Advertisement

ಹಾಸನ-ಮಂಗಳೂರು ರೈಲು ಮಾರ್ಗ: ಸಿಗ್ನಲ್‌ ಉನ್ನತೀಕರಣ; ಸಂಚಾರ ಸಾಮರ್ಥ್ಯ ವೃದ್ಧಿ; ಬೇಡಿಕೆಗೆ ಬಲ

01:37 AM Sep 10, 2020 | mahesh |

ಮಂಗಳೂರು: ಹಾಸನ-ಮಂಗಳೂರು ರೈಲು ಮಾರ್ಗದ ಸಕಲೇಶಪುರ ಭಾಗದಲ್ಲಿ ಸಿಗ್ನಲ್‌ ವ್ಯವಸ್ಥೆ ಉನ್ನತೀಕರಣ ಕಾಮಗಾರಿ ಸದ್ಯದಲ್ಲೇ ಪೂರ್ಣಗೊಳ್ಳಲಿದ್ದು, ಹೆಚ್ಚಿನ ಸಂಖ್ಯೆಯ ಪ್ರಯಾಣಿಕ ರೈಲುಗಳ ಸಂಚಾರಕ್ಕೆ ಅವಕಾಶ ಪಡೆದುಕೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಮಂಗಳೂರು-ಹಾಸನ- ಬೆಂಗಳೂರು ಮಾರ್ಗದಲ್ಲಿ ಗೂಡ್ಸ್‌ ಬದಲಿಗೆ ಪ್ರಯಾಣಿಕ ರೈಲುಗಳ ಸಂಚಾರವನ್ನೇ ಹೆಚ್ಚಿಸುವಂತೆ ಕರಾವಳಿ ಭಾಗದ ರೈಲ್ವೇ ಪರ ಹೋರಾಟಗಾರರಿಂದ ಬೇಡಿಕೆ ವ್ಯಕ್ತವಾಗತೊಡಗಿದೆ. ಸಕಲೇಶಪುರ ಭಾಗದಲ್ಲಿ ಸಿಗ್ನಲ್‌ ಉನ್ನತೀಕರಣಗೊಂಡ ಬಳಿಕ ಪ್ರತಿದಿನವೂ 20 ರೈಲುಗಳು ಸಂಚರಿಸುವ ಸಾಮರ್ಥ್ಯವನ್ನು ಈ ಮಾರ್ಗ ಹೊಂದಲಿದೆ. ಪ್ರಸ್ತುತ ಈ ಮಾರ್ಗದಲ್ಲಿ ಪ್ರಯಾಣಿಕರ ಹಾಗೂ ಗೂಡ್ಸ್‌ ಸೇರಿದಂತೆ ಒಟ್ಟು 13 ರೈಲುಗಳು ಸಂಚಾರ ನಡೆಸುತ್ತಿವೆ.

Advertisement

ಹಾಸನ- ಮಂಗಳೂರು ನಡುವೆ ರೈಲುಗಳ ಸಂಚಾರ ಹೆಚ್ಚಿಸುವ ನಿಟ್ಟಿನಲ್ಲಿ ಸುಬ್ರಹ್ಮಣ್ಯ ರೋಡ್‌ – ಸಕಲೇಶಪುರ ಮಧ್ಯೆ ಅತ್ಯಾಧು ನಿಕ ವ್ಯವಸ್ಥೆಗಳನ್ನು ಒಳ ಗೊಂಡ ಸಿಗ್ನಲ್‌ ವ್ಯವಸ್ಥೆ ಅಳ ವಡಿಕೆ ಕಾಮಗಾರಿ ಜೂನ್‌ನಿಂದ ನಡೆಯುತ್ತಿದ್ದು, ಸೆಪ್ಟಂಬರ್‌ ಅಂತ್ಯದೊಳಗೆ ಪೂರ್ಣ ಗೊಳ್ಳುವ ನಿರೀಕ್ಷೆಯಿದೆ. ಇದಕ್ಕಾಗಿ ರಾಜ್ಯ ಸರಕಾರ ಹಾಸನ-ಮಂಗಳೂರು ರೈಲ್ವೇ ಅಭಿವೃದ್ಧಿ ನಿಗಮಕ್ಕೆ (ಎಚ್‌ಎಂಆರ್‌ಡಿಸಿ) 5.3 ಕೋ.ರೂ. ಅನುದಾನ ಒದಗಿಸಿತ್ತು. ನೂತನ ಸಿಗ್ನಲ್‌ ವ್ಯವಸ್ಥೆ ಕಾರ್ಯಾರಂಭ ಮಾಡಿದ ಬಳಿಕ ಕಡಗರವಳ್ಳಿ ಹಾಗೂ ಎಡಕುಮೇರಿ ನಿಲ್ದಾಣಗಳಲ್ಲಿ ರೈಲುಗಳ ಕ್ರಾಸಿಂಗ್‌ ಸೌಲಭ್ಯ ಲಭ್ಯವಾಗಲಿದ್ದು, ಇದರಿಂದಾಗಿ ರೈಲುಗಳ ಸಂಚಾರ ಸಂಖ್ಯೆಗಳನ್ನು ಹೆಚ್ಚಿ ಸಲು ಸಾಧ್ಯವಾಗಲಿದೆ.

