Advertisement

ಹ್ಯಾರಿಸ್‌ ಪುತ್ರನ ಗೂಂಡಾಗಿರಿ:ಬಿಜೆಪಿ ಹೋರಾಟಕ್ಕೆ ಹೊಸ ಅಸ್ತ್ರ

01:41 PM Feb 18, 2018 | Team Udayavani |

ಬೆಂಗಳೂರು: ಚುನಾವಣೆಗೆ ಕೆಲವೇ ದಿನಗಳಿರುವ ವೇಳೆ ಕಾಂಗ್ರೆಸ್‌ನ ಪ್ರಭಾವಿ ಶಾಸಕ ಹ್ಯಾರಿಸ್‌ ಪುತ್ರ ಮಹಮದ್‌ ನಲಪಾಡ್‌ ಬೆಂಬಲಿಗರೊಂದಿಗೆ ಯುವಕನೊಬ್ಬನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವುದು ವಿಪಕ್ಷ ಬಿಜೆಪಿಯ ಸರಕಾರದ ವಿರೋಧಿ ಹೋರಾಟಕ್ಕೆ ಹೊಸ ಅಸ್ತ್ರವಾಗಿ ಪರಿಣಮಿಸಿದೆ.

Advertisement

ಹಲ್ಲೆ ಖಂಡಿಸಿ ಬಿಜೆಪಿಯ ನೂರಾರು ಕಾರ್ಯಕರ್ತರು ಕಬ್ಬನ್‌ ಪಾರ್ಕ್‌ ಪೊಲೀಸ್‌ ಠಾಣೆಯ ಎದುರು ಪ್ರತಿಭಟನೆ ನಡೆಸಿದ್ದು, ಮಹಮದ್‌ ನಲಪಾಡ್‌ನ‌ನ್ನು ಕೂಡಲೇ ಬಂಧಿಸಬೇಕು ಎಂದು ಘೋಷಣೆಗಳನ್ನು ಕೂಗಿದ್ದಾರೆ. 

ಪಕ್ಷಕ್ಕಾಗುವ ಮುಜುಗರವನ್ನು ತಪ್ಪಿಸಲು, ಬಿಜೆಪಿ ನಾಯಕರ ಬಾಯಿ ಮುಚ್ಚಿಸುವ ಸಲುವಾಗಿ ಕಾಂಗ್ರೆಸ್‌ ಈಗಾಗಲೇ ನಲಪಾಡ್‌ನ‌ನ್ನು ಯುವ ಕಾಂಗ್ರೆಸ್‌ನ ಬೆಂಗಳೂರು ಘಟಕದ ಪ್ರಧಾನ ಕಾರ್ಯದರ್ಶಿ ಹುದ್ದೆ ಮತ್ತು ಪ್ರಾಥಮಿಕ ಸದಸ್ಯತ್ವದಿಂದ  ಉಚ್ಛಾಟನೆ ಮಾಡಿದೆ.

ತಪ್ಪು ಯಾರು ಮಾಡಿದರೂ ತಪ್ಪೆ, ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳುವುದಾಗಿ ಗೃಹ ಸಚಿವ ರಾಮಲಿಂಗಾ ರೆಡ್ಡಿ ಪ್ರತಿಕ್ರಿಯೆ ನೀಡಿದ್ದಾರೆ

ಎಲ್ಲಾ ಗಿಮಿಕ್‌, ನಾಟಕ 
ಹುಬ್ಬಳ್ಳಿಯಲ್ಲಿ  ನಲಪಾಡ್‌ ಉಚ್ಛಾಟನೆ ಕುರಿತು ಪ್ರತಿಕ್ರಿಯೆ ನೀಡಿರುವ ವಿಧಾನಸಭೆ ವಿಪಕ್ಷ ನಾಯಕ ಜಗದೀಶ್‌ ಶೆಟ್ಟರ್‌ ಉಚ್‌ಛಾಟನೆ ಎಲ್ಲಾ ನಾಟಕ. ಚುನಾವಣೆ ವೇಳೆ ಮಾಡಿರುವ ಗಿಮಿಕ್‌. ಕೆಲವೇ ದಿನಗಳಲ್ಲಿ ಪಕ್ಷಕ್ಕೆ ಮತ್ತೆ ಸೇರಿಸಿಕೊಳ್ಳುತ್ತಾರೆ ಎಂದರು. 

Advertisement

ಶನಿವಾರ ರಾತ್ರಿ ಯುಬಿ ಸಿಟಿಯ ರೆಸ್ಟೊರೆಂಟ್‌ನಲ್ಲಿ ಕ್ಷುಲ್ಲಕ ಕಾರಣಕ್ಕೆ ಯುವಕನೊಬ್ಬನ ಮೇಲೆ ನಲಪಾಡ್‌ ಮತ್ತು ಆತನ ಹತ್ತಕ್ಕೂ ಹೆಚ್ಚು ಸ್ನೇಹಿತರು ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಬಗ್ಗೆ ಆರೋಪಿಸಲಾಗಿದೆ.

ಹಲ್ಲೆಗೊಳಗಾಗಿ ಗಂಭೀರವಾಗಿ ಗಾಯಗೊಂಡಿರುವ ವಿದ್ವತ್‌ ಎಂಬ ವಿದ್ಯಾರ್ಥಿ ಇದೀಗ ಮಲ್ಯ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಿದ್ವತ್‌ನ ಸಹಾಯಕ್ಕೆ ಬಂದ ಸಹೋದರ ಸಾತ್ವಿಕ್‌ ಮೇಲೂ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next