Advertisement

ಹತ್ರಾಸ್‌: ನಾಲ್ವರ ವಿರುದ್ಧ ಆರೋಪ ಪಟ್ಟಿ

11:05 PM Dec 18, 2020 | mahesh |

ಹೊಸದಿಲ್ಲಿ: ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ 19 ವರ್ಷದ ದಲಿತ ಯುವತಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಶುಕ್ರವಾರ ಸಿಬಿಐ ಆರೋಪಪಟ್ಟಿ ಸಲ್ಲಿಸಿದೆ. ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ಕೊಲೆಗೈದಿರುವುದು ನಿಜ ಎಂದು ಆರೋಪಪಟ್ಟಿಯಲ್ಲಿ ಉಲ್ಲೇಖೀಸಲಾಗಿದೆ. ಆಕೆ ಮರಣ ಪೂರ್ವ ಹೇಳಿಕೆಯಲ್ಲಿ ಉಲ್ಲೇಖೀಸಿದ್ದ ಆರೋಪಿಗಳಾದ ಸಂದೀಪ್‌, ಲವಕುಶ, ರವಿ ಮತ್ತು ರಾಮು ವಿರುದ್ಧ ಗ್ಯಾಂಗ್‌ರೇಪ್‌ ಮತ್ತು ಕೊಲೆಯ ಆರೋಪ ಹೊರಿಸಲಾಗಿದೆ.

Advertisement

ಸೆ.14ರಂದು ಯುವತಿಯ ಮೇಲೆ ಅತ್ಯಾಚಾರ ನಡೆದಿತ್ತು. ಕೂಡಲೇ ಆಕೆಯನ್ನು ದೆಹಲಿಯ ಜವಾಹರಲ್‌ ಲಾಲ್‌ ನೆಹರೂ ವೈದ್ಯಕೀಯ ಆಸ್ಪತ್ರೆಗೆ ಸೇರಿಸಲಾಗಿತ್ತು. ಸೆ.29 ರಂದು ಆಕೆ ಚಿಕಿತ್ಸೆ ವೇಳೆಯೇ ಮೃತಪಟ್ಟಿ ದ್ದಳು. ಗಾಂಧಿನಗರದ ವಿಧಿವಿಜ್ಞಾನ ಪ್ರಯೋಗಾಲಯದ ವರದಿ, ಜವಾಹರಲಾಲ್‌ ನೆಹರೂ ಆಸ್ಪತ್ರೆಯ ವೈದ್ಯರು ನೀಡಿರುವ ಹೇಳಿಕೆ ಸೇರಿದಂತೆ ವಿವಿಧ ಅಂಶಗಳನ್ನು ಆರೋಪಪಟ್ಟಿಯಲ್ಲಿ ಉಲ್ಲೇಖೀಸಲಾಗಿದೆ. ಅತ್ಯಾಚಾರ ಮಾಡಿದ ನಾಲ್ವರು ಯುವಕರು ಮೇಲ್ಜಾತಿಗೆ ಸೇರಿದ್ದಾರೆ. ಅವರ ವಿರುದ್ಧ ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡ (ಶೋಷಣೆ ತಡೆ) ಕಾಯ್ದೆಯಡಿಯೂ ಪ್ರಕರಣ ದಾಖಲಿಸಲಾಗಿದೆ. ಇವೆಲ್ಲ ಗಂಭೀರ ಸ್ವರೂಪದ್ದಾಗಿವೆ. ಹತ್ರಾಸ್‌ ಸ್ಥಳೀಯ ನ್ಯಾಯಾಲಯ ಇದನ್ನು ಪರಿಗಣಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next