Advertisement

ಮೋದಿಗೆ ಯಾರಾದರೂ ಐ ಲವ್‌ ಯೂ ಎಂದದ್ದುಂಟಾ? ಮೇವಾನಿ

04:36 PM Feb 14, 2018 | Team Udayavani |

ಹೊಸದಿಲ್ಲಿ : ದಲಿತ ಕಾರ್ಯಕರ್ತ ಮತ್ತು ಗುಜರಾತ್‌ನ ಪಕ್ಷೇತರ ಶಾಸಕ ಜಿಗ್ನೇಶ್‌ ಮೇವಾನಿ ಅವರಿಂದು  ಎಲ್ಲರಿಗೂ ವ್ಯಾಲೆಂಟೈನ್‌ ದಿನದ ಶುಭಾಶಯಗಳನ್ನು ಟ್ವಿಟರ್‌ ನಲ್ಲಿ ಕೋರಿದರು. 

Advertisement

ಈ ಸಂದರ್ಭದಲ್ಲಿ ಒಂದು ಸಂದೇಹ ವ್ಯಕ್ತಪಡಿಸಿದ ಮೇವಾನಿ, ಯಾರಾದರೂ ಎಂದಾದರೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಐ ಲವ್‌ ಯೂ ಎಂದು ಹೇಳಿದ್ದಿದೆಯಾ ಎಂದು ಪ್ರಶ್ನಿಸಿದರು. 

ಅನೇಕಾನೇಕ ಜನರು ನನಗೆ ಐ ಲವ್‌ ಯೂ ಎಂದು ಹೇಳಿದ್ದುಂಟು. ಆದರೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಯಾರಾದರೂ ಹಾಗೆ ಹೇಳಿದ್ದುಂಟಾ ಎಂದು ಮೇವಾನಿ ವ್ಯಂಗ್ಯವಾಡಿದರು. 

ಇದೇ ವೇಳೆ ಮೇವಾನಿ ಅವರು ಇದೀಗ ವೈರಲ್‌ ಆಗಿರುವ ಮಲಯಾಳಂ ನಟಿ ಪ್ರಿಯಾ ಪ್ರಕಾಶ್‌ ವಾರಿಯರ್‌ ಅವರ ಮಾಣಿಕ್ಯ ಮಲರಾಯ ಪೂವಿ ಚಿತ್ರದ ಹಾಡನ್ನು ಟ್ವೀಟ್‌ ಮಾಡಿದರು. 

Advertisement

Udayavani is now on Telegram. Click here to join our channel and stay updated with the latest news.

Next