Advertisement

ಕುಟುಂಬ ರಾಜಕಾರಣ, ಟೀಕೆ ಗೌಣ

01:52 AM Mar 18, 2019 | Team Udayavani |

ಹಾಸನ: ಜೆಡಿಎಸ್‌ ತವರು, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಈವರೆಗೆ ಪ್ರತಿನಿಧಿಸುತ್ತಿದ್ದ ಹಾಸನ ಲೋಕಸಭಾ ಕ್ಷೇತ್ರದಲ್ಲಿ ರಾಷ್ಟ್ರೀಯ ಹೆದ್ದಾರಿ, ರೈಲು ಮಾರ್ಗಗಳ ನಿರ್ಮಾಣ, ರೈಲುಗಳ ಸಂಚಾರ, ಡೇರಿ ಅಭಿವೃದ್ದಿ ನಿರೀಕ್ಷೆ ಮೀರಿ ನಡೆದಿದೆ. ಆದರೆ, ಹಾಸನ ವಿಮಾನ ನಿಲ್ದಾಣ, ಕೇಂದ್ರೀಯ ವಿಶ್ವವಿದ್ಯಾಲಯ, ಐಐಟಿಯನ್ನು ಹಾಸನಕ್ಕೆ ತರಬೇಕೆಂಬ ಆಸೆ ಮಾತ್ರ ಇನ್ನೂ ಈಡೇರಿಲ್ಲ. ಕ್ಷೇತ್ರದಲ್ಲಿ ದೇವೇಗೌಡರ ಕುಟುಂಬದ ಮೂರನೆ ತಲೆಮಾರಿನ ರಾಜಕೀಯ ರಂಗ ಪ್ರವೇಶಕ್ಕೆ ವೇದಿಕೆ ಸಜ್ಜಾಗುತ್ತಿದೆ. ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭ ದಲ್ಲಿಯೇ ದೇವೇಗೌಡರು ತಮ್ಮ ಮೊಮ್ಮಗ ಪ್ರಜ್ವಲ್‌ ರೇವಣ್ಣ ಅವರನ್ನು ಲೋಕಸಭೆಗೆ ಕಳುಹಿಸುವ ಅಭಿಲಾಷೆ ವ್ಯಕ್ತಪಡಿಸಿದ್ದರು. ಅಂದಿನಿಂದಲೇ ಪ್ರಜ್ವಲ್‌ ರೇವಣ್ಣರ ರಾಜಕಾರಣದ ರಂಗಪ್ರವೇಶಕ್ಕೆ ಗೌಡರ ಕುಟುಂಬದಲ್ಲಿ ವ್ಯವಸ್ಥಿತ ಸಿದ್ಧತೆ ನಡೆಯುತ್ತಲೇ ಬಂದಿದೆ.

Advertisement

ರಾಜಕೀಯ ಬಲಾಬಲ
8 ವಿಧಾನಸಭಾ ಕ್ಷೇತ್ರವ್ಯಾಪ್ತಿಯ ಹಾಸನ ಲೋಕಸಭಾ ಕ್ಷೇತ್ರದಲ್ಲಿ 6 ಮಂದಿ ಜೆಡಿಎಸ್‌ ಶಾಸಕರು, ಇಬ್ಬರು ಬಿಜೆಪಿ ಶಾಸಕರಿದ್ದಾರೆ. ಕಾಂಗ್ರೆಸ್‌ನಿಂದ ವಿಧಾನ ಪರಿಷತ್‌ ಸದಸ್ಯರಿದ್ದಾರೆ. ಹಾಸನ ಮತ್ತು ಕಡೂರು ವಿಧಾನಸಭಾ ಕ್ಷೇತ್ರಗಳನ್ನು ಬಿಜೆಪಿ ಶಾಸಕರು ಪ್ರತಿನಿಧಿಸುತ್ತಿದ್ದಾರೆ.

