Advertisement

ಜಾನುವಾರಿಗೂ ಅತಿಥಿಗೃಹ

07:10 AM Oct 23, 2017 | Harsha Rao |

ಚಂಡೀಗಢ: ತಮ್ಮದೇ ಜಾನುವಾರಿನ ಹಾಲು ಸೇವಿಸಲು ಬಯಸುವ ನಗರದ ಜನರಿಗಾಗಿ ಹರ್ಯಾಣ ಸರಕಾರ ವಿಶಿಷ್ಟ ಯೋಜನೆ ಯೊಂದನ್ನು ರೂಪಿಸಿದೆ. ಅದೇನೆಂದರೆ, “ಜಾನುವಾರುಗಳ ಪಿಜಿ’! ಜಾನುವಾರು ಗಳಿಗಾಗಿಸರಕಾರ ಅತಿಥಿ ಗೃಹ (ಪೇಯಿಂಗ್‌ ಗೆಸ್ಟ್‌ ಹೌಸ್‌) ನಿರ್ಮಿಸಲಿದೆ. ಇದಕ್ಕಾಗಿ ನಗರದ ಸಮೀಪದಲ್ಲಿ 50 ರಿಂದ 100 ಎಕರೆ ಜಾಗವನ್ನು ಮೀಸಲಿಡಲು ನಿರ್ಧರಿಸಲಾಗಿದೆ ಎಂದು ಹರಿಯಾಣದ ಪಶು ಸಂಗೋಪನಾ ಸಚಿವ ಒ.ಪಿ.ಧನಕರ್‌ ಹೇಳಿದ್ದಾರೆ.

Advertisement

ನಗರದ ಸಮೀಪ ಭೂಮಿಯನ್ನು ಹೈನು ಗಾರಿಕೆಗಾಗಿ ಮೀಸಲಿಡಲಾಗುತ್ತದೆ. ಇದರಲ್ಲಿ ಎರಡು ವಿಭಾಗಗಳನ್ನು ಮಾಡಲಾಗುತ್ತದೆ. ಒಂದು ವಿಭಾಗದಲ್ಲಿ ಸಾಂಪ್ರದಾಯಿಕವಾದ ಜಾನುವಾರು ಸಾಕಣೆ ಮತ್ತು ಹೈನೋದ್ಯಮ ನಡೆಸಲಾಗುತ್ತದೆ. ಇನ್ನೊಂದು ಭಾಗವನ್ನು ನಗರದ ಜನರಿಗಾಗಿ ಮೀಸಲಿಡಲಾಗುತ್ತದೆ. ಶುದ್ಧ ಹಾಗೂ ಗುಣಮಟ್ಟದ ಹಾಲು ಸೇವಿಸಲು ಬಯಸುವ ನಗರದ ಜನರು, ಇಲ್ಲಿ ಬಂದು ಜಾನುವಾರು ಖರೀದಿಸಿ ಸಲಹ ಬಹುದು. ಇದಕ್ಕಾಗಿ ಜನರನ್ನು ನೇಮಿಸಲಾ ಗುತ್ತದೆ. ತಮ್ಮ ಆಕಳಿನ ಆರೋಗ್ಯ ಹಾಗೂ ಚಟುವಟಿಕೆಯನ್ನು ತಂತ್ರಜ್ಞಾನದ ಸಹಾಯ ದಿಂದ ಮನೆಯಲ್ಲಿಯೇ ಕೂತು ಗಮನಿಸಬ ಹುದು. ರಾಜ್ಯದಲ್ಲಿ ಹಾಲು ಉತ್ಪಾದನೆಯನ್ನು ಹೆಚ್ಚಿಸಲು ಇದು ಉತ್ತಮ ವಿಧಾನವಾಗಿರಲಿದೆ ಎಂದು ಸಚಿವ ಧನಕರ್‌ ಹೇಳಿದ್ದಾರೆ.

ಹರಿಯಾಣದಲ್ಲಿ ಸದ್ಯ ಹಾಲು ನೀಡುವ 36 ಲಕ್ಷ ಜಾನುವಾರುಗಳಿದ್ದು, ಇವುಗಳಿಂದ 2.24 ಕೋಟಿ ಲೀ. ಹಾಲು ಲಭ್ಯ ವಾಗುತ್ತಿದೆ. ಈಗ ಕೃಷಿ ವಲಯವು ಸೇವಾ ವಲಯವಾಗಿ ಪರಿವರ್ತನೆಯಾಗ ಬೇಕಿದೆ. 50 ಜಾನು ವಾರು ಗಳನ್ನು ಹೊಂದಿರುವ ಹೈನೋದ್ಯಮ ಘಟಕ ಸ್ಥಾಪಿಸಲುಸರಕಾರ ಬಡ್ಡಿ ರಹಿತ ಸಾಲ ನೀಡು ತ್ತಿದೆ ಎಂದು ಧನಕರ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next