Advertisement

Hathras Stampede: ಕಾಲ್ತುಳಿತಕ್ಕೆ ಜನಸಂದಣಿಯೇ ಕಾರಣ… 300 ಪುಟಗಳ ವರದಿ ಸಲ್ಲಿಸಿದ SIT

11:08 AM Jul 09, 2024 | Team Udayavani |

ಉತ್ತರಪ್ರದೇಶ: ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ನಡೆದ ಸತ್ಸಂಗ ಕಾರ್ಯಕ್ರಮದ ಸಂದರ್ಭ ನಡೆದ ಕಾಲ್ತುಳಿತ ದಲ್ಲಿ ಸುಮಾರು 121 ಜನ ಸಾವನ್ನಪ್ಪಿದ ಒಂದು ವಾರದ ಬಳಿಕ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಪ್ರಕರಣಕ್ಕೆ ಸಂಬಂಧಿಸಿ ಸುಮಾರು 300 ಪುಟಗಳ ವರದಿಯನ್ನು ಸಲ್ಲಿಸಿದೆ.

Advertisement

ಹತ್ರಾಸ್ ಅವಘಡಕ್ಕೆ ಯಾರು ಹೊಣೆ, ವೈಫಲ್ಯಗಳೇನು ಎಂಬ ಕುರಿತು 119 ಜನರ ಹೇಳಿಕೆಯೊಂದಿಗೆ ತನಿಖೆ ಪೂರ್ಣಗೊಳಿಸಿದ ವಿಶೇಷ ತನಿಖಾ ತಂಡ ಗೃಹ ಇಲಾಖೆಗೆ ವರದಿ ಸಲ್ಲಿಸಿದೆ. ತನಿಖಾ ತಂಡ ನಡೆಸಿದ ವರದಿಯ ಕುರಿತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಿದ್ದಾರೆ.

ಜೂನ್ 2ರಂದು ಹತ್ರಾಸ್ ಜಿಲ್ಲೆಯ ಸಿಕಂದರಾವು ತಹಸಿಲ್‌ನ ಫುಲ್ರೈ ಗ್ರಾಮದಲ್ಲಿ ನಡೆದ ಸತ್ಸಂಗ ಕಾರ್ಯಕ್ರಮದ ವೇಳೆ ಕಾಲ್ತುಳಿತ ಸಂಭವಿಸಿ 121 ಜನರು ಸಾವನ್ನಪ್ಪಿದರು. ಈ ಘಟನೆಯ ಕುರಿತು ತನಿಖೆ ನಡೆಸಲು ಯುಪಿ ಸರ್ಕಾರ ಎಸ್‌ಐಟಿಯನ್ನು ರಚಿಸಿತ್ತು. ಅದರಂತೆ ಎಸ್‌ಐಟಿ 300 ಪುಟಗಳ ತನಿಖಾ ವರದಿಯನ್ನು ಸಿದ್ದಪಡಿಸಿದ್ದು ಗೃಹ ಸಚಿವಾಲಯಕ್ಕೆ ಹಸ್ತಾಂತರಿಸಿದೆ, ಜೊತೆಗೆ ವರದಿಯಲ್ಲಿ ಕಾಲ್ತುಳಿತಕ್ಕೆ ಕಾರ್ಯಕ್ರಮ ಸಂಯೋಜಕರೇ ಮೂಲ ಕರಣ ಎಂದು ಹೇಳಲಾಗಿದೆ ನಿಗದಿಗಿಂತ ಹೆಚ್ಚು ಜನರಿಗೆ ಅವಕಾಶ ನೀಡಿರುವುದೇ ಈ ಅವಘಡ ಸಂಭವಿಸಲು ಕಾರಣ ಎಂದು ವರದಿಯಲ್ಲಿ ತಿಳಿಸಿದೆ ಎನ್ನಲಾಗಿದೆ.

ಹತ್ರಾಸ್ ಕಾಲ್ತುಳಿತದ ಘಟನೆಯಿಂದ ಭೋಲೆ ಬಾಬಾ ಅವರು ಖಿನ್ನತೆಗೆ ಒಳಗಾಗಿದ್ದರು ಮತ್ತು ಸಂತ್ರಸ್ತ ಕುಟುಂಬಗಳಿಗೆ ನ್ಯಾಯಾಂಗದಲ್ಲಿ ನಂಬಿಕೆ ಇಡುವಂತೆ ಕೇಳಿಕೊಂಡರು. ಇದಾದ ಬೆನ್ನಲ್ಲೇ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿ ಭೋಲೆ ಬಾಬಾ ಅವರ ವಿರುದ್ದವೂ ಪ್ರಕರಣ ದಾಖಲಾಗಿತ್ತು.

ಈಗಾಗಲೇ ಕಾಲ್ತುಳಿತ ಪ್ರಕರಣದ ಪ್ರಮುಖ ಆರೋಪಿ ದೇವಪ್ರಕಾಶ್ ಮಧುಕರ್ ದೆಹಲಿ ಪೊಲೀಸರಿಗೆ ಶರಣಾಗಿದ್ದು. ಆತನನ್ನು ಉತ್ತರ ಪ್ರದೇಶ ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

Advertisement

ಇದನ್ನೂ ಓದಿ: ATM Theft: ಗ್ಯಾಸ್‌ ಕಟ್ಟರ್‌ನಿಂದ ಎಟಿಎಂ ಯಂತ್ರ ಕತ್ತರಿಸಿ 16.56 ಲಕ್ಷ ರೂ. ದರೋಡೆ

Advertisement

Udayavani is now on Telegram. Click here to join our channel and stay updated with the latest news.

Next