ರಾಜಕೀಯ ಬಲಾಬಲ
8 ವಿಧಾನಸಭಾ ಕ್ಷೇತ್ರವ್ಯಾಪ್ತಿಯ ಹಾಸನ ಲೋಕಸಭಾ ಕ್ಷೇತ್ರದಲ್ಲಿ 6 ಮಂದಿ ಜೆಡಿಎಸ್‌ ಶಾಸಕರು, ಇಬ್ಬರು ಬಿಜೆಪಿ ಶಾಸಕರಿದ್ದಾರೆ. ಕಾಂಗ್ರೆಸ್‌ನಿಂದ ವಿಧಾನ ಪರಿಷತ್‌ ಸದಸ್ಯರಿದ್ದಾರೆ. ಹಾಸನ ಮತ್ತು ಕಡೂರು ವಿಧಾನಸಭಾ ಕ್ಷೇತ್ರಗಳನ್ನು ಬಿಜೆಪಿ ಶಾಸಕರು ಪ್ರತಿನಿಧಿಸುತ್ತಿದ್ದಾರೆ.

ಬಿಜೆಪಿ ಅಸ್ತ್ರ
ಬಿಜೆಪಿಯ ರಾಜಕೀಯ ಬಲ, ಜೆಡಿಎಸ್‌ ಜೊತೆ ಮೈತ್ರಿ ಒಪ್ಪದ ಮನ ಸ್ಥಿತಿಯ ಕಾಂಗ್ರೆಸ್‌ ಕಾರ್ಯಕರ್ತರ ಬೆಂಬಲ,
ದೇವೇಗೌಡರ ಕುಟುಂಬದ ರಾಜಕಾರಣದಿಂದ ಬೇಸರಗೊಂಡಿರುವ ಜೆಡಿಎಸ್‌ನೊಳಗಿನ ಅಸಮಾಧಾನದ ಲಾಭಪಡೆಯುವ ಯತ್ನ ನಡೆಸಿರುವ ಎ.ಮಂಜು ಅವರು, ದೇವೇಗೌಡರ ಕುಟುಂಬ ರಾಜಕಾರಣವನ್ನೇ ಚುನಾವಣಾ ಅಸ್ತ್ರ ಮಾಡಿ ಕೊಂಡಿ ದ್ದಾರೆ. ಜೊತೆಗೆ, ಮೋದಿಯ ಅಭಿವೃದ್ಧಿಪರ ಕೆಲಸಗಳು ಬಿಜೆಪಿಗೆ ಪ್ಲಸ್‌ ಪಾಯಿಂಟ್‌.

ಜೆಡಿಎಸ್‌ ಚುನಾವಣಾ ಅಸ್ತ್ರ

Advertisement

ಈ ಎಲ್ಲ ರಾಜಕೀಯ ಬೆಳವಣಿಗೆಗಳನ್ನು ಗಮನಿಸುತ್ತಲೇ ಜೆಡಿಎಸ್‌ ಮುಖಂಡರು ಕ್ಷೇತ್ರದಲ್ಲಿ ನೆಲೆ ಭದ್ರಪಡಿಸಿಕೊಂಡಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಡಿ.ರೇವಣ್ಣ ಅವರು ಅಭಿವೃದ್ಧಿಯ ಮಂತ್ರದಂಡ ಹಿಡಿದು ಚುನಾವಣೆ ಎದುರಿಸಲು ಸಜ್ಜಾಗಿದ್ದಾರೆ. ಜಿಲ್ಲೆಯಲ್ಲಿ 10 ವರ್ಷಗಳ ಅಭಿವೃದ್ಧಿಯ ಬರವನ್ನು ಕಳೆದ 9 ತಿಂಗಳಲ್ಲಿ ನೀಗಿಸುವಷ್ಟು ಸುಮಾರು 3 ಸಾವಿರ ಕೋಟಿ ರೂ.ಗೂ ಹೆಚ್ಚು ಅಂದಾಜಿನ ಯೋಜನೆಗಳಿಗೆ ಮಂಜೂರಾತಿ ಪಡೆದು ವಿರೋಧಿಗಳ ಬಾಯಿ ಮುಚ್ಚಿಸಿದ್ದಾರೆ. ವಿರೋಧಿಗಳು ಪ್ರಯೋಗಿಸಲಿರುವ ಕುಟುಂಬ ರಾಜಕಾರಣದ ಅಸಸ್ತ್ರದ ಎದುರು ಅಭಿವೃದ್ಧಿ ಯ ಅಸ್ತ್ರ ಬಳಸಲು ಸಜ್ಜಾಗಿದ್ದಾರೆ. ಹಾಸನ ಕ್ಷೇತ್ರ ವ್ಯಾಪ್ತಿಯ ಕಡೂರು ವಿಧಾನಸಭಾ ಕ್ಷೇತ್ರದಲ್ಲೂ ಜೆಡಿಎಸ್‌ ನೆಲೆಗೆ ನೀರೆರೆಯುವ ಪ್ರಯತ್ನ ಮಾಡಿದ್ದು, ಜಿಲ್ಲೆಯಲ್ಲಿರುವ ಜೆಡಿಎಸ್‌ ಬಲದಿಂದ ಮಗನಿಗೆ ದೆಹಲಿಯತ್ತ ದಾರಿ ಮಾಡಿಕೊಡುವ ಎಲ್ಲಾ ಸಿದಟಛಿತೆ ಮಾಡಿಕೊಂಡಿದ್ದಾರೆ. ಇನ್ನು, ಸಂಸದರ ಕ್ಷೇತ್ರಾಭಿವೃದಿಟಛಿ ನಿಧಿಯಡಿ, ಕಳೆದ 5 ವರ್ಷಗಳ ಅವಧಿಯಲ್ಲಿ 25 ಕೋಟಿ ರೂ.ಗಳಲ್ಲಿ 24.50 ಕೋಟಿ ರೂ.ಬಳಕೆಗೆ ಶಿಫಾರಸು ಮಾಡಲಾಗಿದೆ.

