Advertisement

ಸೊರಗಿದ ಲಿಂಗನಮಕ್ಕಿ ನೀರ ಮಟ್ಟ; ಸದ್ಯದಲ್ಲೇ ಓಡಾಟ ನಿಲ್ಲಿಸಲಿದೆ ಹಸಿರುಮಕ್ಕಿ ಲಾಂಚ್

08:09 PM Jun 03, 2023 | Team Udayavani |

ಸಾಗರ: ತಾಲೂಕಿನ ಲಿಂಗನಮಕ್ಕಿ ಆಣೆಕಟ್ಟೆಯ ಶರಾವತಿ ಹಿನ್ನೀರ ಪ್ರಾಂತ್ಯದಲ್ಲಿ ನೀರು ಕಡಿಮೆಯಾಗಿದ್ದು, ಮುಳುಗಡೆಯಾಗಿರುವ ಜಾಗದಲ್ಲಿ ಹಳೆ ಮರದ ತುಂಡುಗಳು ಮತ್ತು ಕೆಸರು ಲಾಂಚಿನ ಬುಡಕ್ಕೆ ತಗುಲುತ್ತಿರುವ ಹಿನ್ನೆಲೆಯಲ್ಲಿ ಹಸಿರುಮಕ್ಕಿ ಭಾಗದಲ್ಲಿ ಲಾಂಚಿನ ಓಡಾಟವನ್ನು ನಿಲ್ಲಿಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ.

Advertisement

ಇಲ್ಲೀವರೆಗೂ ದಿನಕ್ಕೆ 5 ರಿಂದ 7 ಬಾರಿ ದಡಗಳ ನಡುವೆ ತಿರುಗಾಟ ನಡೆಸುತ್ತಿದ್ದ ಲಾಂಚ್ ಶನಿವಾರ ಕೇವಲ 2-3 ಟ್ರಿಪ್ ಓಡಾಡಿದೆ. ಜತೆಯಲ್ಲಿ ಭಾರದ ವಾಹನಗಳನ್ನು ಹಾಕಲು ಲಾಂಚಿನ ಸಿಬ್ಬಂದಿ ಮುಂದಾಗುತ್ತಿಲ್ಲ. ಹೀಗಾಗಿ ಶನಿವಾರದಿಂದ ಕೇವಲ ದ್ವಿಚಕ್ರ ವಾಹನಗಳನ್ನು ಮಾತ್ರ ದಾಟಿಸಲಾಗುತ್ತಿದೆ. ಆದ್ದರಿಂದ ಹಸಿರುಮಕ್ಕಿ ಮಾರ್ಗದಿಂದ ನಿಟ್ಟೂರು, ಕೊಲ್ಲೂರಿಗೆ ಪ್ರಯಾಣಿಸುವವರು ಹೊಸನಗರ, ನಗರ ಮಾರ್ಗವಾಗಿಯೇ ಪ್ರಯಾಣಿಸಬೇಕಾದ ಅನಿವಾರ್ಯತೆ ಎದುರಾಗಿದೆ.

ಈ ಕುರಿತು ಪತ್ರಿಕೆಯೊಂದಿಗೆ ಮಾತಾಡಿದ ಒಳನಾಡು ಸಾರಿಗೆ ಅಧಿಕಾರಿಗಳು ಭಾನುವಾರ ಹಸಿರುಮಕ್ಕಿಗೆ ತೆರಳಿ, ಸ್ಥಳ ಪರಿಶೀಲಿಸಿ, ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ. ನೀರು ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಲಾಂಚಿನ ಓಡಾಟ ನಿಲ್ಲಿಸಬೇಕಾದ ಅನಿವಾರ‍್ಯತೆ ಇದೆ ಎಂದಿದ್ದಾರೆ.

ಇದನ್ನೂ ಓದಿ: Gangavati ಬಿಸಿಯೂಟ ಅಕ್ಕಿ ಪೂರೈಕೆ ; ಗೋಧಿ ಗೋಡೌನ್‌ನಲ್ಲೇ !

Advertisement

Udayavani is now on Telegram. Click here to join our channel and stay updated with the latest news.

Next