ಬೇಡಿಕೆಗೆ ಬಲ ಪ್ರಸ್ತುತ ಈ ಮಾರ್ಗದಲ್ಲಿ ಸಂಚರಿ
ಸುವ 13 ರೈಲುಗಳಲ್ಲಿ 5 ಮಾತ್ರ ಪ್ರಯಾಣಿಕ ರೈಲುಗಳಾಗಿವೆ. ನೂತನವಾಗಿ ಸಿಗ್ನಲ್‌ ಅಳವಡಿಕೆ ಬಳಿಕ ಹೆಚ್ಚು ವರಿಯಾಗಿ 7 ರೈಲು ಗಳ ಸಂಚಾರಕ್ಕೆ
ಅವಕಾಶವಿದೆ. ಮಂಗಳೂರು- ಹಾಸನ ಮೂಲಕ ಪ್ರಸ್ತುತ ಇರುವ ಪ್ರಯಾಣಿಕ ರೈಲುಗಳ ಹೊರತಾಗಿ ಬೆಂಗಳೂರು ಸೇರಿದಂತೆ ದೇಶದ ಇತರ ಭಾಗಗಳಿಗೆ ಇನ್ನಷ್ಟು ರೈಲುಗಳನ್ನು ಆರಂಭಿಸಬೇಕು ಎಂಬ ಕರಾವಳಿ ಭಾಗದ ಜನರು, ರೈಲು ಪ್ರಯಾ ಣಿಕರ ಸಂಘಟನೆಗಳ ಹಲವಾರು ವರ್ಷಗಳ ನಿರಂತರ ಬೇಡಿಕೆಗೆ ಈಗ ಬಲ ಬಂದಿದೆ.

ಪ್ರಮುಖ ಬೇಡಿಕೆಗಳು
ಬೆಂಗಳೂರಿಗೆ ಪ್ರತಿದಿನ ಹಗಲು ರೈಲು ಆರಂಭಿಸಬೇಕು ಮೈಸೂರು-ಮಂಗಳೂರು ಮಧ್ಯೆ ಹಗಲು ರೈಲು ಸಂಚಾರ ಆರಂಭಿಸಬೇಕು ಮಂಗಳೂರಿನಿಂದ ಅರಸೀಕೆರೆ ಮಾರ್ಗವಾಗಿ ಮೀರಜ್‌ಗೆ 1990ರ ದಶಕದಲ್ಲಿ ಸಂಚರಿಸುತ್ತಿದ್ದ ಮಹಾಲಕ್ಷ್ಮೀ ಎಕ್ಸ್‌ಪ್ರೆಸ್‌ ರೈಲು ಗಾಡಿಯನ್ನು ಮರು ಆರಂಭಿಸಬೇಕುಮಂಗಳೂರು- ಹಾಸನ- ಬೆಂಗಳೂರು ಮೂಲಕ ತಿರುಪತಿಗೆ ನೂತನ ರೈಲು ಸೌಲಭ್ಯ ಒದಗಿಸಬೇಕು ಮಂಗಳೂರಿನಿಂದ ಬೆಂಗಳೂರಿಗೆ ವೀಕೆಂಡ್‌ ಹಾಗೂ ರಜಾ ವಿಶೇಷ ರೈಲುಗಳನ್ನು ಓಡಿಸಬೇಕು

ರೈಲ್ವೇ ಸಿಗ್ನಲ್‌ ಉನ್ನತೀಕರಣ ಕಾಮಗಾರಿ ಮಾಸಾಂತ್ಯಕ್ಕೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಹೆಚ್ಚುವರಿ ರೈಲುಗಳನ್ನು ಓಡಿಸುವ ಬಗ್ಗೆ ಕಾಮಗಾರಿಯನ್ನು ನಡೆಸಿರುವ
ಎಚ್‌ಎಂಆರ್‌ಡಿಸಿ ತೀರ್ಮಾನಿಸಲಿದೆ.
– ಅಪರ್ಣ ಗರ್ಗ್‌, ನೈಋತ್ಯ ರೈಲ್ವೇ ಮೈಸೂರು ವಿಭಾಗೀಯ ಪ್ರಬಂಧಕರು

Advertisement

ಕೇಶವ ಕುಂದರ್‌

Advertisement

Udayavani is now on Telegram. Click here to join our channel and stay updated with the latest news.

Next