ಬಿಜೆಪಿ ಸೇರಿದ ಎ.ಮಂಜು
ಹಾಸನ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ಸಮರ್ಥ ಅಭ್ಯರ್ಥಿಯ ಕೊರತೆ ಇದೆ. ಇದರ ಲಾಭ ಪಡೆಯುವ
ಪ್ರಯತ್ನವನ್ನು ಕಾಂಗ್ರೆಸ್‌ ಮುಖಂಡ, ಮಾಜಿ ಸಚಿವ ಎ.ಮಂಜು ಅವರು ಮಾಡುತ್ತಲೇ ಇದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅರಕಲಗೂಡು ಕ್ಷೇತ್ರದಲ್ಲಿ ಸೋಲು ಅನುಭವಿಸಿದ ನಂತರ ಅತಂತ್ರರಾಗಿರುವ ಎ.ಮಂಜು, ದೇವೇಗೌಡರ ಕುಟುಂಬದ ರಾಜಕೀಯ ವೈರಿಯೆಂದು ಗುರ್ತಿಸಿಕೊಂಡು ರಾಜಕೀಯ ಅಸ್ತಿತ್ವ ಪಡೆಯುವ ಪ್ರಯತ್ನ ಮಾಡುತ್ತಲೇ ಬಂದಿದ್ದಾರೆ. 2014ರ ಲೋಕಸಭಾ ಚುನಾವಣೆಯಲ್ಲಿ ದೇವೇಗೌಡರೆದುರು ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲು ಅನುಭವಿಸಿದರೂ ಕ್ಷೇತ್ರದಲ್ಲಿ ರಾಜಕೀಯ ಜಾಲ ರೂಪಿಸಿಕೊಂಡಿರುವ ಅವರು, ಈಗ ಬಿಜೆಪಿ ಸೇರಿದ್ದಾರೆ. ಮೇಲ್ನೋಟಕ್ಕೆ ಸಿ.ಟಿ.ರವಿ, ಶಾಸಕ ಪ್ರೀತಂ ಜೆ.ಗೌಡ ಅವರ ಹೆಸರನ್ನು ತೇಲಿ ಬಿಟ್ಟರೂ ಬಿಜೆಪಿಯವರು ಮಂಜು ಅವರನ್ನು ಸ್ವಾಗತಿಸಿ, ಪ್ರಜ್ವಲ್‌ ಎದುರು ಸೆಣಸಲು ವೇದಿಕೆ ಸಿದ್ದಗೊಳಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next