Advertisement
ಸರಕಾರ ಬೀಳಿಸುವಷ್ಟು ಸಂಖ್ಯಾಬಲ ಇದ್ದರೆ ನಿಮ್ಮ ಪರವಿರುವ ಶಾಸಕರನ್ನು ರಾಜ್ಯಪಾಲರ ಮುಂದೆ ಹಾಜರುಪಡಿಸಿ. ವಿಶ್ವಾಸಮತ ಸಾಬೀತುಪಡಿಸಲು ನಮಗೆ ಯಾವ ಭಯವೂ ಇಲ್ಲ ಎಂದು ಹೇಳಿ ದ್ದಾರೆ. ಮಾರ್ಚ್‌ನಲ್ಲೇ ನಮ್ಮ ಸರಕಾರ ವಿಶ್ವಾಸಮತ ಪಡೆದುಕೊಂಡಿದೆ. ಭವಿಷ್ಯ ದಲ್ಲಿ ಯಾವಾಗ ವಿಶ್ವಾಸ ಮತ ಸಾಬೀತು ಪಡಿಸಬೇಕಾದ ಸಮಯ ಬರುತ್ತದೋ ಆಗ ನಾವು ಮತ್ತೆ ವಿಶ್ವಾಸಮತ ಪಡೆಯುತ್ತೇವೆ ಎಂದಿದ್ದಾರೆ.ಮೂವರು ಪಕ್ಷೇತರ ಶಾಸಕರು ಸರಕಾರಕ್ಕೆ ಬೆಂಬಲ ವಾಪಸ್ ಪಡೆದ ಬಳಿಕ ಬಿಜೆಪಿ ಬಹುಮತ ಕಳೆದು ಕೊಂಡಿದೆ. ಹಾಗಾಗಿ ಸರಕಾರವನ್ನು ಅನೂರ್ಜಿತಗೊಳಿಸಿ, ರಾಷ್ಟ್ರಪತಿ ಆಡಳಿತ ತಂದು ಹರಿಯಾಣದಲ್ಲಿ ಹೊಸದಾಗಿ ಚುನಾವಣೆ ನಡೆಸಬೇಕು ಎಂದು ಕಾಂಗ್ರೆಸ್ ಆಗ್ರಹಿಸಿತ್ತು.