಿ ಬಾಕಿ

08:46 PM Aug 20, 2021 | Team Udayavani |

ಬಸ್ರೂರು: ಹಲವು ದಶಕಗಳ ಹಟ್ಟಿಕುದ್ರು ದ್ವೀಪ ನಿವಾಸಿಗಳ ಕನಸು ಈಗ ನನಸಾಗುವತ್ತ ಕ್ಷಣಗಣನೆ ಶುರುವಾಗಿದೆ. ಕಳೆದ ಒಂದು ವರ್ಷದ ಹಿಂದೆ ವಿಧಾನ ಪರಿಷತ್‌ ಸದಸ್ಯ ಕೆ. ಪ್ರತಾಪ್‌ಚಂದ್ರ ಶೆಟ್ಟಿ ಅವರ ಶಿಫಾರಸಿನ ಮೇರೆಗೆ ವಾರಾಹಿ ನೀರಾವರಿ ನಿಗಮ ದಿಂದ 14.59 ಕೋ.ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಹಟ್ಟಿಕುದ್ರು ಸೇತುವೆಯ ಕಾಮಗಾರಿಯಲ್ಲಿ ಇನ್ನೂ ಕೇವಲ 150 ಮೀ. ಸ್ಲ್ಯಾಬ್ ಮಾತ್ರ ಬಾಕಿ ಇದೆ.

Advertisement

ಮಾಜಿ ಶಾಸಕ ಬಿ. ಅಪ್ಪಣ್ಣ ಹೆಗ್ಡೆ ಸೇತುವೆ ಕಾಮಗಾರಿಗೆ ಶಂಕುಸ್ಥಾಪನೆ ಮಾಡಿದ್ದರು. ಕಳೆದ ಮಳೆಗಾಲದಲ್ಲಿ ನಿಲ್ಲಿಸಿದ್ದ ಕಾಮಗಾರಿ ಈಗ ಮತ್ತೆ ಆರಂಭಗೊಂಡಿದ್ದು, ಕಾಮಗಾರಿ ವೇಗದಿಂದ ಸಾಗುತ್ತಿದೆ.

ಇದನ್ನೂ ಓದಿ:“ಅವರು ಬದಲಾಗಿಲ್ಲ, ನಮಗೆ ಸಾವೇ ಗತಿ’ : ತಾಲಿಬಾನ್‌ ಆಡಳಿತದ ಕುರಿತು ಹೆಂಗಳೆಯರ ನೋವಿನ ಮಾತು

180 ಮೀ. ಸ್ಲ್ಯಾಬ್ ಕಾಮಗಾರಿ ಪೂರ್ಣ
ಒಟ್ಟು 330 ಮೀ. ಉದ್ದದ ಈ ಸೇತುವೆಗೆ ಇಪ್ಪತ್ತು ಪಿಲ್ಲರ್‌ಗಳಿದ್ದು ಎರಡು ತುದಿಗಳಲ್ಲಿ ಅಪಾರ್ಟ್‌ಮೆಂಟ್‌ಗಳಿರುತ್ತವೆ. ಈಗಾಗಲೇ ಹಲವು ಪಿಲ್ಲರ್‌ಗಳು ನಿರ್ಮಾಣಗೊಂಡಿದ್ದು ಏಳು ಸ್ಲಾéಬ್‌ಗಳು ಅಂದರೆ ಕೇವಲ 150 ಮೀ. ಉದ್ದದ ಕಾಮಗಾರಿ ಆಗಬೇಕಿದೆ. 180 ಮೀ. ಸ್ಲ್ಯಾಬ್ ಕಾಮಗಾರಿ ಮುಗಿದಿದೆ.

ದೋಣಿ ಸ್ಥಗಿತ
ಪ್ರಸ್ತುತ ಹಟ್ಟಿಕುದ್ರುವಿಗೆ ಹೋಗಲು ಕಳುವಿನಬಾಗಿಲು ದೋಣಿ ಸ್ಥಗಿತಗೊಂಡಿದ್ದು ಸೇತುವೆಯ ಎರಡು ಕಡೆಗಳಲ್ಲಿ ಕಬ್ಬಿಣದ ಮೆಟ್ಟಿಲುಗಳನ್ನು ಇಡಲಾಗಿದೆ. ಇದರ ಮೇಲೆ ಹತ್ತಿ ನಡೆದು ಸಾಗಬಹುದಾಗಿದೆ. ಮುಂದಿನ ಕೆಲವೇ ಸಮಯದಲ್ಲಿ ಸ್ಲ್ಯಾಬ್ ಮತ್ತು ಪಿಲ್ಲರ್‌ಗಳ ಕಾಮಗಾರಿ ಮುಗಿಯುವ ನಿರೀಕ್ಷೆ ಇದರದ್ದಾಗಿದೆ. ಮಳೆ ಬಿಟ್ಟರೆ ಕಾಮಗಾರಿ ವೇಗದಿಂದ ಸಾಗುತ್ತದೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next