Advertisement
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಿಕ್ಕಮಗಳೂರಿನಲ್ಲಿ ಪ್ಯಾಲೇಸ್ತೀನಿ ಬಾವುಟ ಹಾರಿಸಿದ ವಿಚಾರಕ್ಕೆ ಪ್ರತಿಕ್ರಿಯಿಸಿ, ಮಲೆನಾಡು ಭಯೋತ್ಪಾದಕ ಸ್ಲಿಪರ್ ಸೆಲ್‌ಗಳಾಗುತ್ತಿದ್ದು, ಭಯೋತ್ಪಾದಕ ಕೃತ್ಯವೆಸಗಲು ಇಲ್ಲಿ ತರಬೇತಿ ನೀಡಲಾಗುತ್ತಿದೆ. ಈ ಹಿಂದೆ ಕೊಪ್ಪದಲ್ಲಿ ಯಾಸೀನ್ ಭಟ್ಕಳ್ ನೇತೃತ್ವದಲ್ಲಿ ಭಯೋತ್ಪಾದಕ ತರಬೇತಿ ಶಿಬಿರ ನಡೆಸಲಾಗಿತ್ತು. ಅದನ್ನು ಭಜರಂಗದಳ ಪತ್ತೆ ಹಚ್ಚಿತ್ತು. ಇಂತಹ ಚಟುವಟಿಕೆಗಳು ದೇಶಕ್ಕೆ ಅಪಯಾಕಾರಿಯಾಗಿದ್ದು, ಇದರ ಹಿಂದಿನ ಜಾಲಾವನ್ನು ಸೂಕ್ತ ತನಿಖೆ ಮೂಲಕ ಪತ್ತೆ ಹಚ್ಚಬೇಕಿದೆ. ಯಾರೋ ಪ್ರಭಾವಿಗಳು ಹೇಳಿದ್ದಾರೆಂದು ಆರೋಪಿಗಳನ್ನು ಬಿಟ್ಟು ಕಳುಹಿಸಿರುವುದು ಸರಿಯಲ್ಲ ಎಂದರು.
ಮಂಗಳೂರಿನ ಬಿ.ಸಿ. ರೋಡ್‌ನಲ್ಲಿ ಹಿಂದುಗಳಿಗೆ ಸವಾಲು ಹಾಕಿರುವ ಪ್ರಕರಣದ ಬಗ್ಗೆ ಮಾತನಾಡಿದ ಅವರು, ಇದು ಭಾರತದ ದೇಶಕ್ಕೆ ಹಾಕಿರುವ ಸಾವಲಿನ ಸಂಗತಿಯಾಗಿದೆ. ಯುದ್ಧವನ್ನು ನಾವು ಯುದ್ಧವಾಗಿಯೇ ಸ್ವೀಕರಿಸಿ ಉತ್ತರ ಕೊಡುತ್ತೇವೆ. ನಮ್ಮ ಪೂರ್ವಜರು ಕತ್ತಿ ತೋರಿಸಿದಾಗ ಕತ್ತಿಯಿಂದಲೇ ಉತ್ತರ ಕೊಟ್ಟಿದ್ದರು ಹಾಗೂ ಯುದ್ಧಕ್ಕೆ ಸವಾಲು ಹಾಕಿದಾಗ ಯುದ್ಧದಿಂದಲೇ ಗೆಲ್ಲಬೇಕಿದೆ ಹೊರತು, ಸಲಹೆಗಳಿಂದ ಪ್ರಯೋಜನವಾಗದು. ಆದ್ದರಿಂದ ನಾವು ಸಹ ಕತ್ತಿಯಿಂದಲೇ ಉತ್ತರ ಕೊಡುತ್ತೇವೆ. ಇಲ್ಲವಾದರೇ ಭಾರತ ಸಹ ಬಾಂಗ್ಲಾದೇಶ, ಪಾಕಿಸ್ತಾನದಂತೆ ಆಗುತ್ತದೆ ಎಂದು ಹೇಳಿದರು.